
ರಾಹುಲ್ ಗಾಂಧಿಗೆ 3 ವರ್ಷಗಳ ಕಾಲ ಸಾಮಾನ್ಯ ಪಾಸ್‌ಪೋರ್ಟ್ – ದಿಲ್ಲಿ ಕೋರ್ಟ್ ಆದೇಶ ಏನಿದೆ?
- ರಾಜಕೀಯ
- May 26, 2023
- No Comment
- 27
ನ್ಯೂಸ್ ಆ್ಯರೋ : ದ್ವೇಷ ಭಾಷಣ ಮಾಡಿರುವ ಹಿನ್ನಲೆಯಲ್ಲಿ ಸಂಸದ ಸ್ಥಾನದಿಂದ ಅನರ್ಹವಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಇದೀಗ ದಿಲ್ಲಿ ನ್ಯಾಯಾಲಯ ಸಾಮಾನ್ಯ ಪಾಸ್ ಪೋರ್ಟ್ ಪಡೆಯಲು ಮೂರು ವರ್ಷಗಳ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್‍ಒಸಿ) ವನ್ನು ನೀಡಿದೆ.
ರಾಹುಲ್ ಗಾಂಧಿ ಅನರ್ಹತೆಯ ನಂತರ ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ನ್ನು ಸರಾಕಾರಕ್ಕೆ ಒಪ್ಪಿಸಿದ್ದಾರೆ. ಹೀಗಾಗಿ ಅವರು ಎನ್‌ಒಸಿಗಾಗಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. 10 ವರ್ಷಗಳ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರೂ 3 ವರ್ಷಗಳ ಅನುಮತಿ ಮಾತ್ರ ನೀಡಿದೆ.
ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಆರೋಪಿಯಾಗಿದ್ದಾರೆ. ಅಲ್ಲದೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಹಾಗೂ ಹಣಕಾಸು ದುರ್ಬಳಕೆ ಆರೋಪಗಳೂ ಇವರ ಮೇಲಿದೆ. ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಎನ್‌ಒಸಿಯನ್ನು ಕೋರಿ ರಾಹುಲ್ ಗಾಂಧಿ ಸಲ್ಲಿಸಿದ ಮನವಿಗೆ ಶುಕ್ರವಾರದೊಳಗೆ ಉತ್ತರ ಸಲ್ಲಿಸುವಂತೆ ನ್ಯಾಯಾಲಯವು ಬುಧವಾರ ಸುಬ್ರಹ್ಮಣ್ಯನ್ ಸ್ವಾಮಿ ಅವರಿಗೆ ಸೂಚಿಸಿತ್ತು.
ಇಂದಿನ ವಿಚಾರಣೆ ವೇಳೆ ಮೆಟ್ರೋಪಾಲಿಟನ್ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿ ವೈಭವ್ ಮೆಹ್ತಾ ರಾಹುಲ್ ಗಾಂಧಿ ಅವರಿಗೆ ಪ್ರಯಾಣ ಮಾಡುವ ಮೂಲಭೂತ ಹಕ್ಕು ಇದೆ. ಇದಕ್ಕೆ ನಾವು ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.