ಇನ್ಮೇಲೆ ನೀವು UPI ಮೂಲಕವೂ ಸಾಲ ಪಡೆಯಬಹುದು – RBI ಮಾಡಿರುವ ಪ್ರಸ್ತಾಪದಲ್ಲಿ ಏನಿದೆ ಗೊತ್ತಾ..?

ಇನ್ಮೇಲೆ ನೀವು UPI ಮೂಲಕವೂ ಸಾಲ ಪಡೆಯಬಹುದು – RBI ಮಾಡಿರುವ ಪ್ರಸ್ತಾಪದಲ್ಲಿ ಏನಿದೆ ಗೊತ್ತಾ..?

ನ್ಯೂಸ್ ಆ್ಯರೋ : ಪ್ರಸ್ತುತ ನಾವೆಲ್ಲರೂ ಡಿಜಿಟಲ್ ಜಗತ್ತಿನಲ್ಲಿ ಜೀವಿಸುತ್ತಿದ್ದೇವೆ. ಇಲ್ಲಿ ದಿನಕ್ಕೊಂದು ಬದಲಾವಣೆಗಳು ನಡೆಯುತ್ತಿವೆ. ಹಿಂದೆಲ್ಲ ಹಣಕಾಸಿನ ವ್ಯವಹಾರಕ್ಕೆ ಬ್ಯಾಂಕ್ ಬೇಕಿತ್ತು. ಆದರೆ ಈಗ ಎಲ್ಲವೂ ಮೊಬೈಲ್ ನಲ್ಲೇ ನಡೆಯುತ್ತದೆ. ಇತ್ತೀಚೆಗೆ, ಆನ್ಲೈನ್ ಬ್ಯಾಂಕಿಂಗ್ ಮತ್ತಷ್ಟು ಸುಧಾರಣೆಗೊಳ್ಳುತ್ತಿದೆ. ಇದೀಗ RBI ಆ ವಿಚಾರದಲ್ಲಿ ಒಂದು‌ ಹೆಜ್ಜೆ ಮುಂದಿಟ್ಟಿದ್ದು, ಶೀಘ್ರದಲ್ಲೇ UPI ಮೂಲಕವೂ ಸಾಲ ಪಡೆಯುವ ಅವಕಾಶ ದೊರೆಯಲಿದೆ. ಈ ಬಗ್ಗೆ RBI ಪ್ರಸ್ತಾಪದಲ್ಲೇನಿದೆ ಎಂಬುದು ಈ ವರದಿಯಲ್ಲಿದೆ.

RBI ಜಾರಿಗೊಳಿಸುತ್ತಿರುವ ಈ ಯೋಜನೆಯಿಂದ ಭಾರತೀಯರ ಖರೀದಿ ಸಾಮರ್ಥ್ಯ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂದಾಜಿನ‌ ಪ್ರಕಾರ UPI ಮೂಲಕ ದಿನವೊಂದಕ್ಕೆ 36 ಕೋಟಿ ವರ್ಗಾವಣೆ ನಡೆಯುತ್ತಿದ್ದು, ಶೀಘ್ರದಲ್ಲಿ ಗ್ರಾಹಕರಿಗೆ ತ್ವರಿತ ಸಾಲ ಲಭ್ಯವಾಗಲಿದೆ. ಜನರು ದಿನ ನಿತ್ಯ‌ ಬಳಸುವ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಇತ್ಯಾದಿ UPI ಆಧಾರಿತ ಆ್ಯಪ್ ಗಳ ಮೂಲ ಬ್ಯಾಂಕ್ ಗಳಿಂದ ಸಾಲ ಪಡೆಯಬಹುದಾಗಿದೆ‌.

ಮೊದಲೇ ಮಂಜೂರಾಗಲಿದೆ ಸಾಲ..!

ಆನ್ಲೈನ್ ಸಾಲ ಪಡೆಯುವುದು ಹೇಗೆ ಎಂಬ ಯೋಚನೆ ನಿಮ್ಮದಾಗಿದ್ದರೆ. ಬ್ಯಾಂಕ್ ಗಳಲ್ಲಿ ಗ್ರಾಹಕರಿಗೆ ಮೊದಲೇ ಇಂತಿಷ್ಟು ಸಾಲ ಎಂಬುದು ನಿಗದಿಯಾಗಿರುತ್ತದೆ. ಮಂಜೂರಾಗಿರುವ ಈ ಸಾಲವನ್ನು UPI ಮೂಲಕ ನಮಗೆ ಬೇಕಾದ ಸಮಯದಲ್ಲಿ ಪಡೆದುಕೊಳ್ಳಬಹುದು. ಪ್ರಸ್ತುತ UPI ವರ್ಗಾವಣೆಗಳು ಬ್ಯಾಂಕ್ ಖಾತೆಗಳ ನಡುವೆ ನಡೆಯುತ್ತದೆ‌. ಈ ಸುಧಾರಿತ ಕ್ರಮದಿಂದಾಗಿ UPI ಮತ್ತಷ್ಟು ಜನಪ್ರಿಯವಾಗುವುದರೊಂದಿಗೆ, ಸಮಯದ ಉಳಿತಾಯ ಹಾಗೂ ಆರ್ಥಿಕ ಪ್ರಗತಿಯಾಗಲಿದೆ ಎನ್ನುತ್ತಾರೆ RBI ಗವರ್ನರ್ ಶಕ್ತಿಕಾಂತ ದಾಸ್.

ಬಡ್ಡಿ ದರ ಏರಿಕೆಗೆ ಬ್ರೇಕ್ ಹಾಕಿದ RBI..!!

ಬಡ್ಡಿ ದರದ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಕೊನೆಗೂ ಶುಕ್ರವಾರ ಶುಭ ಸುದ್ದಿ ಬಂದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿ ದರ ಏರಿಕೆಯನ್ನು ತಡೆ ಹಿಡಿದಿದೆ. ಅಮೇರಿಕಾ, ಯೂರೋಪ್ ಇತ್ಯಾದಿ ಸೆಂಟ್ರಲ್ ಬ್ಯಾಂಕ್ ಗಳಲ್ಲಿ ಇತ್ತೀಚೆಗೆ ಬಡ್ಡಿ ದರ ಏರಿಕೆಯಾಗಿದ್ದು, RBI ಕೂಡ ಬಡ್ಡಿ ದರ ಏರಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ರೆಪೋ ದರವನ್ನು 6.5% ಯಥಾ ಸ್ಥಿತಿಯಲ್ಲಿ ಇರಿಸಲಾಗಿದೆ. ಈ ಹಿಂದಿನ ಬಡ್ಡಿ ದರ ಏರಿಕೆಯು ಹಣದುಬ್ಬರವನ್ನು ತಗ್ಗಿಸುವ ನಿಟ್ಟಿನಲ್ಲಿ ನಿರೀಕ್ಷಿತ ಪರಿಣಾಮ ಬೀರುವುದರಿಂದ RBI ಯಥಾಸ್ಥಿತಿ ಕಾಯ್ದುಕೊಂಡಿದೆ ಎನ್ನಲಾಗಿದೆ.

2023 ಆರ್ಥಿಕ ವ್ಯವಸ್ಥೆಯ ಸುವರ್ಣಕಾಲ ಎಂದ ಗವರ್ನರ್

2023 ಆರ್ಥಿಕ ವ್ಯವಸ್ಥೆಗೆ ಸುವರ್ಣಕಾಲ. ಆರ್ಥಿಕ ಮಾರುಕಟ್ಟೆಗಳು ಚೇತರಿಕೆ ಕಂಡಿವೆ. ಅದಾಗ್ಯೂ, ಜಾಗತಿಕ ಅಭಿವೃದ್ಧಿ ಹೊಂದಿರುವ ಎಕನಾಮಿಗಳಲ್ಲಿ ಬ್ಯಾಂಕಿಂಗ್ ವಲಯದ ಬಿಕ್ಕಟ್ಟು ಆರಂಭಗೊಂಡಿದೆ. ಭಾರಯದ ಜಿಡಿಪಿ 3023-24ರ ಆರ್ಥಿಕ ವರ್ಷದಲ್ಲಿ 6.5% ಹೆಚ್ಚಳವಾಗಲಿದೆ ಎಂದು RBI ಅಂದಾಜಿಸಿದೆ.

ರಿಯಲ್ ಎಸ್ಟೇಟ್ ಮಾರುಕಟ್ಟೆ ದೃಷ್ಟಿಯಿಂದ ಬಡ್ಡಿ ದರ ಏರಿಕೆಯನ್ನು ತಡೆದಿರುವುದು ಉತ್ತಮ‌ ಬೆಳವಣಿಗೆ ಎಂದು ಅನಾರಕ್ ಗ್ರೂಪ್ ಅಧ್ಯಕ್ಷ ಅಂಜುಪುರಿ ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಅರ್ಥವ್ಯವಸ್ಥೆ ಸಂಕಷ್ಟದಲ್ಲಿದ್ದರೂ ಕೂಡ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಉತ್ತಮವಾಗಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *