
Garlic Tea Recipe : ಬೆಳ್ಳುಳ್ಳಿ ಚಹಾ ಕುಡಿಯೋದ್ರಿಂದ ಆರೋಗ್ಯಕ್ಕಿದೆ ಲಾಭ – ಮಾಡುವ ವಿಧಾನ ಇಲ್ಲಿದೆ ನೋಡಿ…
- ನಳಪಾಕ
- September 1, 2023
- No Comment
- 40
ನ್ಯೂಸ್ ಆ್ಯರೋ : ಶುಂಠಿ ಚಹಾ, ಪುದೀನಾ ಟೀ ಹೀಗೆ ವಿವಿಧ ಬಗೆಯ ಪಾನೀಯಗಳ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಆದರೆ ಬೆಳ್ಳುಳ್ಳಿ ಚಹಾದ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಬೆಳ್ಳುಳ್ಳಿ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಈ ಚಹಾವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಬೆಳ್ಳುಳ್ಳಿ ಎಂಟಿಬ್ಯಾಕ್ಟೀರಿಯಲ್ ಮತ್ತು ಎಂಟಿವೈರಲ್ ಗುಣಗಳನ್ನು ಹೊಂದಿದೆ. ಬೆಳ್ಳುಳ್ಳಿ ಚಹಾಕ್ಕೆ ಸ್ವಲ್ಪ ಶುಂಠಿ ಮತ್ತು ದಾಲ್ಚಿನ್ನಿ ಸೇರಿಸಬಹುದು.
ಪ್ರತಿದಿನ ಬೆಳಗ್ಗೆ ಬೆಳ್ಳುಳ್ಳಿ ಟೀ ಕುಡಿಯುವುದರಿಂದ ಎಷ್ಟೆಲ್ಲ ಆರೋಗ್ಯ ಪ್ರಯೋಜನಗಳಿವೆ ಅಂತ ಅನೇಕರಿಗೆ ತಿಳಿದಿಲ್ಲ. ಈ ಚಹಾವನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಬೆಳ್ಳುಳ್ಳಿ ಟೀ ಕುಡಿದರೆ ಹಲವು ರೀತಿಯ ಕಾಯಿಲೆಗಳು ದೂರವಾಗುತ್ತವೆ. ಬೆಳ್ಳುಳ್ಳಿ ಟೀ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಬೆಳ್ಳುಳ್ಳಿಯಲ್ಲಿ ಆಂಟಿವೈರಲ್ ಗುಣವಿದೆ. ಇದಕ್ಕೆ ಸ್ವಲ್ಪ ಶುಂಠಿ ಮತ್ತು ದಾಲ್ಚಿನ್ನಿ ಕೂಡ ಸೇರಿಸಬಹುದು. ಇದರಿಂದ ಆರೋಗ್ಯ ಸುಧಾರಿಸುತ್ತದೆ. ಚಹಾದ ರುಚಿ ಹೆಚ್ಚುತ್ತದೆ.
ಬೆಳ್ಳುಳ್ಳಿ ಟೀ ಶಕ್ತಿಯುತ ರೋಗನಿರೋಧಕ ಪಾನೀಯವಾಗಿದೆ. ಬೆಳ್ಳುಳ್ಳಿ ಟೀ ಕುಡಿಯುವುದರಿಂದ ದೇಹದ ಊತ ಕಡಿಮೆಯಾಗುತ್ತದೆ. ಮಧುಮೇಹ ರೋಗಿಗಳಿಗೆ ಬೆಳ್ಳುಳ್ಳಿ ಟೀ ತುಂಬಾ ಪ್ರಯೋಜನಕಾರಿ. ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಅದರೊಂದಿಗೆ, ಚಯಾಪಚಯವು ಹೆಚ್ಚಾಗುತ್ತದೆ.
ಬೆಳ್ಳುಳ್ಳಿ ಚಹಾವನ್ನು ಕುಡಿಯುವುದರಿಂದ ದೇಹದಿಂದ ವಿಷ ಮತ್ತು ತ್ಯಾಜ್ಯವನ್ನು ತೆಗೆದುಹಾಕುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ತೂಕವನ್ನು ಕಳೆದುಕೊಳ್ಳಬಹುದು. ಈ ಚಹಾ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ, ರಕ್ತನಾಳಗಳು ಶುದ್ಧವಾಗುತ್ತವೆ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ಹೃದಯವನ್ನು ಇತರ ಕಾಯಿಲೆಗಳಿಂದ ರಕ್ಷಿಸುತ್ತದೆ, ಬೆಳ್ಳುಳ್ಳಿ ಟೀ ಉಸಿರಾಟದ ಸಮಸ್ಯೆಗಳಿಗೆ ಪರಿಪೂರ್ಣ ಪರಿಹಾರವಾಗಿದೆ. ಜ್ವರ ಮತ್ತು ಶೀತವನ್ನು ಕಡಿಮೆ ಮಾಡುತ್ತದೆ.
ಬೆಳ್ಳುಳ್ಳಿ ಚಹಾವು ಉಸಿರಾಟದ ಕಾಯಿಲೆಗಳಿಂದ ರಕ್ಷಿಸುತ್ತದೆ. ಚಳಿಗಾಲದಲ್ಲಿ ಜ್ವರ ಮತ್ತು ಕೆಮ್ಮು ನಿವಾರಣೆಗೂ ಇದನ್ನು ಸೇವಿಸಬಹುದು. ಈ ಚಹಾವು ಶಕ್ತಿಯುತವಾದ ಪ್ರತಿಜೀವಕ ಪಾನೀಯವಾಗಿದೆ, ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಬೆಳ್ಳುಳ್ಳಿ ಟೀ ದೇಹದಿಂದ ಉರಿಯೂತವನ್ನು ಕಡಿಮೆ ಮಾಡುತ್ತದೆ.
ಈಗ ಬೆಳ್ಳುಳ್ಳಿ ಟೀ ಮಾಡುವುದು ಹೇಗೆ?
ಮೊದಲು ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ನೀರು ಹಾಕಿ ಕುದಿಸಿ. ಅದರ ನಂತರ ಪುಡಿಮಾಡಿದ ಬೆಳ್ಳುಳ್ಳಿ, ಸ್ವಲ್ಪ ಹುರಿದ ಕರಿಮೆಣಸಿನ ಪುಡಿಯನೂ ಸಹ ಸೇರಿಸಿ ಕುದಿಸಿ, ಅಂತಿಮವಾಗಿ, ಅದನ್ನು ಬೆಳಿಗ್ಗೆ ಬೇಗನೆ ಫಿಲ್ಟರ್ ಮಾಡಿ ಕುಡಿಯಬೇಕು. ರುಚಿಗೆ ಸ್ವಲ್ಪ ಶುಂಠಿ ಮತ್ತು ದಾಲ್ಚಿನ್ನಿ ಸೇರಿಸಬಹುದು.