ಅವಳಿ ಮಕ್ಕಳು ಹೊಟ್ಟೆಯಲ್ಲಿರುವಾಗಲೇ ನನಗೆ ಆ್ಯಕ್ಸಿಡೆಂಟ್ ಆಗಿತ್ತು – ಕರಾಳ ಘಟನೆ ನೆನೆದ ಬಿಗ್ಬಾಸ್ ವಿನ್ನರ್….!!

ಅವಳಿ ಮಕ್ಕಳು ಹೊಟ್ಟೆಯಲ್ಲಿರುವಾಗಲೇ ನನಗೆ ಆ್ಯಕ್ಸಿಡೆಂಟ್ ಆಗಿತ್ತು – ಕರಾಳ ಘಟನೆ ನೆನೆದ ಬಿಗ್ಬಾಸ್ ವಿನ್ನರ್….!!

ನ್ಯೂಸ್ ಆ್ಯರೋ : ಜಗತ್ತಿನಲ್ಲಿ ಅದೆಷ್ಟೇ ಶ್ರೀಮಂತರಾದರೂ, ಸೆಲೆಬ್ರೆಟಿಗಳಾದರೂ ಯಾರೂ ಕೇವಲ ಸುಖದಿಂದಲೇ ಕಷ್ಟವೇ ಇಲ್ಲದೆ ಜೀವನದಲ್ಲಿ ಯಶಸ್ವಿಯಾಗಿರುವುದಿಲ್ಲ. ಎಲ್ಲರ ಬದುಕಿನಲ್ಲಿ ಅವರದ್ದೇ ಆದ ಎದುರಿಸಿದ, ಅನುಭವಿಸಿದ ಕೆಲವು ಕೆಟ್ಟ ಘಟನೆಗಳು, ಕರಾಳ ನೆನಪುಗಳು ಇದ್ದೇ ಇರುತ್ತದೆ. ಅದಕ್ಕೆ ಪೂರಕವಾಗಿ ಈ ನಟಿಯೂ ಹೊರತಲ್ಲ ಬಿಡಿ. ಬಿಗ್ಬಾಸ್ ವಿನ್ನರ್ ತನ್ನ ಬದುಕಿನಲ್ಲಿ ನಡೆದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಹಿಂದಿ ಸೀಸನ್ 14’ರಲ್ಲಿ ಟ್ರೋಫಿ ಗೆಲ್ಲುವ ಮೂಲಕ ಕಿರುತೆರೆ ನಟಿ ರೂಬೀನಾ ದಿಲೈಕ್ ಸಾಕಷ್ಟು ಜನಪ್ರಿಯತೆ ಪಡೆದರು. ಈಗ ಅವರು ಗರ್ಭಿಣಿ ಆಗಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ರೂಬೀನಾ ಹಾಗೂ ಅವರ ಪತಿ ಅಭಿನವ್ ಶೀಘ್ರದಲ್ಲೇ ಅವಳಿ ಮಕ್ಕಳ ಪೋಷಕರಾಗಲಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ರೂಬೀನಾ ತಮ್ಮ ಅಭಿಮಾನಿಗಳಿಗೆ ಈ ಸಿಹಿ ಸುದ್ದಿ ನೀಡಿದ್ದರು. ಈಗ ಅವರು ಒಂದು ಶಾಕಿಂಗ್ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಕೂಡಾ ವೈರಲ್ ಆಗಿದೆ.

ಸಂದರ್ಶನವೊಂದರಲ್ಲಿ ರೂಬೀನಾ ಅವರು ಅಪಘಾತದ ಕಥೆಯನ್ನು ಹೇಳಿದ್ದಾರೆ. ರೂಬೀನಾ ಮೂರು ತಿಂಗಳ ಗರ್ಭಿಣಿಯಾಗಿದ್ದಾಗ ಅವರ ಕಾರು ಅಪಘಾತಕ್ಕೀಡಾಗಿತ್ತು. ಅನೇಕ ಸಮಸ್ಯೆಗಳನ್ನು ಆ ಸಂದರ್ಭ ಇವರು ಎದುರಿಸಿದ್ದರು. ಎಂದು ತಮ್ಮದೇ ಮಾತಿನಲ್ಲಿ ಹಂಚಿಕೊಂಡಿದ್ದಾರೆ.

‘ನಾವು ಅವಳಿ ಮಕ್ಕಳಿಗೆ ಪೋಷಕರಾಗಲಿದ್ದೇವೆ ಎಂದು ತಿಳಿದಾಗ ಅಭಿನವ್ ಶಾಕ್​ಗೆ ಒಳಗಾದರು. ಅವರಿಗೆ ಮಾತೇ ಹೊರಡಲಿಲ್ಲ. ನಾವಿಬ್ಬರೂ ಕಾರಿನಲ್ಲಿ ಹೋಗುವಾಗ ಮಾತೇ ಆಡಲಿಲ್ಲ. ನಾವು ಸಂತೋಷವಾಗಿರಲಿಲ್ಲ ಎಂದು ಅಲ್ಲ. ನನಗೆ ಅವಳಿ ಮಕ್ಕಳು ಜನಿಸುತ್ತವೆ ಎಂಬುದನ್ನು ನಮಗೆ ನಂಬಲಾಗಲಿಲ್ಲ. ಈ ಗುಡ್ ನ್ಯೂಸ್ ಅನ್ನು ಮೂರು ತಿಂಗಳವರೆಗೆ ಯಾರಿಗೂ ಹೇಳಬೇಡಿ ಎಂದು ವೈದ್ಯರು ಹೇಳಿದ್ದರು. ಮೂರು ತಿಂಗಳ ನಂತರ ಪರೀಕ್ಷೆ ಮಾಡಿಸಿದೆವು. ಅವಳಿ ಮಕ್ಕಳು ಜನಿಸುತ್ತಿರುವ ವಿಚಾರ ನಮಗೆ ಖುಷಿ ತಂದಿತ್ತು’ ಎಂದಿದ್ದಾರೆ ರೂಬೀನಾ.

ಈ ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದಾಗ ಅಭಿನವ್ ಮತ್ತು ರೂಬೀನಾ ಅವರ ಕಾರು ಅಪಘಾತಕ್ಕೀಡಾಗಿದೆ. ‘ತಪಾಸಣೆ ಮುಗಿಸಿ ನಾವು ಮನೆಗೆ ಹೋಗುತ್ತಿದ್ದಾಗ ನಮ್ಮ ಕಾರು ಅಪಘಾತಕ್ಕೀಡಾಯಿತು. ಹಿಂದಿನಿಂದ ನಮ್ಮ ಕಾರಿಗೆ ಟ್ರಕ್ ಡಿಕ್ಕಿ ಹೊಡೆಯಿತು. ಆ ಸಮಯದಲ್ಲಿ ನನ್ನ ತಲೆ ಮತ್ತು ಬೆನ್ನಿಗೆ ಪೆಟ್ಟಾಯಿತು. ಆ ಘಟನೆಯನ್ನು ನೆನಪಿಸಿಕೊಂಡರೆ ನನಗೆ ಈಗಲೂ ಭಯವಾಗುತ್ತದೆ. ಅದು ನನಗೆ ತುಂಬಾ ಕೆಟ್ಟ ಸಮಯವಾಗಿತ್ತು. ಆ ಬಳಿಕ ಮತ್ತೆ ಪರೀಕ್ಷೆ ಮಾಡಿಸಿದೆವು. ಎರಡೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿಯಿತು. ದೇವರ ದಯೆಯಿಂದ ಎಲ್ಲವೂ ಸರಿ ಆಯಿತು. ಇಂದಿಗೂ ಆ ಘಟನೆಯನ್ನು ನೆನೆದಾಗ ನನ್ನ ಹೃದಯ ಜೋರಾಗಿ ಬಡಿದುಕೊಳ್ಳುತ್ತದೆ’ ಎಂದಿದ್ದಾರೆ ಅವರು.

ರೂಬೀನಾ ಹಿನ್ನೆಲೆ:

ರೂಬೀನಾ ಮತ್ತು ಅಭಿನವ್ 2018ರಲ್ಲಿ ವಿವಾಹವಾದರು. ಇವರಿಬ್ಬರೂ ‘ಬಿಗ್ ಬಾಸ್ ಹಿಂದಿ 14’ನೇ ಸೀಸನ್​ನಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಅಕ್ಟೋಬರ್ 2020ರಿಂದ ಫೆಬ್ರವರಿ 2021ರವರೆಗೆ ಈ ಶೋ ನಡೆಯಿತು. ರೂಬೀನಾ ಗೆದ್ದರು. ರೂಬೀನಾ 2008ರಲ್ಲಿ ಕಿರುತೆರೆಗೆ ಕಾಲಿಟ್ಟರು. ಹಲವು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ.

Related post

ದಿನ‌ ಭವಿಷ್ಯ 13-05-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 13-05-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ. ಆದರೆ ತುಂಬಾ ಸಂತೋಷ ಸ್ವಲ್ಪ ಸಮಸ್ಯೆಗಳನ್ನು ಉಂಟುಮಾಡಬಹುದಾದ್ದರಿಂದ ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ನೀವು ಸಾಲ ತೆಗೆದುಕೊಳ್ಳಲು ಹೊರಟಿದ್ದರೆ ಮತ್ತು ಈ ಕೆಲಸದಲ್ಲಿ…

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…

Leave a Reply

Your email address will not be published. Required fields are marked *