ಶಬರಿಮಲೆಯಲ್ಲಿ 18 ಮೆಟ್ಟಿಲು ಬಳಿ ಜನದಟ್ಟಣೆ – ಸಮಸ್ಯೆ ನಿವಾರಣೆಗೆ ಮೆಟ್ಟಿಲಿನ ಅಗಲ ಹೆಚ್ಚಿಸಲು ಚಿಂತನೆ…!!

ಶಬರಿಮಲೆಯಲ್ಲಿ 18 ಮೆಟ್ಟಿಲು ಬಳಿ ಜನದಟ್ಟಣೆ – ಸಮಸ್ಯೆ ನಿವಾರಣೆಗೆ ಮೆಟ್ಟಿಲಿನ ಅಗಲ ಹೆಚ್ಚಿಸಲು ಚಿಂತನೆ…!!

ನ್ಯೂಸ್ ಆ್ಯರೋ : ಅಯ್ಯಪ್ಪ ಮಾಲಾಧಾರಿಗಳು ಈ ಸಂದರ್ಭ ಕಟ್ಟುನಿಟ್ಟಿನ ವೃತ ಆಚರಿಸಿ ಶಬರಿಮಲೆಗೆ ತೆರಳುತ್ತಾರೆ. ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈ ಬಾರಿಯಂತೂ ಪೊಲೀಸರು ಭಕ್ತರನ್ನು ತ್ವರಿತವಾಗಿ 18 ಮೆಟ್ಟಿಲು ಏರಿಸಲು ಹರಸಾಹಸ ಪಟ್ಟರು. ಇಲ್ಲಿನ ಸಂಪ್ರದಾಯದ ಪ್ರಕಾರ ಈ ಮೆಟ್ಟಿಲುಗಳ ಅಗಲ ಹೆಚ್ಚಿಸುವಂತಿಲ್ಲ. ಆದರೆ ಅಗಲ ಹೆಚ್ಚಿಸುವುದೊಂದೇ ಈಗಿರುವ ಸಮಸ್ಯೆಗೆ ಪರಿಹಾರ ಎಂಬ ಸಲಹೆ ಬಂದಿದೆ. ಹೀಗಾಗಿ ತಿರುವಾಂಕೂರು ದೇವಸ್ವಂ ಮಂಡಳಿ, ಕೇರಳ ಸರ್ಕಾರ ಯಾವ ನಿರ್ಧಾರ ತಳೆಯುತ್ತದೆ ಎಂಬುದು ಕುತೂಹಲದ ಸಂಗತಿಯಾಗಿದೆ.

ಶಬರಿಮಲೆ ಅಯ್ಯಪ್ಪ ಸನ್ನಿಧಾನದ 18 ಮೆಟ್ಟಿಲುಗಳನ್ನು ಹತ್ತುವ (ಪದಿನೆಟ್ಟಾಂಪಡಿ) ವೇಳೆ ಉಂಟಾಗುತ್ತಿರುವ ದಟ್ಟಣೆ ನಿಯಂತ್ರಣಕ್ಕೆ ದೇವಸ್ವಂ ಮಂಡಳಿ ಹರಸಾಹಸಪಡುತ್ತಿದೆ. ಈ ಮೆಟ್ಟಿಲೇರುವಲ್ಲಿ ದಟ್ಟಣೆ ಹೆಚ್ಚಿದಂತೆ ಪಂಪಾದಿಂದ ಸನ್ನಿಧಾನದ ತನಕದ 6 ಕಿ.ಮೀ. ವ್ಯಾಪ್ತಿಯಲ್ಲಿ ಸರತಿ ಸಾಲು ಕಂಡುಬರುತ್ತಿದೆ.

ಪ್ರಸ್ತುತ ಪ್ರತಿ ನಿಮಿಷಕ್ಕೆ 75 ಮಂದಿ ಮಾತ್ರ ಮೆಟ್ಟಿಲೇರಲು ಸಾಧ್ಯವಾಗುತ್ತಿದೆ. 18 ಮೆಟ್ಟಿಲ ಮೇಲಿನ ಅಗಲ ಹೆಚ್ಚಿಸಿದರೆ ಈ ಸಮಸ್ಯೆ ಬಗೆಹರಿಯಬಹುದೇ ? ಹೀಗೊಂದು ಯೋಚನೆ ಮೂಡುತ್ತಿದೆ. ಶಬರಿಮಲೆ ಸಂಪ್ರದಾಯ ಪ್ರಕಾರ 18 ಮೆಟ್ಟಿಲುಗಳ ಅಗಲ ಹೆಚ್ಚಿಸುವಂತಿಲ್ಲ, ಅಗಲ ಹೆಚ್ಚಿಸುವ ಕುರಿತು ಪರಿಶೀಲಿಸಲಾಗಿದೆ. ಮೆಟ್ಟಿಲುಗಳ ಮೇಲೆ ಹೆಚ್ಚಿನ ಗಮನ ಹರಿಸುವುದೊಂದೇ ಸಮಸ್ಯೆ ಪರಿಹಾರಕ್ಕೆ ದಾರಿ. 18 ಮೆಟ್ಟಿಲುಗಳ ಹಂತವನ್ನು ಸೂಕ್ಷ್ಮವಾಗಿ ಪರಿಹಾರ ಗಮನಿಸಿ ಕಂಡು ಕೊಳ್ಳುವುದೊಂದೇ ಭಕ್ತರಿಗೆ ಅಯ್ಯಪ್ಪನ ಸುಗಮ ದರ್ಶನಕ್ಕೆ ಅವಕಾಶ ಒದಗಿಸಲು ಇರುವ ಏಕೈಕ ಮಾರ್ಗ.

ಹಿರಿಯ ಪೊಲೀಸ್ ಅಧಿಕಾರಿಗಳ ಕೊರತೆ

ಹದಿನೆಂಟು ಮೆಟ್ಟಿಲ ಮೂಲಕ ಸನ್ನಿಧಾನ ತಲುಪುವ ಭಕ್ತರು ಪ್ರತಿ ಮೆಟ್ಟಿಲಲ್ಲಿ ಬಾಗಿ ನಮಿಸುವುದನ್ನು ತಡೆಯಬೇಕು. ಮೆಟ್ಟಿಲ ಮೇಲೆ ಹೆಚ್ಚು ಹೊತ್ತು ನಿಲ್ಲದೆ ಬೇಗನೆ ಹಾದು ಹೋಗುವಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ಶಬರಿಮಲೆಯಲ್ಲಿ ಕೆಲಸ ಮಾಡಿದ ಅನುಭವ ಇರುವ ಪೊಲೀಸ್ ಅಧಿಕಾರಿಗಳನ್ನು ಮೆಟ್ಟಿಲ ಮೇಲಿನ ಕರ್ತವ್ಯಕ್ಕೆ ನೇಮಿಸಬೇಕು.

ಶಬರಿಮಲೆಯಲ್ಲಿ ಪೊಲೀಸ್ ವ್ಯವಸ್ಥೆ ಇನ್ನಷ್ಟು ಚುರುಕಾಗಬೇಕು. ಹಿರಿಯ, ಅನುಭವಿ ಆಧಿ ಕಡಿಮೆಯಾಗಿದೆ. ಪ್ರಸ್ತುತ ಇರುವವರು ನಿಗಾ ವಹಿಸುತ್ತಿಲ್ಲ. ಶಬರಿಮಲೆಯ ಉಸ್ತುವಾರಿ ವಹಿಸಬೇಕಾದ ಪೊಲೀಸ್ ಅಧಿಕಾರಿಗಳು ನವ ಕೇರಳ ಸದಸ್ಯರಿಗೆ ಭದ್ರತೆ ಒದಗಿಸುವಲ್ಲಿ ನಿರತರಾಗಿದ್ದಾರೆ. ಇದು ಗೃಹ ಇಲಾಖೆಯ ವೈಫಲ್ಯವಾಗಿದ್ದು, ಗೃಹ ಇಲಾಖೆಯ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಈ ಬಗ್ಗೆ ಚಿಂತಿಸಿದರೆ ಮಾತ್ರ ಶಬರಿಮಲೆಯ ಸದ್ಯದ ಸಮಸ್ಯೆಗೆ ಪರಿಹಾರ ಕಾಣಬಹುದು.

ಯಥಾಸ್ಥಿತಿ ಇನ್ನೂ ಮುಂದುವರಿದರೆ ಶಬರಿಮಲೆ ಮೇಲಿನ ಸಂಪೂರ್ಣ ನಿಯಂತ್ರಣ ಹಾಗೂ ನಿರ್ವಹಣೆ ಕೇಂದ್ರ ಸರಕಾರ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ. ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡುವ ಸಂಖ್ಯೆಯನ್ನು ನಿಯಂತ್ರಿಸಿದರೂ ಸದ್ಯದ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ಸಾಧ್ಯವಾಗಬಹುದು.

ವಲಿಯಕೋಯಿಕ್ಕಲ್‌ನಿಂದಲೇ ವಾಪಸ್

ಶಬರಿಮಲೆಯಲ್ಲಿ ಭಕ್ತರ ದಟ್ಟಣೆಯಿಂದ ಸರತಿ ಸಾಲಿನಲ್ಲಿ ತಾಸುಗಟ್ಟಲೆ ಕಾದು ಬಸವಳಿದ ಕೆಲವು ವ್ರತಧಾರಿಗಳು ಅಯ್ಯಪ್ಪ ದರ್ಶನ ಪಡೆಯಲಾಗದೆ ಪಂದಳಂ ವಲಿಯಕೋಯಿಕ್ಕಲ್ ದೇಗುಲದಲ್ಲಿ ತುಪ್ಪದ ಅಭಿಷೇಕ ಮಾಡಿ ಮಾಲೆ ತೆಗೆದು ಅಲ್ಲಿಂದ ಮರಳಿರುವುದು ನೋವಿನ ವಿಷಯ. ಶರಣು ಮಂತ್ರ ಘೋಷಗಳಿಂದ ಅಯ್ಯಪ್ಪನಿಗೆ ಶರಣಾಗುತ್ತಿದ್ದ ಅಯ್ಯಪ್ಪ ಮಾಲಾಧಾರಿಗಳು ಸರತಿ ಸಾಲಿನಲ್ಲಿ ಶುದ್ಧ ಗಾಳಿ, ಆಹಾರ, ನೀರು ಲಭಿಸದೆ ಕಾದು ಬಸವಳಿದು ‘ಕೇರಳ ಸಿಎಂ ಡೌನ್ ಡೌನ್’ ಘೋಷಣೆ ಕೂಗಿದ್ದಾರೆ. ಇದು ಶಬರಿಮಲೆ ಅವ್ಯವಸ್ಥೆಯನ್ನು ಸಾರಿ ಹೇಳುತ್ತಿದೆ.

ಸನ್ನಿಧಾನ ಹಾಗೂ ಕಾನನ ಹಾದಿಯಲ್ಲಿ ಭಕ್ತರ ದಟ್ಟಣೆ ಹಾಗೂ ನಿಲಕ್ಕಲ್‌ನಿಂದ ಪಂಪಾ ತನಕ ವಾಹನ ದಟ್ಟಣೆಯೂ ಮಿತಿಮೀರಿದೆ. ಭಕ್ತರ ದಟ್ಟಣೆ ವಿಚಾರವಾಗಿ ಹೈಕೋರ್ಟ್ ಮಧ್ಯ ಪ್ರವೇಶಿಸಿದೆ. ಶಬರಿಮಲೆಯಲ್ಲಿ ಜನಸಂದಣಿ ನಿಯಂತ್ರಿಸಲು ಹೈಕೋರ್ಟ್ ಮಾರ್ಗಸೂಚಿ ಹೊರಡಿಸಿದೆ. ಪೀಕ್ ಅವರ್ ನಲ್ಲಿ ಭಕ್ತರು ಕ್ಯೂ ಕಾಂಪ್ಲೆಕ್ಸ್ ಮೂಲಕ ಹಾದು ಹೋಗುವುದನ್ನು ಖಚಿತಪಡಿಸುವಂತೆ ನ್ಯಾಯಾಲಯ ಸೂಚಿಸಿದೆ. ಆದರೆ ರಜಾದಿನಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಬರುತ್ತಿರುವುದರಿಂದ ಜನಸಂದಣಿ ನಿಯಂತ್ರಣ ಸಾಧ್ಯವಾಗುತ್ತಿಲ್ಲ.

ಪ್ರತಿದಿನ 76,500 ಮಂದಿಗೆ 18 ಮೆಟ್ಟಿಲೇರಿ ದರ್ಶನ ಪಡೆಯಬಹುದಾಗಿದ್ದು, ದರ್ಶನ ಅವಧಿ ಹೆಚ್ಚಿಸಿದರೆ 85,500 ಭಕ್ತರಿಗೆ ದರ್ಶನ ಪಡೆಯಲು ಸಾಧ್ಯವಾಗುತ್ತದೆ. ಹೈಕೋರ್ಟ್ ನಿರ್ದೇಶದಂತೆ ಪ್ರಸ್ತುತ ಒಂದೂವರೆ ಗಂಟೆ ಅವಧಿ ವಿಸ್ತರಿಸಿದರೂ ಭಕ್ತರ ದಟ್ಟಣೆ ಕಡಿಮೆಯಾಗಿಲ್ಲ.

ಡಿವೈಎಸ್ಪಿಗಳು ಆಗಾಗ ಸರತಿ ಸಾಲಿನ ಸ್ಥಿತಿಗತಿ ಬಗ್ಗೆ ಮೇಲ್ವಿಚಾರಣೆ ನಡೆಸುವಂತೆ ಹಾಗೂ ಪ್ರತಿ ಹಂತಗಳಲ್ಲೂ ವೇಗ ಹೆಚ್ಚು ಕಡಿಮೆ ಮಾಡಲು ಮುನ್ಸೂಚನೆ ನೀಡಬೇಕು. 18 ಮೆಟ್ಟಿಲೇರುವವರ ಸಂಖ್ಯೆ ಪ್ರತಿ ನಿಮಿಷ 70ಕ್ಕಿಂತ ಕಡಿಮೆಯಾದರೆ ಅಯ್ಯಪ್ಪ ದರ್ಶನದ ಸರತಿ ಸಾಲು ಕಿ.ಮೀ. ಗಟ್ಟಲೆ ಹೆಚ್ಚುತ್ತದೆ. ಯಾತ್ರಿಕರು ಪ್ರತಿಯೊಂದು ಮೆಟ್ಟಿಲಲ್ಲಿ ಬಾಗಿ ನಮಿಸಿ ಮುಂದೆ ಹೋಗುವುದು ದಟ್ಟಣೆಗೆ ಕಾರಣವಾಗುತ್ತಿದೆ.

ಶಬರಿಮಲೆ ಅವ್ಯವಸ್ಥೆಗೆ ಕೇರಳ ಸರ್ಕಾರವನ್ನು ಜನ ಶಪಿಸುತ್ತಿದ್ದಾರೆ‌. ಒಂದಲ್ಲ ಒಂದು ಸಮಸ್ಯೆ ಅಲ್ಲಿ ತಲೆದೋರುತ್ತಿದೆ. ಇದೀಗ ಸಮಸ್ಯೆ ಪರಿಹಾರಕ್ಕೆ ಚಿಂತನೆ ನಡೆಸಲಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *