
ನಿತಿನ್ ಗಡ್ಕರಿಗೆ ‘ಲೋ ಶುಗರ್’ – ವೇದಿಕೆಯ ಮೇಲೆ ಇದ್ದಕ್ಕಿದ್ದಂತೆ ಅಸ್ವಸ್ಥರಾದ ಕೇಂದ್ರ ಸಚಿವ
- ರಾಷ್ಟ್ರೀಯ ಸುದ್ದಿ
- November 17, 2022
- No Comment
- 594
ನ್ಯೂಸ್ ಆ್ಯರೋ : ರಸ್ತೆಯ ಶಂಕು ಸ್ಥಾಪನೆ ಮಾಡಲು ಪಶ್ಚಿಮಬಂಗಾಳದ ಸಿಲಿಗುರಿಗೆ ಬಂದಿದ್ದ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಮಂತ್ರಿ ನಿತಿನ್ ಗಡ್ಕರಿ ಅವರು ವೇದಿಕೆಯ ಮೇಲೆ ಕುಳಿತಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.
ಪಶ್ಚಿಮ ಬಂಗಾಳದ ಶಿವಮಂದಿರದಿಂದ ಸೇವಕ್ ಕಂಟೋನ್ಮೆಂಟ್‌ವರೆಗಿನ ರಸ್ತೆಯ ಶಂಕುಸ್ಥಾಪನೆ ಮಾಡಲು ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರು.
ಆದರೆ ಒಂದೇ ಕ್ಷಣ ಇವರಿಗೆ ಸಕ್ಕರೆ ಪ್ರಮಾಣ ಇಳಿಕೆಯಾಗಿದೆ. ಅನಾರೊಗ್ಯಕ್ಕೆ ತುತ್ತಾದ ತಕ್ಷಣ ಇವರನ್ನು ವೇದಿಕೆಯು ಹಿಂಭಾಗದಲ್ಲಿ ಗ್ರೀನ್ ರೂಂಗೆ ಕರೆತಂದರೂ ಆರೋಗ್ಯ ಸ್ಥಿತಿ ಹತೋಟಿಗೆ ತರಲಾಗಲಿಲ್ಲ.
ನಂತರ ವೈದ್ಯರನ್ನು ಕರೆಸಿ ಆರೋಗ್ಯ ಸ್ವಲ್ಪ ಸುಧಾರಿಸಿದ ನಂತರ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಆ ಕಾರ್ಯಕ್ರಮವೇ ರದ್ದಾಗಿರಬಹುದು ಎಂದು ತಿಳಿದುಬಂದಿದೆ. ಇವರ ಚಿಕಿತ್ಸೆಗೆ ಮನೆಯಲ್ಲಿಯೇ ವ್ಯವಸ್ಥೆ ಮಾಡಲಾಗಿದೆ.