ನೈಟ್ ಡಿನ್ನರ್ ಗೆ ಜಸ್ಟ್ 15 ನಿಮಿಷದಲ್ಲಿ ಮಾಡಿ ಪನೀರ್ ಬುರ್ಜಿ – ಮಾಡೋದು ತುಂಬಾ ಸುಲಭ : ವಿಧಾನ ಇಲ್ಲಿದೆ..

ನೈಟ್ ಡಿನ್ನರ್ ಗೆ ಜಸ್ಟ್ 15 ನಿಮಿಷದಲ್ಲಿ ಮಾಡಿ ಪನೀರ್ ಬುರ್ಜಿ – ಮಾಡೋದು ತುಂಬಾ ಸುಲಭ : ವಿಧಾನ ಇಲ್ಲಿದೆ..

ನ್ಯೂಸ್ ಆ್ಯರೋ : ರಾತ್ರಿ ಊಟಕ್ಕೆ ಫಾಸ್ಟ್‌ ಆಗಿ ಏನಾದ್ರೂ ಸೈಡ್ಸ್‌ ಮಾಡಬೇಕು ಅನ್ನುವ ಆಲೋಚನೆ ತಲೆಯಲ್ಲಿ ಹೊಳೆದಾಕ್ಷಣ ನೆನಪಿಗೆ ಬರೋದು ಎಗ್‌ ಬುರ್ಜಿ. ಮೊಟ್ಟೆಯಲ್ಲಿ ಸ್ಕ್ರಾಂಬಲ್ಡ್‌ ಎಗ್‌ ಅಥವಾ ಎಗ್‌ ಬುರ್ಜಿ ಮಾಡಿ ಸವಿಯಬಹುದು. ಆದರೆ ಯಾವಾಗ್ಲೂ ಅದನ್ನೇ ತಿನ್ನೋದು ಬೋರು ಹೊಡೆಸಬಹುದು.

ಅದಕ್ಕಾಗಿ ಸ್ವಲ್ಪ ಭಿನ್ನವಾಗಿ ಪನೀರ್‌ ಬುರ್ಜಿ ತಯಾರಿಸಿಕೊಂಡು ತಿನ್ನಬಹುದು. ಇದು ಸಸ್ಯಹಾರಿಗಳಿಗೂ ಇಷ್ಟವಾಗುತ್ತದೆ. ಅಲ್ಲದೇ ನೀವಿದನ್ನು ಬಾಯಿ ಚಪ್ಪರಿಸಿಕೊಂಡು ತಿನ್ನೋದು ಫಿಕ್ಸ್‌. ಈ ಪನೀರ್ ಬುರ್ಜಿಯನ್ನು ಅನ್ನ ಅಥವಾ ಬ್ರೆಡ್ ಜೊತೆ ತಿನ್ನಬಹುದು. ರೋಲ್‌, ಸ್ಯಾಂಡ್‌ವಿಚ್‌, ಬ್ರೆಡ್ ರೋಲ್‌ಗಳಲ್ಲಿ ಸ್ಟಫಿಂಗ್ ರೂಪದಲ್ಲೂ ಬಳಸಬಹುದು.

ಪನೀರ್ ಬುರ್ಜಿಯನ್ನು ಹಲವು ವಿಧಗಳಲ್ಲಿ ತಯಾರಿಸಬಹುದು. ಆದರೆ ಕೇವಲ 15 ನಿಮಿಷಗಳಲ್ಲಿ ಮಾಡಬಹುದಾದ ಸರಳವಾದ ಪನೀರ್ ಬುರ್ಜಿ ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

ಪನೀರ್‌ ತುಂಡು – 200 ಗ್ರಾಂ, ಟೊಮೆಟೊ – 1, ಕ್ಯಾಪ್ಸಿಕಂ – 1/4 ಕಪ್, ಈರುಳ್ಳಿ – 1, ಹಸಿಮೆಣಸು – 2, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ – 1 ಚಮಚ, ಎಣ್ಣೆ – 2 ಚಮಚ, ಜೀರಿಗೆ – ಅರ್ಧ ಚಮಚ, ಅರಿಸಿನ – ಕಾಲು ಚಮಚ, ಖಾರದಪುಡಿ – ಅರ್ಧ ಚಮಚ, ಗರಂಮಸಾಲಾ ಪುಡಿ – ಮುಕ್ಕಾಲು ಚಮಚ, ಉಪ್ಪು- ರುಚಿಗೆ, ನಿಂಬೆರಸ – 1 ಟೀ ಚಮಚ, ಕೊತ್ತಂಬರಿ ಸೊಪ್ಪು – ಸ್ವಲ್ಪ

ತಯಾರಿಸುವ ವಿಧಾನ:

ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಬಿಸಿಯಾದ ನಂತರ ಜೀರಿಗೆ ಹಾಕಿ ಹುರಿಯಿರಿ. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಹುರಿಕೊಳ್ಳಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ಸಣ್ಣಗೆ ಹೆಚ್ಚಿದ ಟೊಮೆಟೊ, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಿಸಿನ ಹಾಕಿ ಟೊಮೆಟೊ ಮೃದುವಾಗುವವರೆಗೆ ಬೇಯಿಸಿ.

ನಂತರ ಮೆಣಸಿನಕಾಯಿ ಮತ್ತು ಗರಂ ಮಸಾಲಾ ಸೇರಿಸಿ ಮಿಶ್ರಣ ಮಾಡಿ, ನಂತರ ಕ್ಯಾಪ್ಸಿಕಂ ತುಂಡುಗಳನ್ನು ಹಾಕಿ ಸ್ವಲ್ಪ ಮೃದುವಾಗುವವರೆಗೆ ಬೇಯಿಸಿಕೊಳ್ಳಿ. ಪನೀರ್ ಅನ್ನು ಸಣ್ಣಗೆ ತುರಿದುಕೊಂಡು ಪ್ಯಾನ್‌ಗೆ ಸೇರಿಸಿ. ಉಪ್ಪು, ಮೆಣಸು ಮತ್ತು ಮಸಾಲೆಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು 2 ನಿಮಿಷಗಳ ಕಾಲ ಫ್ರೈ ಮಾಡಿ. ಕೊನೆಗೆ ಹೆಚ್ಚಿಟ್ಟುಕೊಂಡಿದ್ದ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಸ್ವಲ್ಪ ನಿಂಬೆ ರಸವನ್ನು ಹಿಂಡಿ. ಈಗ ನಿಮ್ಮ ಮುಂದೆ ರುಚಿಯಾದ ಪನೀರ್‌ ಬುರ್ಜಿ ಸವಿಯಲು ಸಿದ್ಧ.

Related post

ದಿನ‌ ಭವಿಷ್ಯ 13-05-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 13-05-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ. ಆದರೆ ತುಂಬಾ ಸಂತೋಷ ಸ್ವಲ್ಪ ಸಮಸ್ಯೆಗಳನ್ನು ಉಂಟುಮಾಡಬಹುದಾದ್ದರಿಂದ ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ನೀವು ಸಾಲ ತೆಗೆದುಕೊಳ್ಳಲು ಹೊರಟಿದ್ದರೆ ಮತ್ತು ಈ ಕೆಲಸದಲ್ಲಿ…

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…

Leave a Reply

Your email address will not be published. Required fields are marked *