ತಿರುಪತಿ ದೇಗುಲದಲ್ಲಿ ಮುಡಿ ಕೊಡುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ – ಬರೇ ತಲೆಗೂದಲು ಮಾರಾಟದಿಂದ ಟಿಟಿಡಿ ಎಷ್ಟು ಕೋಟಿ ಗಳಿಸಿದೆ ಗೊತ್ತಾ?

ತಿರುಪತಿ ದೇಗುಲದಲ್ಲಿ ಮುಡಿ ಕೊಡುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ – ಬರೇ ತಲೆಗೂದಲು ಮಾರಾಟದಿಂದ ಟಿಟಿಡಿ ಎಷ್ಟು ಕೋಟಿ ಗಳಿಸಿದೆ ಗೊತ್ತಾ?

ನ್ಯೂಸ್ ಆ್ಯರೋ‌ : ತಿರುಪತಿ ತಿರುಮಲ ದೇವಸ್ಥಾನದಲ್ಲಿ ತಲೆ ಕೂದಲು ಅರ್ಪಿಸಿ ಮುಡಿ ಕೊಡುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದ ಟಿಟಿಡಿ(ತಿರುಮಲ ತಿರುಪತಿ ದೇವಸ್ಥಾನ)ಗೆ ಉತ್ತಮ ಆದಾಯ ಹರಿದು ಬರುತ್ತಿದೆ. ಮುಡಿ ಕೊಡುವ ಪ್ರಕ್ರಿಯೆಯನ್ನು ಇನ್ನಷ್ಟು ಸುವ್ಯವಸ್ಥಿತಗೊಳಿಸಿರುವುದು ಕೂಡ ಆದಾಯ ಹೆಚ್ಚಲು ಕಾರಣ ಎನ್ನಲಾಗಿದೆ.

ದಾಖಲೆಯ ಆದಾಯ

ಭಕ್ತರು ತಲೆ ಕೂದಲು ಕೊಡುವುದರಿಂದ ಟಿಟಿಡಿ ಈ ವರ್ಷ ದಾಖಲೆಯ ಪ್ರಮಾಣದ ಆದಾಯ ಗಳಿಸಿದೆ. ಅಂದಾಜಿನ ಪ್ರಕಾರ ಈ ವರ್ಷ 120 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಟಿಟಿಡಿ ತಲೆ ಕೂದಲನ್ನು ಶ್ರೇಣಿಗಳಾಗಿ ವಿಂಗಡಿಸಿ ಪ್ರತಿ ವರ್ಷ ನಾಲ್ಕು ಬಾರಿ ಹರಾಜು ಪ್ರಕ್ರಿಯೆ ನಡೆಸಿ ಮಾರಾಟ ಮಾಡುತ್ತದೆ. ಮೊದಲ ಮೂರು ಶ್ರೇಣಿಗಳಲ್ಲಿ ಹೇರ್ ಡೈ ಮತ್ತು ಕಪ್ಪು ಕೂದಲನ್ನು ಪ್ರತ್ಯೇಕಿಸಿ 2 ವಿಧಗಳಾಗಿ ವಿಂಗಡಿಸಲಾಗುತ್ತದೆ. ಕೊರೊನಾ ಬಳಿಕ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚಿದ್ದು, ಕೂದಲನಿಂದಲೂ ಬರುವ ಆದಾಯ ವೃದ್ದಿಸಿದೆ.

ಐದಾರು ವರ್ಷಗಳಿಂದ ಟಿಟಿಡಿಯ ವಾರ್ಷಿಕ ಆದಾಯ 120 ಕೋಟಿ ರೂ.ಗಿಂತ ಅಧಿಕವಾಗಿದ್ದರೆ ಈ ಬಾರಿಯ ಸಂಗ್ರಹ ಈಗಾಗಲೇ 120 ಕೋಟಿ ರೂ. ದಾಟಿದೆ. ಈಗಾಗಲೇ 2 ಬಾರಿ ಕೂದಲು ಹರಾಜು ನಡೆಸಲಾಗಿದ್ದು, ಇನ್ನೂ 2 ಬಾರಿ ಈ ಪ್ರಕ್ರಿಯೆ ಆಯೋಜಿಸಲಿದೆ.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *