ಐಪಿಎಲ್ 16ರ ಚಾಂಪಿಯನ್ ಚೆನ್ನೈಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು? – ಈ ಸೀಸನ್ ನಲ್ಲಿ ನೀಡಲಾದ ಬಹುಮಾನಗಳ ಸಂಪೂರ್ಣ ವಿವರ ಇಲ್ಲಿದೆ..

ಐಪಿಎಲ್ 16ರ ಚಾಂಪಿಯನ್ ಚೆನ್ನೈಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು? – ಈ ಸೀಸನ್ ನಲ್ಲಿ ನೀಡಲಾದ ಬಹುಮಾನಗಳ ಸಂಪೂರ್ಣ ವಿವರ ಇಲ್ಲಿದೆ..

ನ್ಯೂಸ್ ಆ್ಯರೋ‌ : ನಿಗದಿಗಿಂತ ಒಂದು ದಿನ ತಡವಾಗಿ ಐಪಿಎಲ್ 16ನೇ ಆವೃತ್ತಿಗೆ ತೆರೆ ಬಿದ್ದಿದೆ. ಹಿಂದಿನ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು 5ನೇ ಬಾರಿ ಟ್ರೋಫಿ ತನ್ನದಾಗಿಸಿಕೊಂಡಿತು.

ರವಿವಾರದಂತೆ ಸೋಮವಾರವೂ ಮಳೆ ಸ್ವಲ್ಪ ಮಟ್ಟಿಗೆ ಅಡ್ಡಿ ಉಂಟು ಮಾಡಿತಾದರೂ ಕೊನೆಗೆ ಪಂದ್ಯ ನಡೆದು 5 ಬಾರಿ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಚೆನ್ನೈ ಸರಿಗಟ್ಟಿತು.

ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಪೇರಿಸಿತ್ತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಚೆನ್ನೈ ಡಿಎಲ್‍ಎಸ್ ನಿಯಮದ ಪ್ರಕಾರ 15 ಓವರ್ ಗಳಲ್ಲಿ171 ರನ್ ಗಳಿಸಬೇಕಿತ್ತು. ಕೊನೆಯವರೆಗೂ ಕೂತೂಹಲ ಮೂಡಿಸಿದ ಪಂದ್ಯದ ಕೊನೆಯಲ್ಲಿ ಚೆನ್ನೈ ಗೆದ್ದು ಬೀಗಿತು.

ಸಂಪೂರ್ಣ ಬಹುಮಾನಗಳ ವಿವರ

  • *ಚಾಂಪಿಯನ್‌: ಸಿಎಸ್‌ಕೆ-20 ಕೋಟಿ ರೂ.
  • *ರನ್ನರ್‌ ಅಪ್: ಗುಜರಾತ್ ಟೈಟನ್ಸ್-12.5 ಕೋಟಿ ರೂ.
  • *ಆರೆಂಜ್ ಕ್ಯಾಪ್: ಶುಭಮನ್ ಗಿಲ್-890 ರನ್-10 ಲಕ್ಷ ರೂ.
  • *ಪರ್ಪಲ್ ಕ್ಯಾಪ್: ಮೊಹಮ್ಮದ್ ಶಮಿ- 28 ವಿಕೆಟ್- 10 ಲಕ್ಷ ರೂ.
  • *ಋತುವಿನ ಉದಯೋನ್ಮುಖ ಆಟಗಾರ: ಯಶಸ್ವಿ ಜೈಸ್ವಾಲ್- ಆರ್‌ಆರ್-10 ಲಕ್ಷ ರೂ.
  • *ಸೂಪರ್ ಸ್ಟ್ರೆಕರ್-ಗ್ಲೆನ್ ಮ್ಯಾಕ್ಸ್‌ವೆಲ್: ಆರ್‌ಸಿಬಿ-183.48-10 ಲಕ್ಷ ರೂ.
  • *ಅತ್ಯಂತ ಮೌಲ್ಯಯುತ ಆಟಗಾರ: ಶುಭಮನ್ ಗಿಲ್- 10 ಲಕ್ಷ ರೂ.
  • *ಗೇಮ್ ಚೇಂಜರ್- ಶುಭಮನ್ ಗಿಲ್- 10 ಲಕ್ಷ ರೂ.
  • *ಅತಿ ಹೆಚ್ಚು ಬೌಂಡರಿ: ಶುಭಮನ್ ಗಿಲ್- 85- 10 ಲಕ್ಷ ರೂ.
  • *ಅತಿ ಉದ್ದದ ಸಿಕ್ಸರ್- ಫಾಫ್ ಡು’ಪ್ಲೆಸಿಸ್: ಆರ್‌ಸಿಬಿ- 115 ಮೀಟರ್-10 ಲಕ್ಷ ರೂ.
  • *ಆವೃತ್ತಿಯ ಅದ್ಭುತ ಕ್ಯಾಚ್: ರಶೀದ್ ಖಾನ್- ಗುಜರಾತ್ ಟೈಟನ್ಸ್- 10 ಲಕ್ಷ ರೂ.
  • *ಮನರಂಜಿಸಿದ ತಂಡ- ಡೆಲ್ಲಿ ಕ್ಯಾಪಿಟಲ್ಸ್

ಫೈನಲ್ ಪಂದ್ಯದ ಪ್ರಶಸ್ತಿಗಳ ವಿವರ

  • *ಉತ್ತಮ ಸ್ಟ್ರೆಕರ್: ಅಜಿಂಕ್ಯ ರಹಾನೆ- 1 ಲಕ್ಷ ರೂ.
  • *ಗೇಮ್ ಚೇಂಜರ್: ಸಾಯಿ ಸುದರ್ಶನ್- 1 ಲಕ್ಷ ರೂ.
  • *ಮೌಲ್ಯಯುತ ಆಟಗಾರ: ಸಾಯಿ ಸುದರ್ಶನ್- 1 ಲಕ್ಷ ರೂ.
  • *ಅತಿ ಉದ್ದದ ಸಿಕ್ಸರ್: ಸಾಯಿ ಸುದರ್ಶನ್- 1 ಲಕ್ಷ ರೂ.
  • *ಅದ್ಭುತ ಕ್ಯಾಚ್: ಎಂ.ಎಸ್.ಧೋನಿ- 1 ಲಕ್ಷ ರೂ.
  • *ಪಂದ್ಯ ಶ್ರೇಷ್ಠ: ಡೆವೋನ್ ಕಾನ್ವೇ – 1 ಲಕ್ಷ ರೂ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *