ತಿರುಪತಿಯಲ್ಲಿ ದೇವರ ವಿಶೇಷ ದರ್ಶನಕ್ಕೆ ₹ 300 ದರ: ಆನ್‌ಲೈನ್‌ ಕೋಟಾದ ಟಿಕೆಟ್‌ ಬಿಡುಗಡೆ ಮಾಡಿದ ಟಿಟಿಡಿ

ತಿರುಪತಿಯಲ್ಲಿ ದೇವರ ವಿಶೇಷ ದರ್ಶನಕ್ಕೆ ₹ 300 ದರ: ಆನ್‌ಲೈನ್‌ ಕೋಟಾದ ಟಿಕೆಟ್‌ ಬಿಡುಗಡೆ ಮಾಡಿದ ಟಿಟಿಡಿ

ನ್ಯೂಸ್‌ಆ್ಯರೋ: ತಿರುಪತಿಯಲ್ಲಿ ಭಕ್ತರಿಗೆ ವೆಂಕಟೇಶ್ವರ ದೇವರ ವಿಶೇಷ ಪ್ರವೇಶ ದರ್ಶನಕ್ಕಾಗಿ ಪ್ರತಿ ₹300 ದರದಲ್ಲಿ ಆನ್‌ಲೈನ್ ಕೋಟಾದ ಟಿಕೆಟ್‌ಗಳನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಇಂದು ಬೆಳಿಗ್ಗೆ 10ಕ್ಕೆ ಬಿಡುಗಡೆ ಮಾಡಲಿದೆ.

ಭಕ್ತರು ಜನವರಿ ಮತ್ತು ಫೆಬ್ರವರಿ ತಿಂಗಳಿಗೆ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಜನವರಿ 12ರಿಂದ ಫೆಬ್ರುವರಿ 31 ರವರೆಗೆ ಟಿಕೆಟನ್ನು ಆನ್‌ಲೈನ್ ಕೋಟಾವನ್ನು ಬಿಡುಗಡೆ ಮಾಡಲಾಗಿದೆ. ಭಕ್ತರು ಇದನ್ನು ಗಮನಿಸಿ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸುವಂತೆ ವಿನಂತಿಸಲಾಗಿದೆ ಎಂದು ಟಿಟಿಡಿ ಟ್ವೀಟ್‌ನಲ್ಲಿ ತಿಳಿಸಿದೆ.

ಬಾಲಾಲಯದ ನಿಮಿತ್ತ ಫೆ.22ರಿಂದ ಫೆ.28ರವರೆಗೆ ಸರ್ವ ದರ್ಶನಕ್ಕೆ ಅವಕಾಶವಿಲ್ಲ. ಇದೇ ವೇಳೆ ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನ ನಡೆಯುತ್ತಿದೆ ಎಂದು ಹೇಳಿದೆ.

ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪ್ರತಿದಿನ 50,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಟಿಟಿಡಿ ಪ್ರಕಾರ 2022ರ ಡಿಸೆಂಬರ್ 23ರಂದು 62,055 ಯಾತ್ರಿಕರು ದೇವರ ದರ್ಶನ ಪಡೆದಿದ್ದಾರೆ.

ತಿರುಮಲ ದೇವಸ್ಥಾನದಲ್ಲಿ ಡಿಸೆಂಬರ್ 23ರಂದು ಸಂಜೆ ರಂಗನಾಯಕುಲ ಮಂಟಪದಲ್ಲಿ ವಾರ್ಷಿಕ ಅಧ್ಯಯನೋತ್ಸವಗಳು ಪ್ರಾರಂಭವಾಗಿದೆ. 25 ದಿನಗಳ ವಾರ್ಷಿಕ ಉತ್ಸವವು ವೈಕುಂಠ ಏಕಾದಶಿಗೆ 11 ದಿನಗಳ ಮೊದಲು ಪ್ರಾರಂಭವಾಗುತ್ತದೆ. ಜನವರಿ 15 ರಂದು ಮುಕ್ತಾಯಗೊಳ್ಳುತ್ತದೆ.

ಈ ಉತ್ಸವದ ವಿಶಿಷ್ಟತೆ ಏನೆಂದರೆ 12 ಆಳ್ವಾರರು ರಚಿಸಿದ 4000 ಸ್ತೋತ್ರಗಳನ್ನು ನಾಲಯೈರ ದಿವ್ಯಪ್ರಬಂಧ ಪಾಸುರಂಗಳನ್ನು ಪ್ರತಿದಿನ ಪಠಿಸಲಾಗುತ್ತದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *