Pat Cummins : IPL ಇತಿಹಾಸದಲ್ಲೇ ದುಬಾರಿ ಆಟಗಾರನಾದ ಆಸೀಸ್ ನಾಯಕ – 20 ಕೋಟಿಗೂ ಅಧಿಕ ದುಡ್ಡು ಸುರಿದ ಹೈದರಾಬಾದ್

ನ್ಯೂಸ್ ಆ್ಯರೋ ‌: ಐಪಿಎಲ್ 2024 ರ ಬಿಡ್ಡಿಂಗ್ ಪ್ರಕ್ರಿಯೆ ದುಬೈನಲ್ಲಿ ನಡೆಯುತ್ತಿದ್ದು, ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ 20.50 ಕೋಟಿ ರೂಪಾಯಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇಲಾಗುವ ಮೂಲಕ ಐಪಿಎಲ್ ನಲ್ಲಿ ದಾಖಲೆ ಬರೆದಿದ್ದಾರೆ.

ಇದಕ್ಕೂ ಮೊದಲು ಸ್ಯಾಮ್ ಕರ್ರನ್‌ 18.50 ಕೋಟಿಗೆ ಸೇಲ್ ಆಗುವ ಮೂಲಕ ದುಬಾರಿ ಆಟಗಾರನಾಗಿ ದಾಖಲೆ ಬರೆದಿದ್ದರು. ಆದರೆ ಆ ದಾಖಲೆಯನ್ನು ಇಂದು ಕಮ್ಮಿನ್ಸ್ ಮುರಿದಿದ್ದಾರೆ.

ಪ್ಯಾಟ್ ಕಮ್ಮಿನ್ಸ್ ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಜಿದ್ದಿಗೆ ಬಿದ್ದಿದ್ದವು.‌

ಆದರೆ ಕೊನೆಗೆ ಹೈದರಾಬಾದ್ ಮಾಲಕಿ ಕಾವ್ಯ ಮಾರನ್ 20.50 ಕೋಟಿ ಬಿಡ್ಡಿಂಗ್ ಮಾಡುವ ಮೂಲಕ ಕಮ್ಮಿನ್ಸ್ ಅವರನ್ನು ತಮ್ಮ ತಂಡಕ್ಕೆ ಸೆಳೆದರು. ಇತ್ತೀಚೆಗಷ್ಟೆ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದ ಕಮ್ಮಿನ್ಸ್ ಆಸ್ಟ್ರೇಲಿಯಾ ಕಪ್ ಗೆಲ್ಲಲು ಕಾರಣರಾಗಿದ್ದರು.