
ಶ್ರೀ ರಾಮರಕ್ಷಾಸ್ತೋತ್ರದ 36ನೇ ಶ್ಲೋಕ ಹಾಗೂ ಅದರ ಅರ್ಥ ಇಲ್ಲಿದೆ…
- Religious
- May 27, 2023
- No Comment
- 19
ಶ್ಲೋಕ
ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ | ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್
ಅರ್ಥ
ಕವಿತಾರೂಪದ ಟೊಂಗೆಯ ಮೇಲೆ ಕುಳಿತು ‘ರಾಮ, ರಾಮ’ ಎಂದು ಸುಮಧುರವಾಗಿ ಕೂಗುವ, ವಾಲ್ಮೀಕಿ ಎಂಬ ಕೋಗಿಲೆಗೆ – ಅಂದರೆ ಕಾವ್ಯರೂಪದಲ್ಲಿ ಶ್ರೀರಾಮನ ಗುಣಕಥನವನ್ನು ಮಾಡಿದ ಕವಿ ವಾಲ್ಮೀಕಿಗೆ, ನಾನು ನಮಸ್ಕರಿಸುವೆನು. ||36||