Samsung Galaxy S23 ಆವಿಷ್ಕಾರದಲ್ಲಿ ಬೆಂಗಳೂರು ಯುವಕರ ಕೈಚಳಕ – ಈ ಪರಿಸರ ಸ್ನೇಹಿ ಮೊಬೈಲ್ ಫೀಚರ್ಸ್ ಹೇಗಿದೆ ಗೊತ್ತಾ?

Samsung Galaxy S23 ಆವಿಷ್ಕಾರದಲ್ಲಿ ಬೆಂಗಳೂರು ಯುವಕರ ಕೈಚಳಕ – ಈ ಪರಿಸರ ಸ್ನೇಹಿ ಮೊಬೈಲ್ ಫೀಚರ್ಸ್ ಹೇಗಿದೆ ಗೊತ್ತಾ?

ನ್ಯೂಸ್ ಆ್ಯರೋ : ಮೊಬೈಲ್ ಫೋನ್‌ಗಳನ್ನು ಇಂದಿನ ದಿನಗಳಲ್ಲಿ ಬಳಸದವರೇ ಇಲ್ಲ. ಹೆಚ್ಚಾಗಿ ಈ ಸ್ಮಾರ್ಟ್ಫೋನ್ ಉತ್ಪಾದನಾ ಕಂಪೆನಿಗಳು ಅಥವಾ ಅಲ್ಲಿ ಪ್ರಮುಖ ಪಾತ್ರ ವಹಿಸುವವರು ವಿದೇಶಿಗರೇ ಆಗಿರುತ್ತಾರೆ. ಆದರೆ ಇದೀಗ, ಬಿಡುಗಡೆಯಾಗಿ ಗ್ರಾಹಕರಿಂದ ವಿಶ್ವಾಸಾರ್ಹ ಸ್ಮಾರ್ಟ್ಫೋನ್ ಎನಿಸಿಕೊಂಡಿರುವ Samsung Galaxy S23 ಎಂಬ ಪರಿಸರ ಸ್ನೇಹಿ ಮೊಬೈಲ್ ತಯಾರಿಕೆಯಲ್ಲಿ ಬೆಂಗಳೂರಿನ ಯುವಕರ ಕೈಚಳಕವಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಈ ಸ್ಮಾರ್ಟ್ಫೋನ್ ಬಗೆಗಿನ‌ ಕಂಪ್ಲೀಟ್ ಡೀಟಿಯಲ್ಸ್ ಇಲ್ಲಿದೆ ನೋಡಿ.

Samsung Galaxy S23 ಸರಣಿಯ ತಯಾರಿಕೆಯಲ್ಲಿ ತೊಡಗಿರುವ ಬೆಂಗಳೂರಿನ ಸ್ಯಾಮ್ಸಂಗ್ ಆರ್ ಅಂಡ್ ಡಿ ಇನ್ಸ್ಟಿಟ್ಯೂಟ್ ನ ಯುವ ಎಂಜಿನಿಯರ್ ಗಳು ಈ ಸ್ಮಾರ್ಟ್ಫೋನ್ ಕ್ಯಾಮೆರಾದಲ್ಲಿನ ಪ್ರಮುಖ ವೈಶಿಷ್ಟ್ಯಗಳ ಅಭಿವೃದ್ಧಿ, ಬಹು ಸಾಧನದ ಅನುಭವ, ಎಐ ಹಾಗೂ ಇತರೆ ಸೇವೆಗಳ ಅಭಿವೃದ್ಧಿಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರಿನ ಸ್ಯಾಮ್‌ಸಂಗ್ ಆರ್ ಅಂಡ್ ಡಿ ಇನ್‌ಸ್ಟಿಟ್ಯೂಟ್‌ನ ಸಿಟಿಒ ಮೋಹನ್ ರಾವ್ ಗೋಲಿ, ‘ನಮ್ಮ ನೂತನ ಆವಿಷ್ಕಾರಗಳು ಯುವ ಗ್ರಾಹಕರಿಂದ ಸ್ಫೂರ್ತಿ ಪಡೆದಿವೆ. ಅವರ ಕುತೂಹಲ ಮತ್ತು ನಮ್ಮ ತಜ್ಞರ ಪರಿಣತಿ ಹಾಗೂ ಕೌಶಲ್ಯಗಳು ಸೇರಿ ಸ್ಮಾರ್ಟ್‌ಫೋನ್ ಕ್ಯಾಮೆರಾಗಳು, 5G ಮತ್ತು ಬಹು-ಸಾಧನದ ಅನುಭವದಲ್ಲಿ ಪ್ರಗತಿಯ ತಂತ್ರಜ್ಞಾನವನ್ನು ಸಾಧಿಸಲು ನಮಗೆ ಸಾಧ್ಯವಾಯಿತು. Galaxy S23 ಸರಣಿಯು ಖಂಡಿತಾ ನಮ್ಮ ಗ್ರಾಹಕರನ್ನು ಸಂತೋಷಪಡಿಸುತ್ತದೆ ಮತ್ತು ಹೊಸ ಹುರುಪು ನೀಡುತ್ತದೆ’ ಎಂದಿದ್ದಾರೆ.

S23 ಸರಣಿಯ ಕ್ಯಾಮೆರಾ ಹೇಗಿದೆ ಗೊತ್ತಾ?

ಈ S23 ಸರಣಿಯ ಸ್ಮಾರ್ಟ್ಫೋನ್ ನಲ್ಲಿ ಅತ್ಯದ್ಭುತ ಮಾದರಿಯ ಕ್ಯಾಮೆರಾಗಳನ್ನು‌ ಅಳವಡಿಸಲಾಗಿದೆ. ಇದರಲ್ಲಿ ಪ್ರೋ-ಗ್ರೇಡ್ ಸರಣಿಯ ಎಐ ಕ್ಯಾಮರಾ ಸಿಸ್ಟಂ ಇದ್ದು, ಕಡಿಮೆ‌ ಬೆಳಕಿನಲ್ಲೂ ಅತ್ಯದ್ಭುತ ಚಿತ್ರ ಹಾಗೂ ವಿಡಿಯೋಗಳನ್ನು‌ ಸೆರೆ ಹಿಡಿಯಬಹುದಾಗಿದೆ. ನುರಿತ ಎಂಜಿನಿಯರ್ ಗಳು ಹಾಗೂ ತಂತ್ರಜ್ಞರ ಒಗ್ಗೂಡುವಿಕೆಯಿಂದ ತಯಾರಾಗಿರುವ ಈ ಸ್ಮಾರ್ಟ್ಫೋನ್ ನಲ್ಲಿ ಸ್ಪರ್ಧಾತ್ಮಕ ಫೋಟೊಗ್ರಫಿ ಮತ್ತು ವಿಷನ್‌ ಎಐ ತಂತ್ರಜ್ಞಾನ ನೀಡಲು ಶ್ರಮ ವಹಿಸಲಾಗಿದೆ. ನೈಟೋಗ್ರಫಿ, ಪ್ರೋ ಗ್ರೇಡ್ ವಿಡಿಯೊ, ಹೈ ರೆಸಲ್ಯೂಶನ್ ಎಚ್‌ಡಿಆರ್‌ ಮತ್ತು ಆಸ್ಟ್ರೊ ಫೋಟೊಗ್ರಫಿ ಇದರಲ್ಲಿ ಅಳವಡಿಸಲಾಗಿದ್ದು ಗ್ರಾಹಕರನ್ನು‌ ಸೆಳೆಯುತ್ತದೆ.

ಇನ್ನುಳಿದಂತೆ, ಈ‌ ಸ್ಮಾರ್ಟ್ಫೋನ್ ಬಳಕೆದಾರರಿಗೆ ಬಹು ಸಾಧನದ ಅನುಭವದೊಂದಿಗೆ ವರ್ಧಿತ ಸಂಪರ್ಕ ಮತ್ತು ಗ್ರಾಹಕೀಕರಣವನ್ನು ನೀಡುತ್ತದೆ. ಜೊತೆಗೆ SRI-B ಅಭಿವೃದ್ಧಿಪಡಿಸಿದ ಸ್ಮಾರ್ಟ್ ಲೈಟಿಂಗ್ ಸೇವೆಯು ಬಳಕೆದಾರರ ವೈಯಕ್ತಿಕ ಅನುಕೂಲವನ್ನು ಕೇಂದ್ರೀಕರಿಸುತ್ತದೆ. ಇದಿಷ್ಟೇ ಅಲ್ಲದೆ ಈ ಸ್ಮಾರ್ಟ್ಫೋನ್ ಪರಿಸರ ಸ್ನೇಹಿಯಾಗಿದ್ದು ಇದರಿಂದ ಪರಿಸರಕ್ಕೆ ಹೆಚ್ಚಿನ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಕಂಪನಿ ಸ್ಪಷ್ಟನೆ ನೀಡಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *