ಬಾಕ್ಸ್ ಆಫೀಸ್‌ನಿಂದ 725 ಕೋಟಿ ಬಾಚಿದ ‘ಪಠಾಣ್’ – ‘ಕೆಜಿಎಫ್ 2’ ದಾಖಲೆ ಉಡೀಸಾಯ್ತಾ? ಯಶ್ V/S ಶಾರುಖ್ ಗೆದ್ದದ್ದು ಯಾರು ಗೊತ್ತಾ?

ಬಾಕ್ಸ್ ಆಫೀಸ್‌ನಿಂದ 725 ಕೋಟಿ ಬಾಚಿದ ‘ಪಠಾಣ್’ – ‘ಕೆಜಿಎಫ್ 2’ ದಾಖಲೆ ಉಡೀಸಾಯ್ತಾ? ಯಶ್ V/S ಶಾರುಖ್ ಗೆದ್ದದ್ದು ಯಾರು ಗೊತ್ತಾ?

ನ್ಯೂಸ್ ಆ್ಯರೋ : ‘ಪಠಾಣ್’ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟಿಸಿದ ಈ ಸಿನಿಮಾ ಬಿಡುಗಡೆಯಾಗುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ದೇಶದಾದ್ಯಂತ ಪ್ರತಿರೋಧ ವ್ಯಕ್ತವಾಗಿತ್ತು. ಹಿಂದೂ ವಿರೋಧಿ ಅಂಶಗಳಿವೆ ಎನ್ನುವ ಕಾರಣ ನೀಡಿ ಸಾಕಷ್ಟು ಜನರ ಆಕ್ರೋಶಕ್ಕೆ ಗುರಿಯಾಗಿತ್ತು. ಆದರೆ ಇದೀಗ ‘ಪಠಾಣ್’ ಇದ್ಯಾವುದನ್ನೂ ಲೆಕ್ಕಿಸದೇ ತನ್ನ ನಾಗಾಲೋಟ ಮುಂದುವರೆಸಿದೆ. ಕೋಟಿ ಕೋಟಿ ಕಲೆಕ್ಷನ್ ಮಾಡುವ ಮೂಲಕ ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿದೆ‌. ಕನ್ನಡದ ‘ಕೆಜಿಎಫ್ 2’ ಸೇರಿದಂತೆ ಈ ಹಿಂದೆ ಭಾರತೀಯ ಸಿನಿ ರಂಗದಲ್ಲಿ ಇತಿಹಾಸ ಬರೆಸಿದ್ದ ಸಿನಿ ದಾಖಲೆಗಳನ್ನೆಲ್ಲ ‘ಪಠಾಣ್’ ಅಳಿಸುತ್ತಿದೆ.

10‌ ದಿನದಲ್ಲಿ ₹725 ಕೋಟಿ ಬಾಚಿದ ‘ಪಠಾಣ್’

ಈ ವರ್ಷದ ಜನವರಿ 25 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆ ಕಂಡ ‘ಪಠಾಣ್’ ಸಿನಿಮಾ‌, ಬಿಡುಗಡೆಯಾದ 10 ದಿನದಲ್ಲಿ ಭಾರತದಲ್ಲಿ 375ಕೋಟಿ ಸೇರಿದಂತೆ ವಿಶ್ವದಾದ್ಯಂತ ಬರೊಬ್ಬರಿ 725 ಕೋಟಿ ಬಾಚಿಕೊಂಡು ದಾಖಲೆ ಬರೆದಿದೆ. ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 55 ಕೋಟಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ 68‌ಕೋಟಿ ಬಾಚಿತ್ತು. ಒಟ್ಟಾರೆಯಾಗಿ ಬಿಡುಗಡೆಯಾದ 10 ದಿನಕ್ಕೆ 725 ಕೋಟಿ ಗಳಿಕೆ ಮಾಡುವುದರೊಂದಿಗೆ ಬಾಲಿವುಡ್ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾಬೀತು ಪಡಿಸಿದೆ‌.

10 ದಿನದಲ್ಲಿ ‘ಕೆಜಿಎಫ್2’ ಗಳಿಸಿದ್ದೆಷ್ಟು ಗೊತ್ತಾ?

ಕನ್ನಡದ ಗೋಲ್ಡನ್ ಸಿನಿಮಾ‌ ಎಂಬ‌ ಖ್ಯಾತಿ ಗಳಿಸಿದ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಸಿನಿಮಾ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಕಂಡಿತ್ತು. ಇಡೀ ಭಾರತದಾದ್ಯಂತ ಅಬ್ಬರಿಸಿದ ರಾಕಿ ದಾಖಲೆಗಳನ್ನೆಲ್ಲ ಪುಡಿಗಟ್ಟಿ ಗೆಲುವಿನ ಮೈಲಿಗಲ್ಲು ಸ್ಥಾಪಿಸಿತ್ತು. ‘ಕೆಜಿಎಫ್ 2’ ಸಿನಿಮಾ ಗಳಿಕೆಯ ವಿಚಾರದಲ್ಲಿ ‘ಪಠಾಣ್’ ಚಿತ್ರಕ್ಕಿಂತ ಮುಂದಿದೆ ಎಂಬುದು‌ ಲೆಕ್ಕಾಚಾರಗಳಿಂದ ಸ್ಪಷ್ಟವಾಗಿದೆ.

ಸಿನಿಮಾ ಬಿಡುಗಡೆಯಾದ 10ನೇ ದಿನಕ್ಕೆ 134 ಕೋಟಿ ವಿದೇಶದಿಂದ ಮತ್ತು ಭಾರತದಾದ್ಯಂತ ಒಟ್ಟು 675 ಕೋಟಿ ಗಳಿಸುವುದರೊಂದಿಗೆ ವಿಶ್ವದಾದ್ಯಂತ ಒಟ್ಟು 810 ಕೋಟಿ ಗಳಿಕೆ ಮಾಡಿತ್ತು. ಹಾಗಾಗಿ ‘ಕೆಜಿಎಫ್2’ ಸಿನಿಮಾದ ದಾಖಲೆಯನ್ನು‌ ಮೀರಿ ಗಳಿಕೆಯಲ್ಲಿ ಸ್ಥಾನ‌ ಪಡೆಯಲು ‘ಪಠಾಣ್’ ಇನ್ನೂ ಸಾಧ್ಯವಾಗಿಲ್ಲ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *