ಕ್ರೆಡಿಟ್ ಸ್ಕೋರ್‌ ನಿರ್ಧಾರವಾಗೋದು ಯಾವ ಆಧಾರದಲ್ಲಿ ಗೊತ್ತಾ? – ಸಾಲ ಮರುಪಾವತಿಗೂ, ಕ್ರೆಡಿಟ್‌ ಸ್ಕೋರ್‌ಗೆ ಏನು ಸಂಬಂಧ? ಗೊಂದಲಗಳಿಗೆ ಉತ್ತರ ಇಲ್ಲಿದೆ..

ಕ್ರೆಡಿಟ್ ಸ್ಕೋರ್‌ ನಿರ್ಧಾರವಾಗೋದು ಯಾವ ಆಧಾರದಲ್ಲಿ ಗೊತ್ತಾ? – ಸಾಲ ಮರುಪಾವತಿಗೂ, ಕ್ರೆಡಿಟ್‌ ಸ್ಕೋರ್‌ಗೆ ಏನು ಸಂಬಂಧ? ಗೊಂದಲಗಳಿಗೆ ಉತ್ತರ ಇಲ್ಲಿದೆ..

ನ್ಯೂಸ್‌ ಆ್ಯರೋ : ಇಂದು ಬ್ಯಾಂಕಿಂಗ್‌ ವ್ಯವಹಾರಗಳಿಗೆ ಕ್ರೆಡಿಟ್‌ ಸ್ಕೋರ್ ಅತಿ ಮುಖ್ಯ. ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬೇಕು ಎಂದಾದರೆ ಉತ್ತಮವಾದ ಕ್ರೆಡಿಟ್ ಸ್ಕೋರ್ ಇರಲೇಬೇಕು. ಆದರೆ, ಕ್ರೆಡಿಟ್ ಸ್ಕೋರ್ ಬಗ್ಗೆ ಸಾಕಷ್ಟು ಮಂದಿಗೆ ಗೊಂದಲಗಳಿವೆ.

ಪದೇ ಪದೇ ಕ್ರೆಡಿಟ್ ಸ್ಕೋರ್ ಚೆಕ್ ಮಾಡಿದರೆ ತೊಂದರೆ ಆಗುತ್ತದೆ, ಕ್ರೆಡಿಟ್ ಸ್ಕೋರ್ ಒಮ್ಮೆ ಕಡಿಮೆ ಆದರೆ ಅದನ್ನು ಸರಿಪಡಿಸಿಕೊಳ್ಳಲು ಸಾಧ್ಯವೇ ಇಲ್ಲ, ನಮ್ಮ ಆದಾಯದ ಆಧಾರದಲ್ಲಿ ಕ್ರೆಡಿಟ್ ಸ್ಕೋರ್ ನಿರ್ಧಾರವಾಗುತ್ತದೆ ಎಂಬುದು ತಪ್ಪು ಕಲ್ಪನೆಗಳ ಸಾಲಿಗೆ ಸೇರಿವೆ.

ಕ್ರೆಡಿಟ್ ಸ್ಕೋರ್‌ ಎಂದರೇನು, ಅದನ್ನು ಹೆಚ್ಚೆಸುವುದು ಹೇಗೆ ಮುಂತಾದ ಪ್ರಶ್ನೆಗಳಿಗೆ ಉತ್ತರ ಇಲ್ಲಿವೆ.

  • ಗ್ರಾಹಕನೊಬ್ಬನಿಗೆ ಸಾಲದ ಅಗತ್ಯವಿದೆ ಎಂದು ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ ಕೂಡಲೇ ಬ್ಯಾಂಕ್‌ಗಳು ಕೇಳುವುದು ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ ವಿವರ. ಗ್ರಾಹಕರಿಗೆ ಸಾಲ ಕೊಡಲು ಬ್ಯಾಂಕ್‌ಗಳು ಕ್ರೆಡಿಟ್ ಸ್ಕೋರ್ ಅನ್ನು ಮಾನದಂಡವಾಗಿ ಪರಿಗಣಿಸುತ್ತವೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಕ್ರೆಡಿಟ್ ಸ್ಕೋರ್ ಎನ್ನುವುದು ನಿಮಗೆ ಎಷ್ಟು ಸಾಲ ಕೊಡಬಹುದು ಎಂಬುದನ್ನು ತೀರ್ಮಾನಿಸಲು ಬ್ಯಾಂಕ್‌ಗಳು ಬಳಸಿಕೊಳ್ಳುವ ಅಳತೆಗೋಲು.

ಹಣಕಾಸಿನ ವ್ಯವಹಾರದ ಶಿಸ್ತು ಹಾಗೂ ಅಶಿಸ್ತಿಗೆ ಕ್ರೆಡಿಟ್ ಸ್ಕೋರ್ ಕನ್ನಡಿ ಇದ್ದಂತೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರಷ್ಟೇ ಸಾಲ ಸಿಗುತ್ತದೆ. 300ರಿಂದ 900ರವರೆಗೆ ಕ್ರೆಡಿಟ್ ಸ್ಕೋರ್ ನೀಡಲಾಗುತ್ತದೆ. 750ಕ್ಕಿಂತ ಹೆಚ್ಚು ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಸಾಲ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

  • ಕ್ರೆಡಿಟ್ ರೇಟಿಂಗ್ ಬ್ಯೂರೋಗಳಾದ ಕ್ರೆಡಿಟ್ ಇನ್ಫಾರ್ಮೇಷನ್ ಬ್ಯೂರೋ ಆಫ್ ಇಂಡಿಯಾ ಲಿಮಿಟೆಡ್ , ಈಕ್ವಿಫ್ಯಾಕ್ಸ್, ಎಕ್ಪೀರಿಯನ್ ಸಂಸ್ಥೆಗಳು ಪ್ರತಿ ತಿಂಗಳು ಬ್ಯಾಂಕ್‌ಗಳಿಂದ ಮಾಹಿತಿ ಪಡೆದು ಸಾಲಗಾರರ ಮಾಹಿತಿಯನ್ನು ಭರ್ತಿಮಾಡಿ ಕ್ರೆಡಿಟ್ ಸ್ಕೋರ್ ನೀಡುತ್ತವೆ. ಸಾಲವನ್ನು ಸರಿಯಾಗಿ ಪಾವತಿಸಿದ್ದಾರೋ, ಸಾಲ ಪಾವತಿಯಲ್ಲಿ ವಿಳಂಬವಾಗಿದೆಯೋ ಎಂಬಿತ್ಯಾದಿ ಮಾಹಿತಿ ಪರಿಗಣಿಸಿ ಕ್ರೆಡಿಟ್ ಸ್ಕೋರ್ ನೀಡಲಾಗುತ್ತದೆ.
  • ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ, ಅಗತ್ಯವಿರುವುದಕ್ಕೆ ಮಾತ್ರ ಕ್ರೆಡಿಟ್ ಕಾರ್ಡ್ ಬಳಸುವುದು, ಸಾಲ ಪಡೆಯುವಾಗ ಅಡಮಾನ ಸಹಿತ ಸಾಲ ಮತ್ತು ಅಡಮಾನ ರಹಿತ ಸಾಲಗಳ ಮಿಶ್ರಣ ಕಾಯ್ದುಕೊಳ್ಳುವುದು, ಹೆಚ್ಚುವರಿ ಸಾಲದ ಅಗತ್ಯವಿದ್ದಾಗ ಎಚ್ಚರಿಕೆಯಿಂದ ಅದಕ್ಕೆ ಅರ್ಜಿ ಸಲ್ಲಿಸುವುದು, ಕ್ರೆಡಿಟ್ ವರದಿಯಲ್ಲಿ ತಪ್ಪುಗಳಿದ್ದರೆ ದೂರು ನೀಡಿ ಸರಿಪಡಿಸಿಕೊಳ್ಳುವುದು, ಸಾಲಕ್ಕೆ ಖಾತರಿದಾರರಾಗಿದ್ದರೆ ಸಾಲ ಪಡೆದವರು ಮರುಪಾವತಿ ಮಾಡುವಂತೆ ನೋಡಿಕೊಳ್ಳುವುದು… ಹೀಗೆ ಕೆಲವು ನಿರ್ದಿಷ್ಟ ಕ್ರಮಗಳನ್ನು ರೂಢಿಸಿಕೊಂಡಾಗ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುತ್ತದೆ.
  • ಗ್ರಾಹಕರ ಕ್ರೆಡಿಟ್ ಸ್ಕೋರ್ ಪರಿಶೀಲಿಸಿದಾಗ ಅದನ್ನು ‘ಸಾಫ್ಟ್ ಎನ್‌ಕ್ವೈರಿ’ ಎಂದು ಪರಿಗಣಿಸಲಾಗುತ್ತದೆ. ಈ ರೀತಿ ಎಷ್ಟೇ ಬಾರಿ ಕ್ರೆಡಿಟ್ ಸ್ಕೋರ್‌ ಪರಿಶೀಲನೆ ಮಾಡಿದರೂ ಅದರಿಂದ ಯಾವುದೇ ನಕಾರಾತ್ಮಕ ಪರಿಣಾಮ ಉಂಟಾಗುವುದಿಲ್ಲ. ಆದರೆ, ಮೇಲಿಂದ ಮೇಲೆ ನೀವು ಸಾಲಕ್ಕೆ ಅರ್ಜಿ ಸಲ್ಲಿಸಿ ಬ್ಯಾಂಕ್‌ಗಳು ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲನೆಗೆ ಮುಂದಾದಾಗ ಅದು ‘ಹಾರ್ಡ್ ಎನ್‌ಕ್ವೈರಿ’ ಎನಿಸಿಕೊಳ್ಳುತ್ತದೆ. ‘ಹಾರ್ಡ್ ಎನ್‌ಕ್ವೈರಿ’ಯಿಂದ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಕಡಿಮೆ ಅವಧಿಯಲ್ಲಿ ಸಾಲಕ್ಕಾಗಿ ಹೆಚ್ಚೆಚ್ಚು ಅರ್ಜಿಗಳನ್ನು ಸಲ್ಲಿಸಿದಾಗ ಕ್ರೆಡಿಟ್ ಸ್ಕೋರ್‌ಗೆ ಧಕ್ಕೆಯಾಗುತ್ತದೆ.
  • ಗ್ರಾಹಕನ ಆದಾಯ ಅಥವಾ ಬ್ಯಾಂಕ್‌ನಲ್ಲಿರುವ ಉಳಿತಾಯದ ಹಣದ ಆಧಾರದಲ್ಲಿ ಕ್ರೆಡಿಟ್ ಸ್ಕೋರ್ ನಿರ್ಧಾರವಾಗುವುದಿಲ್ಲ. ಸಾಲ ತಗೆದುಕೊಂಡ ಮೇಲೆ ಮರುಪಾವತಿಯಲ್ಲಿ ಎಷ್ಟು ಶಿಸ್ತು ಕಾಯ್ದುಕೊಂಡಿದ್ದೀರಿ, ಸಮಯಕ್ಕೆ ಸರಿಯಾಗಿ ಸಾಲದ ಕಂತುಗಳನ್ನು ಪಾವತಿಸಿದ್ದೀರಾ ಎನ್ನುವುದರ ಆಧಾರದಲ್ಲಿ ಕ್ರೆಡಿಟ್ ಸ್ಕೋರ್ ನಿರ್ಧಾರವಾಗುತ್ತದೆ.
  • ಬಾಕಿ ಇರುವ ಸಾಲಗಳನ್ನು ಮರುಪಾವತಿ ಮಾಡುವುದು, ಸಾಲಗಳನ್ನು ಕಡಿಮೆ ಮೊತ್ತಕ್ಕೆ ಸೆಟಲ್ಮೆಂಟ್ ಮಾಡಿಕೊಳ್ಳದೆ ಪೂರ್ತಿ ಅಸಲು ಮತ್ತು ಬಡ್ಡಿ ಮೊತ್ತ ಪಾವತಿಸುವುದು ಸೇರಿದಂತೆ ಸಾಲ ಮರುಪಾವತಿಯಲ್ಲಿ ಎಚ್ಚರಿಕೆ ವಹಿಸಿದರೆ ಕಡಿಮೆ ಇರುವ ಕ್ರೆಡಿಟ್ ಸ್ಕೋರ್‌ ಅನ್ನು ಕಾಲಕ್ರಮೇಣ ಜಾಸ್ತಿ ಮಾಡಬಹುದು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *