
ಎಟಿಎಂ ನಿಂದ ಹರಿದ ನೋಟು ಸಿಕ್ಕರೆ ಏನು ಮಾಡೋದು? – ಚಿಂತೆ ಮಾಡ್ಬೇಡಿ, ಹೀಗೆ ಮಾಡಿ ಸಾಕು..
- ಹಣಕಾಸು
- October 12, 2023
- No Comment
- 138
ನ್ಯೂಸ್ ಆ್ಯರೋ : ಕೆಲವೊಮ್ಮೆ ಎಟಿಎಂ ಯಂತ್ರವೇ ಹರಿದ ನೋಟ್ ಕೊಟ್ಟರೆ ಏನು ಮಾಡುವುದು ಎನ್ನುವ ಗೊಂದಲ ಉಂಟಾಗುತ್ತದೆ. ಯಾಕೆಂದರೆ ಇದನ್ನು ಯಾರೂ ತೆಗೆದುಕೊಳ್ಳುವುದಿಲ್ಲ.
ಸಾಕಷ್ಟು ಮಂದಿಗೆ ಇದರ ಅನುಭವವಾಗಿರಬಹುದು. ಹರಿದ ನೋಟು ಗಳನ್ನು ಯಾರೂ ಪಡೆಯುವುದಿಲ್ಲ. ಎಷ್ಟೋ ಬಾರಿ ಇದರಿಂದ ಸಂಕಟ ಪಟ್ಟವರೂ ಇದ್ದಾರೆ. ಹೀಗಾಗಿ ಹರಿದ ನೋಟು ಏನು ಮಾಡಬೇಕು ಎಂದು ತಿಳಿಯದೆ ಕೆಲವರು ಸುಮ್ಮನೆ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ.
ಹರಿದ ನೋಟು ಸಿಕ್ಕರೆ ಏನು ಮಾಡಬಹುದು ಎನ್ನುವುದಕ್ಕೆ ಆರ್ ಬಿಐ ಏನು ಹೇಳುತ್ತದೆ ಗೊತ್ತೇ?
ಎಟಿಎಂ ನಲ್ಲಿ ಹರಿದ ನೋಟು ಸಿಕ್ಕರೆ ಕೂಡಲೇ ಹತ್ತಿರದ ಬ್ಯಾಂಕ್ ಗೆ ಹೋಗಿ ಅದನ್ನು ವಿನಿಮಯ ಮಾಡಿಕೊಳ್ಳಬಹುದು.
ಈ ಬಗ್ಗೆ 2016ರಲ್ಲೇ ಆರ್ ಬಿಐ ಬ್ಯಾಂಕ್ ಗಳಿಗೆ ನೋಟು ವಿನಿಮಯ ಅಧಿಕಾರವನ್ನು ನೀಡಿದೆ. ಎಟಿಎಂ ಗಳಲ್ಲಿ ಹರಿದ ನೋಟು ಸಿಕ್ಕರೆ ಅದನ್ನು ಬ್ಯಾಂಕ್ ನಲ್ಲಿ ವಿನಿಮಯ ಮಾಡಿಕೊಳ್ಳಬಹುದು. ಈ ನೋಟುಗಳನ್ನು ಪಡೆಯಲು ಬ್ಯಾಂಕ್ ನಿರಾಕರಿಸಿದರೆ ಆರ್ ಬಿ ಐಗೆ ದೂರು ನೀಡುವ ಅಧಿಕಾರ ಗ್ರಾಹಕರಿಗೆ ಇದೆ. ಇದರಿಂದ ಬ್ಯಾಂಕ್ ಗಳು 10 ಸಾವಿರ ರೂ. ವರೆಗೆ ದಂಡ ಪಾವತಿಸಬೇಕಾಗುತ್ತದೆ.
ಯಾವತ್ತೂ ಎಟಿಎಂ ನಿಂದ ಹಣ ಪಡೆಯುವ ವೇಳೆ ನೋಟಿನ ಕ್ರಮಸಂಖ್ಯೆ, ಮಹಾತ್ಮಾ ಗಾಂಧಿ ಅವರ ಚಿತ್ರ, ರಾಜ್ಯಪಾಲರ ಪ್ರಮಾಣವಚನ ಕಾಣಿಸದೇ ಇದ್ದಾಗ ಅದನ್ನು ಬ್ಯಾಂಕ್ ಗೆ ಹಿಂದಿರುಗಿಸಬೇಕಾಗುತ್ತದೆ.
ದಿನದಲ್ಲಿ ಗರಿಷ್ಠ 20 ನೋಟುಗಳನ್ನು ಅಂದರೆ ಗರಿಷ್ಠ 5 ಸಾವಿರ ರೂ. ಮೀರದ ನೋಟುಗಳ ವಿನಿಮಯಕ್ಕೆ ಅವಕಾಶವಿದೆ.
ನೋಟು ವಿನಿಮಯ ಪ್ರಕ್ರಿಯೆ ಸುಧೀರ್ಘ ವಾಗಿರುತ್ತದೆ. ಇದಕ್ಕೆ ಹೆಚ್ಚು ಕಾಲಾವಕಾಶ ಕೂಡ ಬೇಕಾಗುತ್ತದೆ. ಹೀಗಾಗಿ ಹೆಚ್ಚು ಸಮಯವನ್ನು ಬ್ಯಾಂಕ್ ಸಿಬ್ಬಂದಿ ತೆಗೆದುಕೊಳ್ಳಬಹುದು.
ಎಟಿಎಂ ನಿಂದ ಹರಿದ ನೋಟು ಸಿಕ್ಕಿದ್ದರೆ ಈ ಕುರಿತು ಬ್ಯಾಂಕ್ ಗೆ ದಾಖಲೆ ನೀಡಬೇಕು. ಬಳಿಕ ಅರ್ಜಿಯೊಂದನ್ನು ಭರ್ತಿ ಮಾಡಬೇಕು. ಅದರಲ್ಲಿ ಕೇಳಿರುವ ಮಾಹಿತಿ ನೀಡಿ ದಾಖಲೆಯನ್ನು ಸಲ್ಲಿಸಬೇಕು. ಬಳಿಕವಷ್ಟೇ ಹರಿದ ನೋಟಿಗೆ ಬೇರೆ ನೋಟು ಕೊಡಲು ಬ್ಯಾಂಕ್ ಗೆ ಅನುಮತಿ ಇದೆ.
ಹೀಗಾಗಿ ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಬ್ಯಾಂಕ್ ಗೆ ಹೋದರೆ ಶೀಘ್ರದಲ್ಲೇ ಹರಿದ ನೋಟಿನ ಬದಲು ಹೊಸ ನೋಟು ಪಡೆಯಬಹುದು.
ಹೀಗಾಗಿ ಇನ್ನು ಮುಂದೆ ಎಟಿಎಂ ನಲ್ಲಿ ಹರಿದ ನೋಟು ಸಿಕ್ಕಿತು ಎಂದು ಚಿಂತೆ ಬೇಡ. ಹತ್ತಿರದ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ.