ಡ್ರೀಮ್‌ ಇಲೆವೆನ್ ನಿಂದ ಬಂಪರ್ ಬಹುಮಾನ – ರಾತ್ರೋರಾತ್ರಿ ಕೋಟ್ಯಾಧಿಪತಿಯಾದ 19 ವರ್ಷದ ಯುವಕ

ಡ್ರೀಮ್‌ ಇಲೆವೆನ್ ನಿಂದ ಬಂಪರ್ ಬಹುಮಾನ – ರಾತ್ರೋರಾತ್ರಿ ಕೋಟ್ಯಾಧಿಪತಿಯಾದ 19 ವರ್ಷದ ಯುವಕ

ನ್ಯೂಸ್ ಆ್ಯರೋ : ಅದೃಷ್ಟ ಅನ್ನುವುದು ಕೈ ಹಿಡಿದರೆ ಏನು ಬೇಕಾದರು ಸಂಭವಿಸಬಹುದು ಎಂಬುದಕ್ಕೆ ಇಲ್ಲೊಂದು ಜೀವಂತ ಸಾಕ್ಷಿಯಿದೆ. ಬಿಹಾರದ ಒಬ್ಬ ಸಾಮಾನ್ಯ ದಿನಸಿ ವ್ಯಾಪಾರ ಶಾಜೇಶ್ ಮೆಹ್ತಾ ಎಂಬವರ ಮಗ 19 ವರ್ಷದ ಶಾನು ಕುಮಾರ್ ಮೆಹ್ತಾ, ಬಿಗ್ ಬ್ಯಾಶ್ T20 ಲೀಗ್ ಗೆ ಡ್ರೀಮ್ ಇಲೆವೆನ್ ಮೂಲಕ ತಂಡ ರಚಿಸಿ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಶಾನು ಕುಮಾರ್ ಮೆಹ್ತಾ ಮನೆಯ ಮುಂದೆ ಜನಸಾಗರವೇ ಹರಿದು‌ ಬಂದಿದೆ.

ಕ್ರಿಕೆಟ್ ಹುಟ್ಟಿದ್ದು ಇಂಗ್ಲೆಂಡ್ ನಲ್ಲಾದರೂ ಈ ಆಟಕ್ಕೆ ಜನಪ್ರಿಯತೆ ಸಿಕ್ಕಿದ್ದು ಭಾರದಲ್ಲಿ ಎಂದರೆ ತಪ್ಪಾಗಲಾರದು. ಕ್ರಿಕೆಟ್ ಆಡುವವರಿಗೆ ಕೋಟಿ ಕೋಟಿ ಹಣ ಸಿಗುತ್ತದೆ ಆದರೆ ನೋಡುವವರಿಗೆ ಏನು ಸಿಗುತ್ತದೆ ಎಂಬ‌ ಪ್ರಶ್ನೆ ಎದ್ದಾಗ ಹುಟ್ಟಿಕೊಂಡಿದ್ದೇ ‘ಡ್ರೀಮ್ ಇಲೆವೆನ್’ ಎಂಬ ಫ್ಯಾಂಟಸಿ ಆ್ಯಪ್. ಎರಡು ತಂಡಗಳಿಂದ ಆಟಗಾರನ್ನು ಸೇರಿ ಒಂದು ಉತ್ತಮ ತಂಡವನ್ನು ರಚಿಸಿದರೆ ಇಲ್ಲಿ ಕೋಟಿ ಕೋಟಿ ಗಳಿಸಬಹುದು‌. ಈ ಕಾರಣದಿಂದಲೇ ದೇಶದಾದ್ಯಂತ ಲಕ್ಷಾಂತರ ಯುವಕರು ಡ್ರೀಮ್‌ ಇಲೆವೆನ್ ಆಡುತ್ತಿದ್ದಾರೆ‌.

ಐಪಿಎಲ್ ಸಮಯದಲ್ಲಂತೂ ಡ್ರೀಮ್‌ ಇಲೆವೆನ್ ತುಂಬಿ ತುಳುಕುತ್ತದೆ. ಆದರೆ ಇಲ್ಲಿ ಗೆಲ್ಲಬೇಕಿದ್ದರೆ ಅದೃಷ್ಟವೂ ಬೇಕು. ಈಗ ಆ ಅದೃಷ್ಟ ಬಿಹಾರದ ಶಾನು ಕುಮಾರ್ ವೆಹ್ತಾನ ಕೈ ಹಿಡಿದಿದೆ.

1ಕೋಟಿ ಗೆದ್ದ 19 ವರ್ಷದ ಯುವಕ

ಬಿಹಾರ ರಾಜ್ಯದ ಮಧುಬನಿ ಜಿಲ್ಲೆಯ ದಿನಸಿ ವ್ಯಾಪಾರಿ ರಾಜೇಶ್ ಮೆಹ್ತಾನದ್ದು ಸಾಮಾನ್ಯ ಕುಟುಂಬ. ಮೂವರು ಮಕ್ಕಳಲ್ಲಿ, ಶಾನು ಮೆಹ್ತಾ ಹಿರಿಯ ಮಗ. ಈತ ದ್ವಿತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಲೇ ದೆಹಲಿಯಲ್ಲಿರುವ ವೀರೇಂದ್ರ ಸೆಹ್ವಾಗ್ ಕ್ರಿಕೆಟ್ ಅಕಾಡೆಮಿಯಲ್ಲಿ ಕೋಚಿಂಗ್ ಪಡೆಯುತ್ತಿದ್ದಾನೆ. ಇದರೊಂದಿಗೆ ಈತ ಡ್ರೀಮ್ ಇಲೆವೆನ್ ಆಡುತ್ತಿದ್ದ.

ಪ್ರಸ್ತುತ ಆಸ್ಟ್ರೇಲಿಯಾ ಬಿಗ್ ಬ್ಯಾಷ್ T20 ಲೀಗ್ ನಡೆಯುತ್ತಿದೆ. ಇದಕ್ಕೆ ಶಾನು ಡ್ರೀಮ್ ಇಲೆವೆನ್ ಮೂಲಕ ತಂಡ ರಚಿಸಿದ್ದ. ಹಣ ಬರಬಹುದು ಎಂಬ ಸಣ್ಣ ಸೂಚನೆಯೂ ಶಾನುಗೆ ಇರಲಿಲ್ಲ. ಆದರೆ ಅದೃಷ್ಟ ಎನ್ನುವಂತೆ ರಾತ್ರೋರಾತ್ರಿ ಈತ ಡ್ರೀಮ್ ಇಲೆವೆನ್ ಮೂಲಕ ₹1 ಕೋಟಿ ಗೆದ್ದಿದ್ದಾನೆ. ಸುದ್ದಿ ಕೇಳಿ ಮನೆ ಮಂದಿಯೆಲ್ಲ ಸಂತಸದ ಕಡಲಿನಲ್ಲಿ ತೇಲಾಡಿದ್ದಾರೆ‌.

ಈ ಬಗ್ಗೆ ಶಾನು ಕುಮಾರ್ ಮೆಹ್ತಾ ಪ್ರತಿಕ್ರಿಯೆ ನೀಡಿದ್ದು, ”ಒಂದು ಕೋಟಿ ಗೆದ್ದಿದ್ದೇನೆ ಎಂಬುದನ್ನು ಮೊದಲು ನಂಬಲು ಸಾಧ್ಯವಾಗಲಿಲ್ಲ. ನನ್ನ ಮೊಬೈಲ್‌ಗೆ ಬಂದ ಮೆಸೇಜ್​ ನೋಡಿ ಸಂತೋಷಕ್ಕೆ ಮಿತಿಯೇ ಇಲ್ಲದಂತಾಗಿತ್ತು . ನನಗೆ ಕ್ರಿಕೆಟಿಗನಾಗುವ ಆಸೆ ಇದೆ. ಈಗ ನನಗೆ ಬಂದಿರುವ ಹಣವನ್ನು ತಂದೆಗೆ ನೀಡಿದ್ದೇನೆ. ಇದರಿಂದ ಅವರ ವ್ಯಾಪಾರವನ್ನು ದೊಡ್ಡದಾಗಿ ಮಾಡಲು ಅನುಕೂಲವಾಗಲಿದೆ. ಜೊತೆಗೆ ನನ್ನ ತಂದೆಯ ಆಸೆಯಂತೆ ಇದೇ ದುಡ್ಡಿನಲ್ಲಿ ನಾನು ಉತ್ತಮ ಕ್ರಿಕೆಟ್​ ತರಬೇತಿ ಪಡೆದುಕೊಳ್ಳುತ್ತೇನೆ” ಎಂದು ತಿಳಿಸಿದ್ದಾನೆ‌.

ಕುಚೇಲರನ್ನು ಕುಬೇರರನ್ನಾಗಿಸಿದ ಡ್ರೀಮ್ ಇಲೆವೆನ್

ಡ್ರೀಮ್‌ ಇಲೆವೆನ್ ಆರಂಭವಾದಾಗಿನಿಂದ ಸಾಕಷ್ಟು ಯುವಕ ಇದರಲ್ಲಿ ತೊಡಗಿಸಿಕೊಂಡು‌ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ದೇಶದಾದ್ಯಂತ ಸಾಕಷ್ಟು ಜನರಿಗೆ ಡ್ರೀಮ್ ಇಲೆವೆನ್‌ನಿಂದ ಕೊಟ್ಯಾಂತರ ರೂಪಾಯಿ‌ ದೊರೆತಿದೆ. ಬಡ ಕುಟುಂಬದ ಯುವಕರೂ ಕೂಡ ರಾತ್ರೋರಾತ್ರಿ ಕುಬೇರರಾಗಿದ್ದಾರೆ. ಈ ಹಿಂದೆ, ಬಿಹಾರದ ನವಾಡಾದ ಪಿಪ್ರಾ ಖುರ್ದ್​ ಗ್ರಾಮದ ನಿವಾಸಿ ರಾಜು ರಾಮ್​ ಎಂಬವರು ಡ್ರೀಮ್​ 11ನಲ್ಲಿ ಒಂದು ಕೋಟಿ ರೂಪಾಯಿ ಗೆದ್ದಿದ್ದರು. ಇವರಲ್ಲದೇ ಭೋಜ್​ಪುರ ಜಿಲ್ಲೆಯ ಚಾರ್ಪೋಖಾರಿ ಬ್ಲಾಕ್​ನ ಠಾಕುರಿ ಗ್ರಾಮದ ಯುವಕ ಸೌರಭ್​ ಎಂಬಾತ ಒಂದು‌ ಕೋಟಿ ಗೆದ್ದಿದ್ದರು. ಬಿಹಾರದ ಸರನ್​ ಜಿಲ್ಲೆಯ ದಿನಗೂಲಿ ನೌಕರನ ಮಗ ಹಾಗೂ ಚಾಲಕನಾಗಿದ್ದ ರಮೇಶ್​ ಕುಮಾರ್​ ಎಂಬಾತ ಬರೋಬ್ಬರಿ 2 ಕೋಟಿ ಗೆದ್ದು ರಾತ್ರೋರಾತ್ರಿ ಸಿರಿವಂತನಾಗಿದ್ದ. ಬಿಹಾರ್, ಗುಜರಾತ್, ಉತ್ತರ ಪ್ರದೇಶ ಮೂಲದವರು ಹೆಚ್ಚು ಡ್ರೀಮ್​ ಇಲೆವೆನ್​ನಲ್ಲಿ ಹೆಚ್ಚು ಆಡುತ್ತಾರೆ. ಇದು ಅದೃಷ್ಟದ ಆಟ ಆದ್ದರಿಂದ ಎಚ್ಚರಿಕೆಯಿಂದ ಆಡುವುದು ಉತ್ತಮ. ಎಷ್ಟು ಜನ ಕುಬೇರರಾಗಿದ್ದಾರೋ, ಅಷ್ಟೇ ಜನ ಈ ಆಟದ ವ್ಯಸನದಿಂದ ಇದ್ದ ಹಣವನ್ನೆಲ್ಲ ಕಳೆದುಕೊಂಡು ಪಾಪರ್ ಆಗಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *