ಫುಟ್ಬಾಲ್ ಮೈದಾನದಲ್ಲೂ ‘ಕಾಂತಾರ’ ಹವಾ‌ : ಸಾಮಾಜಿಕ ಜಾಲತಾಣದಲ್ಲಿ ಮೆಸ್ಸಿ – ಮರಡೋನಾ ಫೋಸ್ಟರ್‌ ವೈರಲ್

ಫುಟ್ಬಾಲ್ ಮೈದಾನದಲ್ಲೂ ‘ಕಾಂತಾರ’ ಹವಾ‌ : ಸಾಮಾಜಿಕ ಜಾಲತಾಣದಲ್ಲಿ ಮೆಸ್ಸಿ – ಮರಡೋನಾ ಫೋಸ್ಟರ್‌ ವೈರಲ್

ನ್ಯೂಸ್ ಆ್ಯರೋ : ವಿಶ್ವದಾದ್ಯಂತ ಕಾಂತಾರ ಸಿನಿಮಾ ಮಾಡಿದ ಮೋಡಿ ವರ್ಣಿಸಲು ಅಸಾಧ್ಯವಾದದ್ದು. ಕಾಡಲ್ಲಿ ಒಂದು ಸೊಪ್ಪು ಸಿಗುತ್ತದೆ ಎಂಬ ಡೈಲಾಗ್‌ನಿಂದ ಹಿಡಿದು ದೈವದ ಕೂಗಿನ ದೃಶ್ಯದವರೆಗೆ ಅನೇಕ ವಿಡಿಯೋಗಳು ವೈರಲ್‌ ಆಗುತ್ತಿದೆ. ಈಗಾಗಲೇ ಸಿನಿಮಾದ ಹತ್ತಾರು ವಿಷಯಗಳನ್ನು ಇಟ್ಟುಕೊಂಡು ಮೀಮ್ಸ್​ ಮಾಡಲಾಗಿದೆ.

ಇದೀಗ ಫಿಫಾ ವಿಶ್ವಕಪ್ ವಿಚಾರದಲ್ಲೂ ಇದು ಮುಂದುವರಿದಿದೆ. ‘ಕಾಂತಾರ’ ಚಿತ್ರದ ಪೋಸ್ಟರ್​ ರೀತಿಯಲ್ಲಿ ಲಿಯೋನೆಲ್​ ಮೆಸ್ಸಿ ಮತ್ತು ಡಿಯಾಗೋ ಮರಡೋನಾ ಅವರ ಮೀಮ್​​ ರಚಿಸಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ​ ವೈರಲ್​ ಆಗಿದೆ.

ಕ್ಲೈಮ್ಯಾಕ್ಸ್​ ದೃಶ್ಯದಲ್ಲಿ ಕಥಾನಾಯಕ ಶಿವನನ್ನು ಪಂಜುರ್ಲಿ ದೈವವು ಬಡಿದೆಬ್ಬಿಸುವ ಒಂದು ಸನ್ನಿವೇಶದ ಫೋಸ್ಟರ್ ‘ಕಾಂತಾರ’ ಹೈಲೈಟ್ ಆಗಿತ್ತು. ಅದೇ ಮಾದರಿಯಲ್ಲಿ ಈಗ ಲಿಯೋನೆಲ್​ ಮೆಸ್ಸಿ ಮತ್ತು ಡಿಯಾಗೋ ಮರಡೋನಾ ಅವರ ಮೀಮ್​​ ಗಮನ ಸೆಳೆಯುತ್ತಿವೆ.

ಮೈದಾನದಲ್ಲಿ ಸುಸ್ತಾಗಿ ಮಲಗಿದ ಲಿಯೋನೆಲ್​ ಮೆಸ್ಸಿ ಅವರನ್ನು ಡಿಯಾಗೋ ಮರಡೋನಾ ಅವರು ದೈವದ ರೀತಿಯಲ್ಲಿ ಕೂಗಿ ಎಬ್ಬಿಸುತ್ತಿರುವ ಹಾಗೆ ಈ ಮೀಮ್​ ಮೂಡಿಬಂದಿದೆ. ಇದನ್ನು ‘ಕಾಂತಾರ’ ಪ್ರೇಕ್ಷಕರು ಮತ್ತು ಫುಟ್ಬಾಲ್​ ಪ್ರಿಯರು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಈ ಕ್ರಿಯೇಟಿವಿಟಿಗೆ ಅನೇಕರು ಭೇಷ್​ ಎಂದಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *