Besharam Rang : ಶಾರೂಕ್ ದೀಪಿಕಾ ಅಭಿನಯದ ಪಠಾಣ್ ಚಿತ್ರಕ್ಕೂ ಬಾಯ್ಕಾಟ್ ಬಿಸಿ‌ – ಲೈಕ್ ನಲ್ಲಿ ದಾಖಲೆ ಬರೆದ ಹಾಡು ವಿವಾದವಾಗಿದ್ದೇಕೆ..!?

Besharam Rang : ಶಾರೂಕ್ ದೀಪಿಕಾ ಅಭಿನಯದ ಪಠಾಣ್ ಚಿತ್ರಕ್ಕೂ ಬಾಯ್ಕಾಟ್ ಬಿಸಿ‌ – ಲೈಕ್ ನಲ್ಲಿ ದಾಖಲೆ ಬರೆದ ಹಾಡು ವಿವಾದವಾಗಿದ್ದೇಕೆ..!?

ನ್ಯೂಸ್ ಆ್ಯರೋ : ಬಾಲಿವುಡ್ ನ ಬಹುನಿರೀಕ್ಷಿತ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಸಾಂಗ್ ರಿಲೀಸ್ ಆಗಿದ್ದು, ರಿಲೀಸ್ ಆದ ಕೇವಲ 8 ನಿಮಿಷಕ್ಕೆ 100ಸಾವಿರ ಲೈಕ್ ಪಡೆದು ದಾಖಲೆ ಬರೆದಿದೆ. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಮೊನಾಕಿನಿ ತೊಟ್ಟು ಬಿಸಿ ಏರಿಸಿದ್ದಾರೆ. ಆದರೆ ಡಿಪ್ಪಿ ಬೋಲ್ಡ್ ಅವತಾರ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ.

ಈ ಹಾಡಿಗೆ ವಿಶಾಲ್ ಹಾಗೂ ಶೇಖರ್ ಸಂಗೀತ ನೀಡಿದ್ದು, ಕುಮಾರ್ ಲಿರಿಕ್ಸ್ ಬರೆದಿದ್ದಾರೆ. ಶಿಲ್ಪಾ ರಾವ್ ವಾಯ್ಸ್‌ನಲ್ಲಿ ಸಾಂಗ್ ಸಖತ್ ಕಿಕ್ ಕೊಟ್ಟಿದೆ. ವೈಭವಿ ಮರ್ಚೆಂಟ್ ಕೊರಿಯೋಗ್ರಫಿಯಲ್ಲಿ ‘ಬೇಷರಂ ರಂಗ್’ ಸಾಂಗ್ ಮೂಡಿ ಬಂದಿದೆ. ಸ್ಪೇನ್‌ನ ಅದ್ಭುತ ಲೊಕೇಶನ್‌ಗಳಲ್ಲಿ ಸಾಂಗ್‌ ಶೂಟ್ ಮಾಡಿದ್ದಾರೆ.

ಹಾಟ್ ನಟಿ ದೀಪಿಕಾ ಪಡುಕೋಣೆ ಬಿಕಿನಿಯಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕುಣಿದು ಕುಪ್ಪಳಿಸಿದರೆ ಶಾರುಕ್ ಸಿಕ್ಸ್‌ಪ್ಯಾಕ್ ಹ್ಯಾಬ್ಸ್ ಪ್ರದರ್ಶಿಸಿ ರಂಗೇರಿಸಿದ್ದಾರೆ. ಕೊನೆಗೆ ಇಬ್ಬರು ತಬ್ಬಿ ಹಸಿಬಿಸಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಕೆಲವರ ಬೇಸರಕ್ಕೆ ಕಾರಣವಾಗಿದೆ.

ಲೆಗ್ಪಿಟ್ ಫೆಟಿಶ್ ಹ್ಯಾಷ್ ಟ್ಯಾಗ್ ನಲ್ಲೂ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ತರಹೇವಾರಿ ಕಾಮೆಂಟ್ ಗಳ ಮೂಲಕ ನೆಟ್ಟಿಗರು ದೀಪಿಕಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಈ ಹಾಡಿನ ದೃಶ್ಯವೊಂದರಲ್ಲಿ ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದರೆ ಶಾರೂಕ್ ಖಾನ್ ಹಸಿರು ಬಟ್ಟೆ ಉಟ್ಟಿದ್ದೂ ಕೂಡ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ನಿರೀಕ್ಷೆಯ ನಿರ್ದೇಶಕ ಸಿದ್ದಾರ್ಥ್‌ ಆನಂದ್ ನಿರ್ದೇಶನದ ‘ಪಠಾಣ್’ ಚಿತ್ರದಲ್ಲಿ ಬಾಲಿವುಡ್ ನ ಹಾಟ್ ಬಾಯ್ ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿಕ್ಕಾಪಟ್ಟೆ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಆಗಿದೆ. ‘ಜೀರೋ’ ಸೋಲಿನ ನಂತರ ಶಾರುಕ್ ನಟಿಸಿರುವ ಸಿನಿಮಾ ಇದಾಗಿದೆ. ಬರೋಬ್ಬರಿ 4 ವರ್ಷಗಳ ನಂತರ ಕಿಂಗ್‌ಖಾನ್‌ನ ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಜನವರಿ 25ಕ್ಕೆ ‘ಪಠಾಣ್’ ಸಿನಿಮಾ ತೆರೆಗೆ ಬರ್ತಿದ್ದು, ತೆಲುಗು ಮತ್ತು ತಮಿಳಿಗೆ ಈ ಸಿನಿಮಾ ಡಬ್ ಕೂಡ ಆಗಲಿದೆ.

ಕೆಲ ನೆಟ್ಟಿಗರಂತೂ ಬಾಯ್ಕಾಟ್ ಪಠಾಣ್ ಅಭಿಯಾನವನ್ನೂ ಆರಂಭಿಸಿದ್ದು, ಈ ಚಿತ್ರ ಇನ್ನು ಯಾವ ರೀತಿ ಯಶಸ್ವಿಯಾಗಲಿದೆಯೋ ಕಾದು ನೋಡಬೇಕಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *