ಅರ್ನಬ್‌ ಗೋಸ್ವಾಮಿ ತೆಕ್ಕೆಗೆ ಬಿತ್ತು ‘ದಿಗ್ವಿಜಯ ಚಾನೆಲ್’ – ವಾಹಿನಿಯ ಹೊಸ ಹೆಸರು ಏನಿರಲಿದೆ ಗೊತ್ತಾ?

ಅರ್ನಬ್‌ ಗೋಸ್ವಾಮಿ ತೆಕ್ಕೆಗೆ ಬಿತ್ತು ‘ದಿಗ್ವಿಜಯ ಚಾನೆಲ್’ – ವಾಹಿನಿಯ ಹೊಸ ಹೆಸರು ಏನಿರಲಿದೆ ಗೊತ್ತಾ?

ನ್ಯೂಸ್ ಆ್ಯರೋ : ಖ್ಯಾತ ಉದ್ಯಮಿ, VRL ಮಾಲೀಕ ವಿಜಯ ಸಂಕೇಶ್ವರ ಮಾಲೀಕತ್ವದ ಸಂಸ್ಥೆಯ ‘ದಿಗ್ವಿಜಯ’ ಸುದ್ದಿ ವಾಹಿನಿಯನ್ನು ಅರ್ನಬ್ ಗೋಸ್ವಾಮಿ ನೇತೃತ್ವದ ‘ರಿಪಬ್ಲಿಕ್’ ವಾಹಿನಿ ಖರೀದಿಸಿದೆ.

ರಾಷ್ಟ್ರಮಟ್ಟದಲ್ಲಿ ಸತತ 5 ವರ್ಷಗಳಿಂದ ನಂಬರ್ ಒನ್ ಸ್ಥಾನದಲ್ಲಿರುವ ರಿಪಬ್ಲಿಕ್ ವಾಹಿನಿಯೊಂದಿಗೆ ದಿಗ್ವಿಜಯ ಟಿವಿ ಚಾನೆಲ್ ವಿಲೀನ ಮಾಡಲಾಗಿದೆ. ಕೆಲವು ತಿಂಗಳ ಕಾಲ ದಿಗ್ವಿಜಯ ಹೆಸರಿನಲ್ಲಿಯೇ ಸುದ್ದಿವಾಹಿನಿ ಮುಂದುವರೆಯಲಿದ್ದು, ನಂತರ ‘ರಿಪಬ್ಲಿಕ್ ಕನ್ನಡ’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲಿದೆ.

ಕಳೆದ ವಾರವೇ ಮಾಲೀಕತ್ವ ಹಸ್ತಾಂತರ ಪ್ರಕ್ರಿಯೆ ಮುಗಿದಿದೆ. ದಿಗ್ವಿಜಯ ವಾಹಿನಿಯ ಸ್ಟುಡಿಯೋದಿಂದಲೇ ರಿಪಬ್ಲಿಕ್ ಟಿವಿಯ ರಾತ್ರಿ ಕಾರ್ಯಕ್ರಮದಲ್ಲಿ ಅರ್ನಬ್ ಗೋಸ್ವಾಮಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

2017ರಲ್ಲಿ ವಿ.ಆರ್.ಎಲ್. ಸಂಸ್ಥೆಯಿಂದ ದಿಗ್ವಿಜಯ ಟಿವಿ ಚಾನೆಲ್ ಆರಂಭಿಸಲಾಗಿತ್ತು. ಇದೇ ವರ್ಷ ಅರ್ನಬ್ ಗೋಸ್ವಾಮಿ ಆರಂಭಿಸಿದ್ದ ರಿಪಬ್ಲಿಕ್ ವಾಹಿನಿ ಮೊದಲ ವಾರದಿಂದಲೇ ಟಿ.ಆರ್.ಪಿ. ಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ರಿಪಬ್ಲಿಕ್ ಭಾರತ್, ರಿಪಬ್ಲಿಕ್ ವರ್ಲ್ಡ್, ರಿಪಬ್ಲಿಕ್ ಬಾಂಗ್ಲಾ ಚಾನೆಲ್ ಮೂಲಕ ಹಿಂದಿ, ಇಂಗ್ಲಿಷ್, ಬಂಗಾಳಿ ಭಾಷೆಯಲ್ಲಿ ರಿಪಬ್ಲಿಕ್ ವಾಹಿನಿ ಕಾರ್ಯನಿರ್ವಹಿಸುತ್ತಿದ್ದು, ಇನ್ನು ಕನ್ನಡದಲ್ಲಿಯೂ ರಿಪಬ್ಲಿಕ್ ವಾಹಿನಿ ಕಾರ್ಯನಿರ್ವಹಿಸಲಿದೆ.

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *