IPL 2023 Final : ಐದನೇ ಬಾರಿಗೆ ಐಪಿಎಲ್ ಕಪ್ ಗೆದ್ದ ಚೆನ್ನೈ – ಕೊನೆ ಎರಡು ಎಸೆತಗಳಲ್ಲಿ ಗುಜರಾತ್ ಕೈಯಿಂದ ಜಯ ಕಸಿದ ಜಡೇಜಾ..!!

IPL 2023 Final : ಐದನೇ ಬಾರಿಗೆ ಐಪಿಎಲ್ ಕಪ್ ಗೆದ್ದ ಚೆನ್ನೈ – ಕೊನೆ ಎರಡು ಎಸೆತಗಳಲ್ಲಿ ಗುಜರಾತ್ ಕೈಯಿಂದ ಜಯ ಕಸಿದ ಜಡೇಜಾ..!!

ನ್ಯೂಸ್ ಆ್ಯರೋ : ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, ಸತತ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ಗುಜರಾತ್ ಟೈಟನ್ಸ್‌ ತಂಡದ ಕನಸು ನುಚ್ಚುನೂರಾಗಿದೆ.

ಭಾನುವಾರ ಸುರಿದ ಮಳೆಯಿಂದಾಗಿ ಫೈನಲ್ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ಆದರೆ, ಮೊದಲ ಪವರ್‌ ಪ್ಲೇನಲ್ಲಿ ದೀಪಕ್ ಚಾಹರ್ ಅವರ ಫೀಲ್ಡಿಂಗ್ ಲೋಪ ಮತ್ತು ಕಳಪೆ ಬೌಲಿಂಗ್‌ನಿಂದಾಗಿ ಗುಜರಾತ್ ತಂಡದ ಖಾತೆಗೆ ರನ್‌ಗಳು ಹರಿದವು. ಎರಡನೇ ಓವರ್‌ನಲ್ಲಿ ತುಷಾರ್ ದೇಶಪಾಂಡೆ ಎಸೆತದಲ್ಲಿ ಶುಭಮನ್ ಗಿಲ್ ಫ್ಲಿಕ್ ಮಾಡಿದ ಚೆಂಡನ್ನು ಕ್ಯಾಚ್‌ ಮಾಡುವಲ್ಲಿ ದೀಪಕ್ ವಿಫಲರಾದರು. ತಾವೇ ಹಾಕಿದ ಐದನೇ ಓವರ್‌ನಲ್ಲಿ ವೃದ್ಧಿಮಾನ್ ಸಹಾ ಅವರ ಕ್ಯಾಚ್‌ ಅನ್ನು ಪಡೆಯುವ ದೀಪಕ್ ಪ್ರಯತ್ನ ಕೈಗೂಡಲಿಲ್ಲ. ಇದರಿಂದಾಗಿ ಮೊದಲ ಏಳು ಓವರ್‌ಗಳಲ್ಲಿ 67 ರನ್‌ಗಳು ಸೇರಿದವು.

ಇದರಿಂದಾಗಿ ಜಡೇಜ ಅವರನ್ನು ಕಣಕ್ಕಿಳಿಸಿದ ಧೋನಿ ಯೋಜನೆ ಕೈಗೂಡಿತು. ಸ್ಪಿನ್ ಎಸೆತವನ್ನು ಮುಂದೆ ಹೆಜ್ಜೆ ಇಟ್ಟು ಆಡಲು ಯತ್ನಿಸಿದ ಶುಭಮನ್ ಗಿಲ್ ಅವರನ್ನು ಮಿಂಚಿನ ವೇಗದಲ್ಲಿ ಸ್ಟಂಪ್ ಮಾಡಿದ ಧೋನಿ ಮೇಲುಗೈ ಸಾಧಿಸಿದರು. ಟೂರ್ನಿಯಲ್ಲಿ ಮೂರು ಶತಕ ಮತ್ತು ಅತಿ ಹೆಚ್ಚು ರನ್ ಗಳಿಸಿರುವ ಸಾಧನೆ ಮಾಡಿರುವ ಗಿಲ್ ಔಟಾಗಿದ್ದು ಚೆನ್ನೈ ತಂಡದಲ್ಲಿ ಸಮಾಧಾನ ಮೂಡಿಸಿತು. ಆದರೆ ಕ್ರೀಸ್‌ಗೆ ಬಂದ 21 ವರ್ಷದ ಸುದರ್ಶನ್ ಬೌಲರ್‌ಗಳನ್ನು ದಂಡಿಸಿದರು.

14ನೇ ಓವರ್‌ನಲ್ಲಿ ಚಾಹರ್ ಎಸೆತವನ್ನು ಹೊಡೆಯುವ ಪ್ರಯತ್ನದಲ್ಲಿ ಧೋನಿ ಪಡೆದ ಕ್ಯಾಚ್‌ಗೆ ಸಹಾ (54; 39ಎ, 4X5, 6X1) ನಿರ್ಗಮಿಸಿದರು. ಜೊತೆಯಾಟ ಮುರಿದುಬಿತ್ತು. ಆದರೆ ಸಾಯಿ ಆಟದ ವೇಗ ಹೆಚ್ಚಾಯಿತು!

ಕೊನೆಯ ಆರು ಓವರ್‌ಗಳಲ್ಲಿ ಸುದರ್ಶನ ಅಬ್ಬರದ ಆಟದಿಂದಾಗಿ 81 ರನ್‌ಗಳು ತಂಡದ ಮೊತ್ತಕ್ಕೆ ಸೇರಿದವು. ಪಥಿರಾಣ, ತೀಕ್ಷಣ, ತುಷಾರ್ ದೇಶಪಾಂಡೆ ಅವರ ಎಸೆತಗಳನ್ನು ಸಿಕ್ಸರ್‌ಗೆ ಎತ್ತಿದ ಸುದರ್ಶನ್ ಮಿಂಚಿದರು.

204.26ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದ ಸುದರ್ಶನ್ ಆರು ಸಿಕ್ಸರ್ ಹಾಗೂ ಎಂಟು ಬೌಂಡರಿ ಬಾರಿಸಿದರು. ವೈಡ್‌ ಎಸೆತಗಳು, ಯಾರ್ಕರ್, ಸ್ವಿಂಗ್ ಎಸೆತಗಳಿಗೂ ಜಗ್ಗಲಿಲ್ಲ. ಆದರೆ ಶತಕದಂಚಿನಲ್ಲಿ ಸುದರ್ಶನ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಪಥಿರಾಣ ಸಂಭ್ರಮಿಸಿದರು. ಆದರೆ ನಿಗದಿತ ಇಪ್ಪತ್ತು ಓವರುಗಳಲ್ಲಿ ಗುಜರಾತ್ ಟೈಟಾನ್ಸ್ 4 ವಿಕೆಟ್‌ಗೆ 214 ರನ್ ಗಳಿಸಿ ಆಗಿತ್ತು.

ಮಳೆಯಿಂದಾಗಿ ಪಂದ್ಯ 12.10ಕ್ಕೆ ಆರಂಭವಾಯಿತು. 2 ಗಂಟೆಗೂ ಹೆಚ್ಚು ವಿಳಂಬದಿಂದಾಗಿ 5 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಇದರಿಂದಾಗಿ ಚೆನ್ನೈ ತಂಡ 15 ಓವರ್​ನಲ್ಲಿ 171 ರನ್​ ಟಾರ್ಗೆಟ್​ ಬೆನ್ನಟ್ಟಿತು. ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದ ರುತುರಾಜ್​ ಗಾಯಕ್ವಾಡ್​ ಮತ್ತು ಡ್ವೈನ್​ ಕಾನ್ವೆ ಭರ್ಜರಿ ಬ್ಯಾಟಿಂಗ್​ ಮೂಲಕ ತಂಡದ ಮೊತ್ತವನ್ನು ಆರಮಭದಿಂದಲೇ ಹೆಚ್ಚಿಸಿದರು. ಈ ಜೋಡಿ 74 ರನ್​ಗಳ ಜೊತೆಯಾಟವಾಡಿತು.

ಈ ವೇಳೆ ಡ್ವೈನ್ ಕಾನ್ವೆ 25 ಎಸೆತದಲ್ಲಿ 2 ಸಿಕ್ಸ್ 4 ಫೊರ್ ಮೂಲಕ 47 ರನ್ ಮತ್ತು ಗಾಯಕ್ವಾಡ್ 16 ಎಸೆತದಲ್ಲಿ 1 ಸಿಕ್ಸ್ ಮತ್ತು 3 ಫೋರ್ ಮೂಲಕ 26 ರನ್ ಗಳಿಸಿದರು. ಬಳಿಕ ಬಂದ ಅಂಜಿಕ್ಯಾ ರಹಾನೆ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಕೇವಲ 13 ಎಸೆತದಲ್ಲಿ 2 ಸಿಕ್ಸ್ 2 ಬೌಂಡರಿ ಮೂಲಕ 27 ರನ್ ಸಿಡಿಸಿ ಮೋಹಿತ್ ಶರ್ಮಾ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.

ತಮ್ಮ ಐಪಿಎಲ್ ವೃತ್ತಿಜೀವನದ ಕೊನೆಯ ಪಂದ್ಯವಾಡಿದ ಅಂಬಾಡಿ ರಾಯಡು 8 ಬಾಲ್​ನಲ್ಲಿ 2 ಸಿಕ್ಸ್ ಮತ್ತು 1 ಫೋರ್​ ಮೂಲಕ 19 ರನ್​ ಗಳಿಸಿ ಔಟ್​ ಆದರು. ಬಳಿಕ ಬಂದ ಎಂಎಸ್​ ಧೋನಿ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಧೋನಿ ಮೊದಲ ಎಸೆತದಲ್ಲಿಯೆ ಕ್ಯಾಚ್​ ನೀಡಿ ಔಟ್​ ಆಗುವ ಮೂಲಕ ಕೋಟ್ಯಾಂತರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.

ಮೋಹಿತ್ ಶರ್ಮ ಎಸೆದ ಕೊನೆಯ ಓವರ್ ಕ್ರಿಕೆಟ್‌ ಅಭಿಮಾನಿಗಳನ್ನು ಸಾಕಷ್ಟು ಕಾಲ ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು.

ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲಲು 13 ರನ್ ಬೇಕಿದ್ದರೂ ಮೊದಲ ನಾಲ್ಕು ಎಸೆತಗಳಲ್ಲಿ ಕೇವಲ ಮೂರು ರನ್ ಬಿಟ್ಟು ಕೊಟ್ಟರು. ಆದರೆ ಕೊನೆಯ ಎರಡು ಎಸೆತಗಳಲ್ಲಿ 10 ರನ್ ಅಗತ್ಯವಿದ್ದಾಗ, ರವೀಂದ್ರ ಜಡೇಜಾ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸುವ ಮೂಲಕ ಚೆನ್ನೈ ತಂಡಕ್ಕೆ ರೋಚಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *