ಉಡುಪಿ : ಕಾರ್ಮಿಕನ ಮೇಲೆ ಪ್ರೇತಾತ್ಮ ಆವಾಹನೆ – ಕಕ್ಕಾಬಿಕ್ಕಿಯಾಗಿ ರೂಂ ನಿಂದ ಹೊರ ಓಡಿದ ಇತರರು : ಏನಿದು ಘಟನೆ? ವಿಡಿಯೋ ವೀಕ್ಷಿಸಿ..

ನ್ಯೂಸ್ ಆ್ಯರೋ : ಉತ್ತರ ಭಾರತ ಮೂಲದ ಕಾರ್ಮಿಕನ ಮೈಮೇಲೆ ಪ್ರೇತಾತ್ಮದ ಆವೇಶವಾಗಿದ್ದು, ಆತ ತನಗರಿವಿಲ್ಲದೆ ಇತರರಿಗೆ ದಾಳಿ ನಡೆಸಿದಾಗ ಸಹೋದ್ಯೋಗಿಗಳ ಎದ್ನೋ ಬಿದ್ನೋ ಎಂದು ಓಡಿದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉದ್ಯಾವರದ ಪಿತ್ರೋಡಿಯಲ್ಲಿ ನಡೆದಿದೆ.

ಘಟನೆಯ ಬಳಿಕ ಕಾರ್ಮಿಕರು ದಿಕ್ಕಾಪಾಲಾಗಿ ಓಡಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.

ಪಿತ್ರೋಡಿಯ ಮೀನು ಕಟ್ಟಿಂಗ್ ಶೆಡ್ನಲ್ಲಿ ಉತ್ತರ ಭಾರತದ 10 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಎಲ್ಲರೂ ಒಂದೇ ರೂಮಿನಲ್ಲಿ ನೆಲೆಸಿದ್ದರು. ಆದರೆ, ಕಳೆದ ತಡರಾತ್ರಿ 11 ಗಂಟೆ ವೇಳೆಗೆ ಬಿಹಾರ ಮೂಲದ ಕಾರ್ಮಿಕನ ಮೈಮೇಲೆ ಪ್ರೇತಾತ್ಮದ ಆವೇಶವಾಗಿದೆ.

ಪ್ರೇತಾತ್ಮ ಆವಾಹನೆ ಆಗುತ್ತಲೇ ಸಹೋದ್ಯೋಗಿಗಳ ಮೇಲೆ ಆತ ದಾಳಿ ನಡೆಸಿದ್ದಾನೆ. ಆತನ ಹಲ್ಲೆಯಿಂದ ತಪ್ಪಿಸಿಕೊಳ್ಳಲು ರೂಮ್ ನಿಂದ ಒಬ್ಬರ ಮೇಲೆ ಒಬ್ಬರು ಬಿದ್ದು ಎದ್ದು ಓಡಿ ಹೋಗಿದ್ದಾರೆ. ಈ ವೇಳೆ ಕೆಲವರಿಗೆ ಗಾಯಗಳಾಗಿವೆ.

ಈ ಬಗ್ಗೆ ದೆವ್ವ ಆವಾಹನೆಗೆ ಒಳಗಾದ ಕಾರ್ಮಿಕನೇ ಹೇಳಿಕೆ ನೀಡಿದ್ದು, ” ನಾವು ಮಾರಿ ಕಟ್ಟೆಯ ಬಳಿ ಬಾಯಲ್ಲಿ ವಿಮಲ್ ಹಾಕಿಕೊಂಡು ಅಲ್ಲಿದ್ದ ಕುರ್ಚಿಯಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದೆವು. ಏಕಾಏಕಿ ನನ್ನ ಸುತ್ತ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತು. ನಾನು ಭಯದಿಂದ ಕೂಗಿ ಕೊಳ್ಳುತ್ತಾ ಓಡಿದೆ ಎಂದಿದ್ದಾನೆ.

ನನಗೆ ದೆವ್ವ ಹಿಡಿದಂತಾಗಿ ನಾನು ರೂಮಿಗೆ ಓಡಿ ಅಲ್ಲಿ ಕೂಡ ಕೂಗಾಡಿದೆ. ನಾನು ಏನು ಮಾಡುತ್ತಿದ್ದೇನೆ ಎಂದು ನನಗೆ ಅರಿವಿರಲಿಲ್ಲ. ನನ್ನ ಜೊತೆಗಿದ್ದವರು ನನಗೆ ಆಮೇಲೆ ತಿಳಿಸಿದರು. ಮಾರುಕಟ್ಟೆ ಬಳಿಯಿಂದ ಒಬ್ಬ ವ್ಯಕ್ತಿ ತನ್ನ ಹಿಂದೆ ಇದ್ದ ಎನ್ನುವ ಅನುಭವವಾಗುತ್ತಿತ್ತು. ರೂಮಿನೊಳಗೆ ಹೋದಾಗಲೂ ಇದೇ ರೀತಿ ಆಯಿತು ಎಂದು ತನಗಾದ ಅನುಭವವನ್ನು ಕಾರ್ಮಿಕ ಹೇಳಿಕೊಂಡಿದ್ದು,‌ ಸದ್ಯ ಘಟನೆಯ ವಿಡಿಯೋಗಳು, ಸಿಸಿಟಿವಿ ದೃಶ್ಯಗಳು ವೈರಲ್ ಆಗುತ್ತಿವೆ.