IPL Auction 2024 Mitchell Starc broke Cummins's record and sold to KKR for a record 24.75 crore rupees

IPL Auction 2024 : ದಾಖಲೆಯ 24.75 ಕೋಟಿಗೆ ಕೊಲ್ಕತ್ತಾ ಸೇರಿದ ಮಿಚೆಲ್ ಸ್ಟಾರ್ಕ್ – ಕಾಂಗರೂ ನಾಡಿನ ವೇಗಿಗಳ ಮೇಲೆ ಹಣದ ಹೊಳೆ ಹರಿಸಿದ ಫ್ರಾಂಚೈಸಿಗಳು..!!

ನ್ಯೂಸ್ ಆ್ಯರೋ ‌: ಐಪಿಎಲ್ 2024 ರ ಬಿಡ್ಡಿಂಗ್ ಪ್ರಕ್ರಿಯೆ ದುಬೈನಲ್ಲಿ ನಡೆಯುತ್ತಿದ್ದು, ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ 20.50 ಕೋಟಿ ರೂಪಾಯಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇಲಾಗುವ ಮೂಲಕ ಐಪಿಎಲ್ ನಲ್ಲಿ ದಾಖಲೆ ಬರೆದಿದ್ದರಾದರೂ ಕೆಲವೇ ಗಂಟೆಗಳಲ್ಲಿ ಆ ದಾಖಲೆಯನ್ನು ಆಸ್ಟ್ರೇಲಿಯಾದವರೇ ಆದ ಮಿಚೆಲ್ ಸ್ಟಾರ್ಕ್ ಮುರಿದಿದ್ದಾರೆ.

ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಬಿರುಸಿನ ಬಿಡ್ಡಿಂಗ್ ಪ್ರಕ್ರಿಯೆ ನಡೆದು ಸ್ಟಾರ್ಕ್ ಕೊನೆಗೆ 24.75 ಕೋಟಿ ಮೊತ್ತಕ್ಕೆ ಕೊಲ್ಕತ್ತಾ ತಂಡಕ್ಕೆ ಸೇಲಾಗಿದ್ದಾರೆ.

ಇಂದಿನ ಹರಾಜಿಗೂ ಮೊದಲು ಸ್ಯಾಮ್ ಕರ್ರನ್‌ 18.50 ಕೋಟಿಗೆ ಸೇಲ್ ಆಗುವ ಮೂಲಕ ದುಬಾರಿ ಆಟಗಾರನಾಗಿ ದಾಖಲೆ ಬರೆದಿದ್ದರು. ಆದರೆ ಆ ದಾಖಲೆಯನ್ನು ಇಂದು ಕಮ್ಮಿನ್ಸ್ ಮುರಿದಿದ್ದರು. ಅದಾಗಿ ಕೆಲವೇ ಗಂಟೆಗಳಲ್ಲಿ ಸ್ಟಾರ್ಕ್ ದುಬಾರಿ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಮಿಚೆಲ್ ಸ್ಟಾರ್ಕ್ ಗಾಗಿ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಜಿದ್ದಿಗೆ ಬಿದ್ದಿದ್ದವು.‌ ಆದರೆ ಕೊನೆಗೆ ಮಧ್ಯ ಪ್ರವೇಶಿಸಿದ ಕೊಲ್ಕತ್ತಾ ಎರಡೂ‌ ತಂಡಗಳನ್ನು ರೇಸ್ ನಿಂದ ಹೊರಗಟ್ಟಿತು.