ಕ್ರಿಕೆಟ್‌ಗಾಗಿ ಶಾಲೆಯನ್ನೇ ಬಿಟ್ಟಿದ್ದ ಇಶಾನ್‌ ಕಿಶನ್ – ಪಾಕೆಟ್ ಡೈನಮೈಟ್ ಇಶಾನ್ ಕ್ರಿಕೆಟ್‌ ಬದುಕಿನ ಸಕ್ಸಸ್ ಹಿಂದಿದೆ ಅಣ್ಣನ ತ್ಯಾಗ : ಹೇಗಿದ್ದ ಹೇಗಾದ ಗೊತ್ತಾ ಈ ಪೋರ?

ಕ್ರಿಕೆಟ್‌ಗಾಗಿ ಶಾಲೆಯನ್ನೇ ಬಿಟ್ಟಿದ್ದ ಇಶಾನ್‌ ಕಿಶನ್ – ಪಾಕೆಟ್ ಡೈನಮೈಟ್ ಇಶಾನ್ ಕ್ರಿಕೆಟ್‌ ಬದುಕಿನ ಸಕ್ಸಸ್ ಹಿಂದಿದೆ ಅಣ್ಣನ ತ್ಯಾಗ : ಹೇಗಿದ್ದ ಹೇಗಾದ ಗೊತ್ತಾ ಈ ಪೋರ?

ನ್ಯೂಸ್‌ ಆ್ಯರೋ : ಟೀಂ‌ ಇಂಡಿಯಾ ಪರ ಬಾಂಗ್ಲಾದೇಶ ವಿರುದ್ಧ ಏಕದಿನ ಪಾದಾರ್ಪಣೆ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದ ಇಶಾನ್ ಕಿಶನ್ ಅವರು ಟೀಂ ಇಂಡಿಯಾದ ಫ್ಯೂಚರ್‌ ಸ್ಟಾರ್‌. ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಕಾಲಿಡುವ ಮುನ್ನ ಕಲ್ಲು-ಮುಳ್ಳಿನ ಹಾದಿಯಲ್ಲಿ ಸಾಗಿದವರು. ಸಾಧನೆಯ ಹಾದಿಗಾಗಿ ಅನೇಕ ಕಷ್ಟಗಳನ್ನು ಮೆಟ್ಟಿ ನಿಂತವರು ಇಶಾನ್ ಅವರು. ಅವರ ಬಗ್ಗೆ ಕುತೂಹಲಕಾರಿ ವಿಷಯಗಳು ಇಲ್ಲಿದೆ.

ಕ್ರಿಕೆಟ್‌ಗಾಗಿ ಶಾಲೆಯನ್ನು ಬಿಟ್ಟ ಇಶಾನ್:

ಶಾಲೆಯಲ್ಲಿ ಇಶಾನ್ ಅವರಿಗೆ ಓದಿಗಿಂತ ಕ್ರಿಕೆಟ್‌ ಮೇಲೆಯೇ ಆಸಕ್ತಿ ಹೆಚ್ಚಾಗಿತ್ತು. ಈ ವಿಚಾರವಾಗಿ ಶಿಕ್ಷಕರೊಬ್ಬರು ಕ್ರಿಕೆಟ್​ ಬೇಕಾ, ಶಿಕ್ಷಣ ಬೇಕಾ ಎಂದು ಪ್ರಶ್ನಿಸಿದ್ದಕ್ಕೆ ಕ್ರಿಕೆಟ್‌ ಮುಖ್ಯ ಎಂದಿದ್ರಂತೆ. ಶಾಲೆಯನ್ನಾದ್ರೂ ಬಿಡುತ್ತೇನೆ, ಕ್ರಿಕೆಟ್ ಬಿಡಲ್ಲ ಎಂದಿದ್ದ ಇಶಾನ್ ಅವರು ಹೆಚ್ಚು ಕ್ರೀಡಾಂಗಣದಲ್ಲೇ ಸಮಯ ಕಳೆಯುತ್ತಿದ್ದರು. ಒಂದೊಮ್ಮೆ ಈ ವಿಚಾರವಾಗಿ ಶಿಕ್ಷಕರೊಬ್ಬರು ಇವರನ್ನು ಕ್ಲಾಸ್‌ನಿಂದ ಹೊರಹಾಕಿದ್ದರು.

ಅಣ್ಣನ ತ್ಯಾಗವೇ ಇಶಾನ್​ರನ್ನ ದೊಡ್ಡ ಕ್ರಿಕೆಟರನ್ನಾಗಿ ಮಾಡಿದೆ.

24 ವರ್ಷದ ವಿಕೆಟ್​ ಕೀಪರ್​​ ಯಶಸ್ಸಿನ ಹಿಂದೆ, ಅಣ್ಣನ ತ್ಯಾಗ ದೊಡ್ಡದಿದೆ. ಇಶಾನ್​ ಸಹೋದರ ರಾಜ್​ ಕಿಶನ್​​ ಸಹ ಕ್ರಿಕೆಟರ್​ ಆಗಿದ್ದರು. ಸ್ಕೂಲ್ ಗೇಮ್ಸ್ ಫೆಡರೇಶನ್‌ನ ಬಿಹಾರ ತಂಡದಲ್ಲಿ ಅಣ್ಣ ಕಿಶನ್ ಹಾಗೂ ಇಶನ್ ಇಬ್ಬರು ಆಟವಾಡುತ್ತಿದ್ದರು. ರಾಜ್ ಕಿಶನ್ ಅವರ ಓಪನರ್‌ ಆಗಿದ್ದರಿಂದ ಹೆಚ್ಚು ಅವಕಾಶಗಳು ಸಿಗುತ್ತಿತ್ತು. ಇಶಾನ್‌ಗೆ ಅವಕಾಶಗಳು ಸಿಗ್ತಿರಲಿಲ್ಲ. ಇದನ್ನರಿತ ರಾಜ್​, ಇಶಾನ್​ಗಾಗಿ ಕ್ರಿಕೆಟ್​ನಿಂದಲೇ ಹಿಂದೆ ಸರಿಯಲು ನಿರ್ಧರಿಸಿದ್ದರು. ತನಗಾಗಿ ಅಣ್ಣ ಮಾಡಿದ ತ್ಯಾಗವನ್ನು ಇಂದಿಗೂ ಇಶಾನ್‌ ಅವರು ನೆನಪಿಸಿಕೊಳ್ಳುತ್ತಾರೆ.

ಟಾಯ್ಲೆಟ್​ ತೊಳೆಯುತ್ತಿದ್ರಂತೆ, ಉಪವಾಸ ಮಲಗುತ್ತಿದ್ರಂತೆ..!

ರಾಂಚಿಯಲ್ಲಿ ನಾಲ್ವರು ಹಿರಿಯರೊಂದಿಗೆ ಕಿಶನ್​ ರೂಮ್​ ಶೇರ್​ ಮಾಡಿಕೊಂಡಿದ್ದರು. ಇಶಾನ್​ಗೆ ಅಡುಗೆ ಮಾಡಲು ಬರುತ್ತಿರಲಿಲ್ಲ. ಅದಕ್ಕಾಗಿ ರೂಮ್‌ ಸ್ವಚ್ಛವಿಡುವ ಜವಾಬ್ದಾರಿಯನ್ನು ಇಶಾನ್‌ಗೆ ವಹಿಸಲಾಗಿತ್ತು. ಇದರಿಂದ ದಿನಾಲೂ​ ಟಾಯ್ಲೆಟ್​, ಬಾತ್​ರೂಮ್​, ಮನೆ ಕ್ಲೀನಿಂಗ್ ಅನ್ನು ಇಶಾನ್ ಅವರು ಮಾಡುತ್ತಿದ್ದರು. ಕೆಲವೊಂದು ದಿನ ಉಪವಾಸ ಮಲಗಿದ ದಿನಗಳಿವೆ ಎಂದು ಅವರು ಸ್ಮರಿಸುತ್ತಾರೆ.

ಸಾವಿರ ರೂಪಾಯಿಗೆ ಬಾಡಿಗೆ ಮನೆಯಲಿದ್ದ ಇಶಾನ್:

ರಾಂಚಿಯಲ್ಲಿ ₹1 ಸಾವಿರಕ್ಕೆ ಬಾಡಿಗೆಗೆ ಮನೆ ಮಾಡಿ ಚಿಕ್ಕ ರೂಂನಲ್ಲಿ ಜೀವನ ಮಾಡಿದ್ದರು. ಅಡುಗೆ ಮಾಡಲು ಬಾರದ ಕಾರಣ ಚಿಪ್ಸ್, ತಿಂಡಿಗಳನ್ನು ಸೇವಿಸಿ ದಿನ ಕಳೆದಿದ್ರಂತೆ. ರಾತ್ರಿ, ಹಗಲು ಕ್ರಿಕೆಟ್ ಪ್ರಾಕ್ಟೀಸ್ ಮಾಡಿದ ಫಲವಾಗಿ ಇಶಾನ್ ಅವರು ಭಾರತದ ಅಂಡರ್ 19 ಕ್ಯಾಪ್ಟನ್ ಆಗಿದ್ದರು. ಬಳಿಕ ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟೂರ್ನಿ, ರಣಜಿ ಟೂರ್ನಿಗಳಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದರು.

ಸ್ನೇಹಿತರೆಂದರೆ ಇಶಾನ್‌ಗೆ ಪ್ರಾಣ

ಇಶಾನ್​ಗೆ ಸ್ನೇಹಿತರೆಂದರೆ ತುಂಬಾ ಇಷ್ಟ. ಸ್ನೇಹಿತರಿಗೆ ಏನೇ ಸಮಸ್ಯೆ ಇದ್ರೂ ಬೆನ್ನೆಲುಬಾಗಿ ನಿಂತು ಅವರಿಗೆ ಸಲಹೆಯನ್ನು ನೀಡುತ್ತಾರೆ.

ರಾಷ್ಟ್ರೀಯ ತಂಡದಲ್ಲಿ ಧೂಳೆಬ್ಬಿಸುತ್ತಿರುವ ಇಶಾನ್

ಇಶಾನ್ ಗಿಲ್‌ಕ್ರಿಸ್ಟ್, ರಾಹುಲ್ ದ್ರಾವಿಡ್ ಮತ್ತು ಎಂ.ಎಸ್.ಧೋನಿ ಅವರ ದೊಡ್ಡ ಅಭಿಮಾನಿಯಾಗಿದ್ದರು. ಹಠದಿಂದ ಕೆಲಸವನ್ನು ಸಾಧಿಸುತ್ತಿದ್ದರು. ಸಿಕ್ಕ ಅವಕಾಶವನ್ನ ಎರಡೂ ಕೈಗಳಿಂದ ಬಾಚಿಕೊಂಡ ಇಶಾನ್​, ಈಗ ರಾಷ್ಟ್ರೀಯ ತಂಡದಲ್ಲೂ ಧೂಳೆಬ್ಬಿಸ್ತಿದ್ದಾರೆ.

ಇಶಾನ್ ಅವರ ಹಠ, ಆತ್ಮವಿಶ್ವಾಸದ ಫಲ ಇಂದು ಜಗತ್ತೇ ಮೆಚ್ಚುವಂತೆ ಮಾಡಿದೆ. ಇವರ ಬೆಳವಣಿಗೆ ಬಗ್ಗೆ ತಂದೆ–ತಾಯಿ ಹೆಮ್ಮೆಯಿಂದ ಮಾತನಾಡುತ್ತಾರೆ. ಕ್ರಿಕೆಟ್‌ ಬದುಕಿನಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಲಿ ಎಂಬುದು ಎಲ್ಲರ ಆಶಯ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *