ಮಾರುತಿ ಸುಜುಕಿಯಿಂದ ಗುಡ್ ನ್ಯೂಸ್ – ಶೀಘ್ರದಲ್ಲೇ 35 ಕಿ.ಮೀ. ಮೈಲೇಜ್ ನೀಡುವ ಸ್ವಿಫ್ಟ್, ಡಿಸೈರ್ ಬಿಡುಗಡೆ

ಮಾರುತಿ ಸುಜುಕಿಯಿಂದ ಗುಡ್ ನ್ಯೂಸ್ – ಶೀಘ್ರದಲ್ಲೇ 35 ಕಿ.ಮೀ. ಮೈಲೇಜ್ ನೀಡುವ ಸ್ವಿಫ್ಟ್, ಡಿಸೈರ್ ಬಿಡುಗಡೆ

ನ್ಯೂಸ್ ಆ್ಯರೋ‌ : ಕಾರು ಪ್ರಿಯರಿಗೆ ಮಾರುತಿ ಸುಜುಕಿ ಗುಡ್ ನ್ಯೂಸ್ ನೀಡಿದೆ. ಕೈಗೆಟುಕುವ ಬೆಲೆಯಲ್ಲಿ ಕಾರು ಹೊರತಂದು ಕೋಟ್ಯಾಂತರ ಮಂದಿಯ ಕನಸು ನನಸಾಗಿದ್ದ ಕಂಪೆನಿ ಇದೀಗ ಇನ್ನೊಂದು ಮೈಲುಗಲ್ಲು ನೆಡಲು ಮುಂದಾಗಿದೆ. ಅತ್ಯುತ್ತಮ ಮೈಲೇಜ್ ನೀಡಬಲ್ಲ ಕಾರು ಬಿಡುಗಡೆ ನಡೆಸಲು ಯೋಜನೆ ರೂಪಿಸಿರುವುದಾಗಿ ಕಂಪೆನಿ ಹೇಳಿದೆ.

35-40 ಕಿ.ಮೀ. ಮೈಲೇಜ್

ಮಾರುತಿ ಸುಜುಕಿಯ ಜನಪ್ರಿಯ ಸ್ವಿಫ್ಟ್ ಮತ್ತು ಡಿಸೈರ್ ಮಾಡೆಲ್ ಗಳ ಹೈಬ್ರಿಡ್ ಆವೃತ್ತಿ ಬಿಡುಗಡೆ ಮಾಡಲು ತಯಾರಿ ನಡಯುತ್ತಿದೆ. ಈ ಆವೃತ್ತಿಯಲ್ಲಿ 1 ಲೀಟರ್ ಪೆಟ್ರೋಲ್ ಗೆ 35-40 ಕಿ.ಮೀ. ಮೈಲೇಜ್ ದೊರೆಯಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ ಪ್ರತಿ ಲೀಟರ್ ಗೆ 22 ಕಿ.ಮೀ. ಮತ್ತು ಡಿಸೈರ್ 24 ಕಿ.ಮೀ. ಮೈಲೇಜ್ ನೀಡುತ್ತಿದೆ. ಇದೇ ಕಾರುಗಳನ್ನು ಹೈಬ್ರಿಡ್ ಮಾದರಿಯಲ್ಲಿ ಬಿಡುಗಡೆ ಮಾಡಿದರೆ ಮೈಲೇಜ್ ಹೆಚ್ಚಾಗಲಿದೆ ಎಂದು ಕಂಪೆನಿ ಹೇಳಿದೆ. ಇದಕ್ಕೆ ಬೆಲೆಯೂ ಕೊಂಚ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಬೇಡಿಕೆ ಇರುವ ಸ್ವಿಫ್ಟ್ ಗೆ ಹೈಬ್ರಿಡ್ ಆವೃತ್ತಿ ಬಳಿಕ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.

ಮಾರುತಿ ಸುಜುಕಿ ಈಗಾಗಲೇ ಬ್ರೀಜಾ, ಗ್ರ್ಯಾಂಡ್ ವಿಟಾರ, ಸಿಯಾಜ್ ಹೈಬ್ರಿಡ್ ಕಾರುಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಸ್ವಿಫ್ಟ್ ಮತ್ತು ಡಿಸೈರ್ ಕೂಡ ಅದೇ ದಾರಿ ಹಿಡಿಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *