
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯಗೆ ಆಪ್ತ ಸಹಾಯಕ ನೇಮಕ ಮಾಡಿದ ಸರ್ಕಾರ – ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಪಿಡಿಒ ಅವಿನಾಶ್‌ಗೆ ಸೂಚನೆ
- ರಾಜಕೀಯ
- September 15, 2023
- No Comment
- 37
ನ್ಯೂಸ್ ಆ್ಯರೋ : ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರ ಆಪ್ತ ಸಹಾಯಕರಾಗಿ, ಒಳಮೊಗ್ರು ಗ್ರಾಮ ಪಂಚಾಯತ್ ನ ಪಿಡಿಒ ಅವಿನಾಶ್ ಬಿ ಆರ್ ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಆಪ್ತ ಸಹಾಯಕ ಹುದ್ದೆಗೆ ಕೂಡಲೇ ಕರ್ತವ್ಯಕ್ಕೆ ಹಾಜರಾಗಿ, ಕಾರ್ಯವರದಿಯನ್ನು ಕಳುಹಿಸಿ ಕೊಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಆಯುಕ್ತರು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಮತಿ ನೀಡಿದೆ.


ದಕ್ಷಿಣ ಕನ್ನಡದ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಸುಳ್ಯದಲ್ಲಿ ಗೆಲುವು ತಂದುಕೊಟ್ಟಿದ್ದರು. ಕರಾವಳಿ ಕರ್ನಾಟಕದಿಂದ ವಿಧಾನಸಭೆಗೆ ಪ್ರವೇಶಿಸಿದ ಮೊದಲ ದಲಿತ ಮಹಿಳೆ ಇವರಾಗಿದ್ದಾರೆ.
48 ವರ್ಷದ ಮುರುಳ್ಯ ಅವರು ತಮ್ಮ ಸಮೀಪದ ಎದುರಾಳಿ ಕಾಂಗ್ರೆಸ್‌ನ ಜಿ.ಕೃಷ್ಣಪ್ಪ ಅವರನ್ನು 30,864 ಮತಗಳ ಅಂತರದಿಂದ ಸೋಲಿಸಿದ್ದಾರೆ. ಮುರುಳ್ಯ ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಸುಳ್ಯ ತಾಲೂಕು ಪಂಚಾಯತ್ ಮಾಜಿ ಸದಸ್ಯರಾಗಿದ್ದರು.