ಪ್ರಧಾನಿ ಮೋದಿ ಭಾರತ್ ಶಕ್ತಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ IAF ತೇಜಸ್ ಏರ್ ಕ್ರಾಫ್ಟ್ ಪತನ – ಪವಾಡಸದೃಶ ರೀತಿಯಲ್ಲಿ ಬದುಕುಳಿದ ಪೈಲೆಟ್

ಪ್ರಧಾನಿ ಮೋದಿ ಭಾರತ್ ಶಕ್ತಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ IAF ತೇಜಸ್ ಏರ್ ಕ್ರಾಫ್ಟ್ ಪತನ – ಪವಾಡಸದೃಶ ರೀತಿಯಲ್ಲಿ ಬದುಕುಳಿದ ಪೈಲೆಟ್

ನ್ಯೂಸ್ ಆ್ಯರೋ : ಪ್ರಧಾನಿ ನರೇಂದ್ರ ಮೋದಿ ಭಾರತದ ರಕ್ಷಣಾ ಪರಾಕ್ರಮ ಪ್ರದರ್ಶನ ಭಾರತ್ ಶಕ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇಶದ ರಕ್ಷಣಾ ಕ್ಷೇತ್ರದ ಶಸ್ತ್ರ ಸಾಮರ್ಥ್ಯ ವೀಕ್ಷಿಸಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ತೆರಳಿದ ಭಾರತದ ಮೊದಲ IAF ತೇಜಸ್ ಫೈಟರ್ ಏರ್‌ಕ್ರಾಫ್ಟ್ ಪತನಗೊಂಡಿದೆ.

ರಕ್ಷಣಾ ಕ್ಷೇತ್ರದ  ಶಸ್ತ್ರಾಸ್ತ್ರ , ಫೈರಿಂಗ್ ರೇಜ್ ಪ್ರದರ್ಶನ ಹಾಗೂ ಸಮರಾಭ್ಯಾಸ ಪರಾಕ್ರಮಗಳ ಕಾರ್ಯಕ್ರಮಕ್ಕೆ ಭಾರತದ ಮೊದಲ ಇಂಡಿಜೀನಿಯಸ್ ಏರ್‌ಕ್ರಾಫ್ಟ್ ತೇಜಸ್ ಮಾರ್ಗಮಧ್ಯ ಪತನಗೊಂಡಿದೆ. ಏರ್‌ಕ್ರಾಫ್ಟ್ ಪತನಗೊಳ್ಳುತ್ತಿದ್ದಂತೆ ಪೈಲೆಟ್ ಸುರಕ್ಷಿತವಾಗಿ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.

ಜೈಸಲ್ಮೇರ್ ಬಳಿ ತೇಜಸ್ ಹೆಲಿಕಾಪ್ಟರ್ ಪತನಗೊಂಡಿದ್ದು, 2001ರಲ್ಲಿ ಬೆಂಗಳೂರಿನ ಹೆಚ್ಎಎಲ್ ಕೇಂದ್ರ ಈ ಫೈಟರ್ ಏರ್‌ಕ್ರಾಫ್ಟ್ ಅಭಿವೃದ್ಧಿಪಡಿಸಿತ್ತು. ಕಳೆದ 23 ವರ್ಷಗಳಲ್ಲಿ ತೇಜಸ್ ಪತನವಾದ ಮೊದಲ ಘಟನೆ ಇದಾಗಿದೆ.  

ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಈ  IAF ತೇಜಸ್ ಭಾರತದ ಮೊದಲ ಇಂಡಿಜಿನಿಯಸ್ ಏರ್‌ಕ್ರಾಫ್ಟ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಇದೀಗ ಏರ್‌ಕ್ರಾಫ್ಟ್ ಪತನಗೊಂಡಿದೆ.

IAF ತೇಜಸ್ ಭಾರತದ ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ. ಇದು ಸಿಂಗಲ್ ಸೀಟರ್ ಫೈಟರ್ ಏರ್‌ಕ್ರಾಫ್ಟ್ ಆಗಿದೆ. ಈ ವಿಭಾಗದಲ್ಲಿ ಟ್ವಿನ್ ಸೀಟರ್(ತರಬೇತಿ)ವೇರಿಯೆಂಟ್ ಕೂಡ ಭಾರತೀಯ ವಾಯುಸೇನೆ ನಿರ್ವಹಣೆ ಮಾಡುತ್ತಿದೆ. ಭಾರತೀಯ ನೌಕಾಸೇನೆ ಟ್ವಿನ್ ಸೀಟರ್ ಫೈಟರ್ ಏರ್‌ಕ್ರಾಪ್ಟ್ ಬಳಕೆ ಮಾಡುತ್ತಿದೆ. 

ಲಘು ಯುದ್ಧ ವಿಮಾನ ತೇಜಸ್ 4.5 ಜನರೇಶನ್ ವಿಮಾನವಾಗಿದೆ. ಭೂ ಕಾರ್ಯಾಚರಣೆಗೆ ಪ್ರಮುಖವಾಗಿ ತೇಜಸ್ ಏರ್‌ಕ್ರಾಫ್ಟ್ ಬಳಸಲಾಗುತ್ತದೆ. ಆಕ್ರಮಣಕಾರಿ ವಾಯು ಬೆಂಬಲದ ಜೊತೆ ಭೂ ಕಾರ್ಯಾಚರಣೆಯಲ್ಲಿ ಈ ಏರ್‌ಕ್ರಾಫ್ಟ್ ಯಶಸ್ವಿಯಾಗಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *