
ನ್ಯೂಜಿಲೆಂಡ್– ಭಾರತ ನಡುವಿನ ಮೊದಲ ಟಿ–20 ಪಂದ್ಯಕ್ಕೆ ವರುಣನ ಕಾಟ – ಒಂದು ಚೆಂಡನ್ನೂ ಎಸೆಯದೆ ಪಂದ್ಯ ರದ್ದು
- ಕ್ರೀಡಾ ಸುದ್ದಿ
- November 18, 2022
- No Comment
- 184
ನ್ಯೂಸ್ ಆ್ಯರೋ : ವೆಲ್ಲಿಂಗ್ಟನ್‌ನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಮೊದಲ ಟಿ–20 ಪಂದ್ಯವು ರದ್ದಾಗಿದೆ.
ಸ್ಕೈ ಸ್ಟೇಡಿಯಂನಲ್ಲಿ ಇಂದು ಪಂದ್ಯಾಟವು ಒಂದು ಚೆಂಡನ್ನೂ ಎಸೆಯದೆ ರದ್ದುಗೊಂಡಿವೆ. ಭಾರತೀಯ ಕಾಲಮಾನ ಮಧ್ಯಾಹ್ನ 12ಕ್ಕೆ ಪಂದ್ಯ ಆರಂಭವಾಗಬೇಕಿತ್ತು. ಆದರೆ, ವೆಲ್ಲಿಂಗ್ಟನ್‌ನಲ್ಲಿ ಮಳೆಯಾಗುತ್ತಿದ್ದರಿಂದ ನಿಗದಿತ ಸಮಯಕ್ಕೆ ಪಂದ್ಯವನ್ನು ಆರಂಭಿಸಲು ಸಾಧ್ಯವಾಗಿರಲಿಲ್ಲ.
ಅಂತಹ ಪರಿಸ್ಥಿತಿಯಲ್ಲೂ ಸುಮಾರು ಒಂದೂವರೆಯಿಂದ ಎರಡು ಗಂಟೆಗಳ ಕಾಲ ಕಾದ ನಂತರ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಈ ಕ್ರೀಡಾಂಗಣದಲ್ಲಿನ ಒಳಚರಂಡಿ ವ್ಯವಸ್ಥೆಯು ಉತ್ತಮವಾಗಿಲ್ಲ ಎನ್ನಲಾಗಿದೆ.
ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬಳಿಕ ಟಿ–20 ಸರಣಿ ಆಡಲು ಎದುರು ನೋಡುತ್ತಿದ್ದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಆಟಗಾರರಿಗೆ ಭಾರಿ ನಿರಾಶೆಯಾಯಿತು. ಅದರಲ್ಲೂ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅಂದುಕೊಂಡಿದ್ದ ಭಾರತದ ಯುವ ಆಟಗಾರರ ಕನಸಿಗೆ ವರುಣ ತಣ್ಣೀರು ಎರಚಿದ್ದಾನೆ.
ಉಭಯ ತಂಡಗಳ ನಡುವಣ ಎರಡನೇ ಟಿ20 ಪಂದ್ಯ ಭಾನುವಾರ ಮೌಂಟ್ ಮೌಂಗನುಯ್‌ನ ಬೇ ಓವಲ್ ಮೈದಾನದಲ್ಲಿ ಜರುಗಲಿದೆ.