ನಟ ರಮೇಶ್ ಅರವಿಂದ್ ಮನೆಗೆ ಬಂತು ಒಂದು ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಜ್ ಇ ಕ್ಲಾಸ್ – ಹೇಗಿದೆ ಗೊತ್ತಾ ಈ ಐಶಾರಾಮಿ ಕಾರು?

ನಟ ರಮೇಶ್ ಅರವಿಂದ್ ಮನೆಗೆ ಬಂತು ಒಂದು ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಜ್ ಇ ಕ್ಲಾಸ್ – ಹೇಗಿದೆ ಗೊತ್ತಾ ಈ ಐಶಾರಾಮಿ ಕಾರು?

ನ್ಯೂಸ್ ಆ್ಯರೋ : ದಶಕಗಳ ಹಿಂದೆ ಆ ತಮಿಳಿಗ ಯುವಕ ತಲೆ ಕೂದಲು ತೆಗೆಯಲು ಹಣವಿಲ್ಲದೆ ಪರದಾಡಿದ್ದ. ಕಾರಣಾಂತರಗಳಿಂದ ಅನಂತರ ಕರ್ನಾಟಕಕ್ಕೆ ಬಂದ ಆತ ಅಪ್ಪಟ ಕನ್ನಡಿಗನಾಗಿ ಬೆಳೆದದ್ದು ಇಂದಿಗೆ ಇತಿಹಾಸ. ಇದು ಕನ್ನಡ ನೆಲದ ಅತ್ಯುತ್ತಮ ನಿರೂಪಕ, ಬಹುಭಾಷಾ ನಟ, ಮೋಟಿವೇಟರ್, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಖ್ಯಾತಿಯ ರಮೇಶ್ ಅರವಿಂದ್ ಅವರ ತುಣುಕು ಹಿನ್ನಲೆ. ಇದೀಗ ರಮೇಶ್ ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಖರೀದಿಸಿ ಭಾರೀ ಸುದ್ದಿಯಲ್ಲಿದ್ದಾರೆ, ಈ ಐಶಾರಾಮಿ ಕಾರಿನ ವಿಶೇಷತೆಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಕನ್ನಡದ ಸಾಕಷ್ಟು ನಟರಿಗೆ ಕಾರು ಕ್ರೇಜ್ ಇದೆ. ಹಾಗೆಯೇ ನಟ, ನಿರೂಪಕ ರಮೇಶ್ ಅರವಿಂದ್ ಅವರೂ ಕೂಡ ಈಗಾಗಲೇ ಸಾಕಷ್ಟು ಐಶಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. ಇದೀಗ ರಮೇಶ್ ಮರ್ಸಿಡಿಸ್ ಬೆನ್ಝ್‌ ಇ ಕ್ಲಾಸ್ ಕಾರು ಖರೀದಿಸಿ ಸುದ್ದಿಯಲ್ಲಿದ್ದಾರೆ. ಕಪ್ಪು ಬಣ್ಣದ ಈ ಸುಂದರ ಕಾರಿನ ಬೆಲೆ ಬರೋಬ್ಬರಿ 1 ಕೋಟಿಯಂತೆ.

ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಸೆಡಾನ್ ಕಾರು ಅತ್ಯಂತ ಐಷಾರಾಮಿ ಹಾಗೂ ಆರಾಮವಾಗಿ ಪ್ರಯಾಣಿಸಬಹುದು. ದೂರ ಪ್ರಯಾಣ, ನಗರದ ಜಂಜಾಟಗಳ ನಡುವೆ ಆಯಾಸವಿಲ್ಲದೆ ಪ್ರಯಾಣಕ್ಕೂ ಈ ಕಾರು ಸೂಕ್ತವಾಗಿದೆ. ಬೆಂಗಳೂರಿನ ಅಧಿಕೃತ ಮರ್ಸಿಡೀಸ್ ಬೆಂಜ್ ಕಾರು ಡೀಲರ್ ಬಳಿಯಿಂದ ರಮೇಶ್ ಅರವಿಂದ್ ಕಾರು ಖರೀದಿಸಿದ್ದಾರೆ. ಕಾರು ಡೆಲಿವರಿ ವೇಳೆ ರಮೇಶ್ ಅರವಿಂದ್ ಕುಟುಂಬ ಸಮೇತ ಶೋ ರೂಂಗೆ ಭೇಟಿ ನೀಡಿದ್ದರು. ಸಿಬ್ಬಂದಿಗಳು ಕಾರು ಕೀ ಹಸ್ತಾಂತರಿಸಿದ್ದಾರೆ. ಪೂಜೆಯ ನಂತರ ಸ್ವತಃ ರಮೇಶ್ ಕಾರು ಚಲಾಯಿಸಿಕೊಂಡು ತೆರಳಿದ್ದಾರೆ.

ಈ ಕಾರಿನ ವಿಶೇಷಗಳೇನು?

ರಮೇಶ್ ಅರವಿಂದ್ ಖರೀದಿಸಿದ ಮರ್ಸಿಡಿಸ್ ಬೆನ್ಝ್‌ ಇ ಕ್ಲಾಸ್ ಕಾರಿನಲ್ಲಿ ಹಲವು ವಿಶೇಷತೆಗಳಿವೆ. ಮರ್ಸಿಡಿಸ್ ಬೆನ್ಝ್‌ ಇ ಕ್ಲಾಸ್ ಕಾರು ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. ಪೆಟ್ರೋಲ್ ಎಂಜಿನ್‌ನಲ್ಲಿ 3 ವೇರಿಯೆಂಟ್ ಲಭ್ಯವಿದ್ದರೆ, ಡೀಸೆಲ್ ವೇರಿಯೆಂಟ್‌ನಲ್ಲಿ 2 ವೇರಿಯೆಂಟ್ ಲಭ್ಯವಿದೆ. ಪೆಟ್ರೋಲ್ ವೇರಿಯೆಂಟ್ ಬೆಂಜ್ ಇ ಕ್ಲಾಸ್ E 350 d AMG ಲೈನ್ ಕಾರಿನ ಎಕ್ಸ್ ಶೋ ರೂಂ ಬೆಲೆ 85 ಲಕ್ಷ ರೂಪಾಯಿ. ಇನ್ನು ಆರ್‌ಟಿಒ ಮೊತ್ತ 15.30 ಲಕ್ಷ ರೂಪಾಯಿ ಹಾಗೂ ವಿಮೆ 2.30 ಲಕ್ಷ ರೂಪಾಯಿ. ಈ ಮೂಲಕ 1.03 ಕೋಟಿ ರೂಪಾಯಿ ಆನ್ ರೋಡ್ ಬೆಲೆಯಾಗಲಿದೆ. ಡೀಸೆಲ್ ವೇರಿಯೆಂಟ್ ಬೇಸ್ ಮಾಡೆಲ್ ಕಾರಿನ ಆನ್ ರೋಡ್ ಬೆಲೆ ಸರಿಸುಮಾರು 81 ಲಕ್ಷ ರೂಪಾಯಿ, ಇನ್ನು ಟಾಪ್ ಮಾಡೆಲ್ ಡೀಸೆಲ್ ಕಾರಿನ ಬೆಲೆ 1.03 ಕೋಟಿ ರೂಪಾಯಿ ಎನ್ನುವ ಮಾಹಿತಿಯಿದೆ‌.

ಇದರೊಂದಿಗೆ, ಮರ್ಸಿಡಿಸ್ ಬೆನ್ಝ್‌ ಇ ಕ್ಲಾಸ್ ಕಾರು 1991 ಸಿಸಿ ಎಂಜಿನ್ ಹೊಂದಿದೆ. 194.44bhp ಪವರ್ ಹಾಗೂ 320Nm ಪೀಕ್ ಟಾರ್ಕ್ ಉತ್ಪಾದಿಸಲ್ಲ ಸಾಮರ್ಥ್ಯವಿದೆ. 4 ಸಿಲಿಂಡರ್ ಹೊಂದಿದೆ. ಇನ್ನು ಗರಿಷ್ಠ ವೇಗ ಗಂಟೆಗೆ 240 ಕಿಲೋಮೀಟರ್. ಒಂದು ಲೀಟರ್ ಪೆಟ್ರೋಲ್‌ಗೆ 15 ಕಿ.ಮೀ ಮೈಲೇಜ್ ನೀಡಲಿದೆ. ಡೀಸೆಲ್ ಎಟಿ ವೇರಿಯೆಂಟ್ ಬೆಲೆ 2925 ಸಿಸಿ ಎಂಜಿನ್ ಈ ಕಾರಿನಲ್ಲಿ ಲಭ್ಯವಿದೆ.

MBUX ಸಿಸ್ಟಮ್, ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಎಬಿಸಿ, ಇಬಿಡಿ, ಹಿಲ್ ಅಸಿಸ್ಟ್ ಬ್ರೇಕಿಂಗ್ ಸಿಸ್ಟಮ್, ಸನ್ ರೂಫ್, ಕ್ರೂಸ್ ಕಂಟ್ರೋಲ್, ಕಾರಿನೊಳಗೆ ಸೆಲ್ಫಿ ಕ್ಯಾಮರಾ ಸೇರಿದಂತೆ ಎಲ್ಲಾ ಅತ್ಯಾಧುನಿಕ ಫೀಚರ್ಸ್ ಗಳನ್ನು ಈ ಕಾರಿನಲ್ಲಿ‌ ಕಾಣಬಹುದಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *