ಕ್ರಿಕೆಟ್ ದೇವರ ಅಳಿಯನಾಗಲಿದ್ದಾನೆ ಶುಭಮನ್ ಗಿಲ್ – ಸಚಿನ್ ಪುತ್ರಿ ಸಾರಾ ಜೊತೆ ಗಿಲ್ ನಿಶ್ಚಿತಾರ್ಥ..!?

ಕ್ರಿಕೆಟ್ ದೇವರ ಅಳಿಯನಾಗಲಿದ್ದಾನೆ ಶುಭಮನ್ ಗಿಲ್ – ಸಚಿನ್ ಪುತ್ರಿ ಸಾರಾ ಜೊತೆ ಗಿಲ್ ನಿಶ್ಚಿತಾರ್ಥ..!?

ನ್ಯೂಸ್ ಆ್ಯರೋ : ಕ್ರಿಕೆಟ್ ಆಟಗಾರರು ಅಥವಾ ಸಿನಿಮಾ‌ ರಂಗದ ನಟ ನಟಿಯರ ಬಗೆಗಿನ ವದಂತಿಗಳು ಹೊಸದೆನಲ್ಲ. ಇತ್ತೀಚೆಗೆ ಕ್ರಿಕೆಟ್ ಲೋಕದ ಯುವರಾಜ ಶುಭಮನ್ ಗಿಲ್ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜೊತೆಗೆ ಪ್ರೀತಿಯಲ್ಲಿದ್ದರು ಎಂಬ ವದಂತಿ, ಜೊತೆಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಜೊತೆಗೂ ಡೇಟಿಂಗ್ ನಲ್ಲಿದ್ದರು ಎಂಬ ವಿಚಾರ ಸಾಕಷ್ಟು ಸುದ್ದಿಯಲ್ಲಿತ್ತು‌. ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಒಂದು ಮುನ್ನೆಲೆಗೆ ಬಂದಿದೆ.

ನಿನ್ನೆಯಷ್ಟೇ ಶುಭಮನ್ ಡಬಲ್ ಸೆಂಚುರಿ ಸಿಡಿಸಿ ಸಚಿನ್ ದಾಖಲೆ ಸರಿಗಟ್ಟಿದರು. ಅದೇ ಸಮಯಕ್ಕೆ ಕ್ರೀಡಾಂಗಣದ ಸುತ್ತಲಿನ ಅಭಿಮಾನಿಗಳು ಸಾರಾ, ಸಾರಾ ಎಂದು ಕೂಗಿದರು. ಇದನ್ನು ಕೇಳಿ ಗಿಲ್ ಅಭಿಮಾನಿಗಳತ್ತ ಕೈ ಬೀಸಿದ್ದರು.

ಇತ್ತೀಚೆಗಷ್ಟೆ ಕ್ರಿಕೆಟ್ ಲೋಕಕ್ಕೆ ಪರಿಚಯವಾದ ಅದ್ಭುತ ಆಟಗಾರ ಗಿಲ್, ಅತೀ ಕಡಿಮೆ‌ ಸಮಯದಲ್ಲಿ ಹಲವು ದಾಖಲೆಗಳಲ್ಲಿ ತನ್ನ ಹೆಸರು ದಾಖಲಿಸಿದ್ದಾರೆ. ಕೆಲ ತಿಂಗಳ ಹಿಂದೆ ಇದೇ ಗಿಲ್ ಸಾರಾ ಅಲಿ‌ ಖಾನ್ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿಯಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಅವರು ಕೆಲ ರೆಸ್ಟೋರೆಂಟ್ ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಸದ್ಯ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ತೊಡಗಿಸಿಕೊಂಡಿರುವ ಗಿಲ್ ನಿನ್ನೆಯ ಪಂದ್ಯದಲ್ಲಿ‌ 208 ಅಂಕಗಳೊಂದಿಗೆ ವಿಶ್ವ ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಬಾರಿಸಿದ 10 ಆಟಗಾರರಲ್ಲಿ ಸ್ಥಾನ‌ ಪಡೆದರು.

ಈ ದಾಖಲೆಗಳ ಜೊತೆಗೆ ಸಾಮಾಜಿಕ ಜಾಲತಾಣದ ತುಂಬ ಸಾಕಷ್ಟು ಮೀಮ್ ಗಳು ಹರಿದಾಡುತ್ತಿವೆ.‌ ಈ ನಡುವೆ ಒಂದು ಟ್ವೀಟ್ ಸಾಕಷ್ಟು ಸುದ್ದಿಯಲ್ಲಿದೆ‌. ಸಚಿನ್ ತೆಂಡೂಲ್ಕರ್ ತಮ್ಮ ಪುತ್ರಿ ಸಾರಾ ಜೊತೆಗೆ ಗಿಲ್ ಅವರ ನಿಶ್ಚಿತಾರ್ಥ ಮಾಡಿಸಲಿದ್ದಾರೆ ಎಂಬ ಟ್ವೀಟ್ ವೈರಲ್ ಆಗುತ್ತಿದೆ‌. ಈ ವಿಚಾರ ಕೇಳಿ ಸಾಕಷ್ಟು ಅಭಿಮಾನಿಗಳು ಹರ್ಷಗೊಂಡಿದ್ದಾರೆ. ‘ಕ್ರಿಕೆಟ್ ಲೋಕದ ಮಹಾರಾಜನಿಗೆ, ಯುವರಾಜ ಅಳಿಯನಾಗುತ್ತಿದ್ದಾನೆ’ ಎಂದು ಅಭಿಮಾನಿಗಳು ಬರೆದುಕೊಂಡಿದ್ದಾರೆ. ಆದರೆ ಈ ಟ್ವೀಟ್ ಬಗ್ಗೆ ಸಚಿನ್ ಅಥವಾ ಗಿಲ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *