Do you know about these facilities provided by the government to set up own business?

ಸ್ವಂತ ಉದ್ಯಮ ಸ್ಥಾಪಿಸಲು ಸರ್ಕಾರ ನೀಡುವ ಈ ಸೌಲಭ್ಯಗಳ ಬಗ್ಗೆ ನಿಮಗೆ ಗೊತ್ತಾ? – ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

ನ್ಯೂಸ್ ಆ್ಯರೋ : ಸ್ವಂತ ಉದ್ಯಮ ನಡಸಬೇಕು ಎಂದು ಸಾಕಷ್ಟು ಜನ ಬಯಸುತ್ತಾರೆ. ಆದರೆ ಆರ್ಥಿಕ ಸಮಸ್ಯೆಯಿಂದಾಗಿ ಎಷ್ಟೋ ಜನರಿಗೆ ತಮ್ಮ ಸ್ವಂತ ಉದ್ಯಮದ ಕನಸುಗಳನ್ನು ನನಸು ಮಾಡಿಕೊಳ್ಳಲು ಆಗುವುದಿಲ್ಲ. ಆದರೆ ನಿಮಗೆ ಗೊತ್ತಿರಲಿ. ಸ್ವಂತ ಉದ್ಯಮ ಮಾಡ ಬಯಸುವವರಿಗೆ ಸರ್ಕಾರದ ಕೆಲವು ಯೋಜನೆಗಳು ಸಹಕಾರಿಯಾಗುತ್ತದೆ‌.

ಸಬ್ಸಿಡಿ ಅಥವಾ ಕಡಿಮೆ ಬಡ್ಡಿ ಆಧಾರಿತವಾಗಿ ಸರ್ಕಾರ ಕೆಲವೊಂದು ಉದ್ಯಮಗಳಿಗೆ ಧನಸಹಾಯ ಮಾಡುತ್ತದೆ. ಯಾವೆಲ್ಲ ಉದ್ಯಮಗಳಿಗೆ, ಎಷ್ಟು ಸಹಾಯಧನ ದೊರೆಯಲಿದೆ ಹಾಗೂ ಈ ಯೋಜನೆಗಳ ಬಗೆಗಿನ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

ಸ್ವದ್ಯೋಗಕ್ಕೆ ಸಾಲ ಸೌಲಭ್ಯ!

ಸ್ವಂತ ಉದ್ಯಮ ಸ್ಥಾಪಿಸಿ ಆರ್ಥಿಕವಾಗಿ ಬಲಿಷ್ಠರಾಗುವ ಕನಸು ಕಾಣುವವರಿಗೆ ಸರ್ಕಾರ ಸಾಲ ಸೌಲಭ್ಯವನ್ನು ನೀಡುತ್ತಿದೆ. ಆರ್ಥಿಕವಾಗಿ ಬೆಂಬಲನ್ನು ನೀಡಲು ಸರ್ಕಾರದಿಂದ ಅತಿ ಕಡಿಮೆ ಬಡ್ಡಿದರದಲ್ಲಿ ಎಲ್ಲಾ ಸ್ವ ಉದ್ಯೋಗ ಮಾಡಲು ಬಯಸುವಂತಹ ಉದ್ಯೋಗಿಗಳಿಗೆ ಸಾಲ ಸೌಲಭ್ಯವನ್ನು ಒದಗಿಸಲು ಸರ್ಕಾರ ಮುಂದಾಗಿದೆ. 1 ಲಕ್ಷದವರೆಗೆ ಈ ಯೋಜನೆಯಲ್ಲಿ ಸಾಲ ಪಡೆದುಕೊಳ್ಳಬಹುದಾಗಿದೆ.

ಅದರಲ್ಲಿ ಅರ್ಧದಷ್ಟು ಹಣವನ್ನು ಸರ್ಕಾರ ಸಬ್ಸಿಡಿಯಾಗಿ ನೀಡುತ್ತದೆ. ಅರ್ಥಾತ್ ಒಂದು ಲಕ್ಷ ಸಾಲ ತೆಗೆದುಕೊಂಡರೆ 50 ಸಾವಿರವನ್ನು ಸಹಾಯಧನವಾಗಿ ಸಿಗುತ್ತದೆ. ಇನ್ನು 50 ಸಾವಿರಕ್ಕೆ ಕೇವಲ 4% ಬಡ್ಡಿಯಲ್ಲಿ ನೀವು ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ.

ಯಾವ ಉದ್ಯಮಕ್ಕೆ ಸಾಲ ಸೌಲಭ್ಯ!

ಟೈಲರಿಂಗ್, ಹೈನುಗಾರಿಕೆ, ಗುಡಿ ಕೈಗಾರಿಕೆ, ಕುರಿ ಮೇಕೆ ಸಾಕಾಣಿಕೆ ಮೊದಲಾದ ಸಣ್ಣ ಪುಟ್ಟ ಉದ್ಯೋಗ ಮಾಡುವಂತವರಿಗೆ ಈ ಸಾಲ ಸೌಲಭ್ಯ ಸಿಗಲಿದೆ. ಈ ಸಾಲ ಸೌಲಭ್ಯವನ್ನು ಪಡೆಯಲು ಆಸಕ್ತಿ ಹೊಂದಿರುವಂತಹ ಯುವಕ ಯುವತಿಯರು ಗ್ರಾಮ ಒನ್, ಬೆಂಗಳೂರು ಒನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. 21 ರಿಂದ 50 ವರ್ಷಗಳ ವಯಸ್ಸಿನವರು ಈ ಯೋಜನೆಯಿಂದ ಸಾಲ ಪಡೆದುಕೊಳ್ಳಲು ಅರ್ಹತೆಯನ್ನು ಹೊಂದಿರುತ್ತಾರೆ. ಜೊತೆಗೆ ಕುಟುಂಬದ ಆದಾಯ 1.50‌ಲಕ್ಷ ಮೀರದ ಪರಿಶಿಷ್ಟ ಜಾತಿ ಮತ್ತ ಪರಿಶಿಷ್ಟ ಪಂಗಡದವರಿಗೆ ಮಾತ್ರ ಈ ಯೋಜನೆಗಳು ದೊರೆಯಲಿದೆ.

ದಾಖಲೆಗಳು :

•ಆದಾಯ ಪ್ರಮಾಣ ಪತ್ರ
•ಆಧಾರ್ ಕಾರ್ಡ್
•ಜಾತಿ ಪ್ರಮಾಣ ಪತ್ರ
•ಆರಂಭಿಸುತ್ತಿರುವ ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ
•ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಫೋಟೋ