
Asia Cup 2023 IND vs PAK – ಪಾಕ್ ವಿರುದ್ಧ ಕೆ.ಎಲ್.ರಾಹುಲ್ ಬದಲಿಗೆ ಇನ್ನೋರ್ವ ಕನ್ನಡಿಗನಿಗೆ ಸಿಗುತ್ತಾ ಚಾನ್ಸ್?
- ಕ್ರೀಡಾ ಸುದ್ದಿ
- September 2, 2023
- No Comment
- 55
ನ್ಯೂಸ್ ಆ್ಯರೋ : ಏಷ್ಯಾ ಕಪ್ ಕ್ರಿಕೆಟ್ ನ ಬಹು ನಿರೀಕ್ಷಿತ ಪಂದ್ಯ ಇಂದು ಅಪರಾಹ್ನ ನಡೆಯಲಿದೆ. ಶ್ರೀಲಂಕಾದ ಪಲ್ಲೆಕೆಲೆ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುವ ಮೂಲಕ ಅಭಿಮಾನಿಗಳಿಗೆ ರೋಚಕ ಪಂದ್ಯ ಕಣ್ತುಂಬಿಕೊಳ್ಳುವ ಅವಕಾಶ ಲಭಿಸಿದೆ.
ಕೆ.ಎಲ್.ರಾಹುಲ್ ಗೈರು
ಐಪಿಎಲ್ ಪಂದ್ಯಕೂಟದ ವೇಳೆ ಗಾಯಗೊಂದಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಇನ್ನೂ ಚೇತರಿಸಿಕೊಳ್ಳದ ಕಾರಣ ಅವರು ಮೊದಲೆರಡು ಪಂದ್ಯಗಳಿಗೆ ಗೈರಾಗಿದ್ದಾರೆ. ಇದು ಕನ್ನಡಿಗರಿಗೆ ತೀವ್ರ ನಿರಾಸೆ ತಂದಿತ್ತರೂ ಮತ್ತೋರ್ವ ಕನ್ನಡಿಗ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ಅವರೇ ಪ್ರಸಿದ್ಧ್ ಕೃಷ್ಣ.
ಅವಕಾಶ ಸಿಗುತ್ತಾ?
ಉತ್ತಮ ಬೌಲಿಂಗ್ ಬಳಗದೊಂದಿಗೆ ಕಣಕ್ಕೆ ಇಳಿಯಲಿರುವ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವನ್ ನಲ್ಲಿ ಪ್ರಸಿದ್ಧ್ ಕೃಷ್ಣ ಅವರಿಗೆ ಅವಕಾಶ ಸಿಗುತ್ತಾ ಎನ್ನುವ ಚರ್ಚೆ ಅರಂಭವಾಗಿದೆ.

ಗಾಯಗೊಂಡು 2 ವರ್ಷಗಳ ಕಾಲ ಭಾರತ ತಂಡದಿಂದ ಹೊರಗುಳಿದಿದ್ದ ಜಸ್ಪ್ರೀತ್ ಬೂಮ್ರ ಈಗಾಗಲೇ ಐರ್ಲೆಂಡ್ ಟೂರ್ನಿ ಮೂಲಕ ಕಂ ಬ್ಯಾಕ್ ಮಾಡಿದ್ದಾರೆ. ಇದೀಗ ಟೀಂ ಇಂಡಿಯಾದ ನಾಲ್ವರು ಬೌಲರ್ ಗಳ ಪೈಕಿ ಅವರಿಗೆ ಅವಕಾಶ ಸಿಗುವುದು ಬಹುತೇಕ ಖಚಿತ.
ಇನ್ನು ಮೊಹಮ್ಮದ್ ಸಿರಾಜ್ ಕೂಡ ಆಡಲಿದ್ದಾರೆ. ಹೀಗಾಗಿ 3ನೇ ಬೌಲರ್ ಸ್ಥಾನಕ್ಕಾಗಿ ಇದೀಗ ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಶಮಿ ನಡುವೆ ಪೈಪೋಟಿ ಇದೆ. ಐರ್ಲೆಂಡ್ ವಿರುದ್ಧ ಮಿಂಚಿರುವ ಪ್ರಸಿದ್ಧ್ ಕೃಷ್ಣಗೆ ಕಣಕ್ಕಿಳಿಯಲು ಅವಕಾಶ ಸಿಗುತ್ತಾ ಎನ್ನುವುದು ಇನ್ನೇನು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.