ವೀಸಾ ಇಲ್ಲದೆ ಭಾರತೀಯರು ಈ ದೇಶಗಳಿಗೆ ಹೋಗಿ ಬರಬಹುದು – ಆ ಏಳು ದೇಶಗಳು ಯಾವುವು ಗೊತ್ತಾ?

ವೀಸಾ ಇಲ್ಲದೆ ಭಾರತೀಯರು ಈ ದೇಶಗಳಿಗೆ ಹೋಗಿ ಬರಬಹುದು – ಆ ಏಳು ದೇಶಗಳು ಯಾವುವು ಗೊತ್ತಾ?

ನ್ಯೂಸ್ ಆ್ಯರೋ : ಹೊರ ದೇಶಗಳಿಗೆ ಹೋಗಬೇಕು ಎನ್ನುವ ಆಸೆ ಎಲ್ಲರ ಮನದಲ್ಲೂ ಇರುತ್ತದೆ. ಆದರೆ ವೀಸಾ ಜಂಜಾಟದಿಂದ ಸುಮ್ಮನಾಗಿರುತ್ತೇವೆ. ಆದರೆ ಕೆಲವೊಂದು ದೇಶಗಳಿವೆ. ಇಲ್ಲಿಗೆ ಭಾರತೀಯರು ವೀಸಾ ಇಲ್ಲದೇ ಹೋಗಿ ಸುತ್ತಾಡಿ ಬರಬಹುದು. ಆ ದೇಶಗಳ ಪೈಕಿ ಈಗ ಹೊಸ ಸೇರ್ಪಡೆ ಶ್ರೀಲಂಕಾ.

ಶ್ರೀಲಂಕಾ ದೇಶವು ಪ್ರಾಯೋಗಿಕವಾಗಿ 2024ರ ಮಾರ್ಚ್ 31ರವರೆಗೆ ಭಾರತ, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್‌ ಜನರಿಗೆ ಉಚಿತ ವೀಸಾಗಳನ್ನು ಘೋಷಿಸಿದೆ. ಹೀಗಾಗಿ ಇನ್ನು ಮುಂದೆ ಈ ಏಳು ದೇಶಗಳ ಜನರು ಶ್ರೀಲಂಕಾಕ್ಕೆ ವೀಸಾ ಮುಕ್ತವಾಗಿ ಹೋಗಬಹುದು. ಇದರಿಂದ ಶ್ರೀಲಂಕಾದ ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ಉತ್ತೇಜನ ದೊರೆಯುವುದು ಮಾತ್ರವಲ್ಲ ಈ ಏಳು ದೇಶಗಳ ಜನರಿಗೆ ವೀಸಾ ಮಾಡಿಸುವ ಸಮಯ ಮತ್ತು ತಗಲುವ ಖರ್ಚು ಎರಡೂ ಉಳಿತಾಯವಾಗುತ್ತದೆ.

ಪಾಸ್ ಪೋರ್ಟ್ ಹೊಂದಿರುವ ಭಾರತೀಯರಿಗೆ ಶ್ರೀಲಂಕಾ ಮಾತ್ರ ವೀಸಾ ಮುಕ್ತ ಪ್ರಯಾಣ ಸೌಲಭ್ಯವನ್ನು ಒದಗಿಸುತ್ತಿಲ್ಲ. ಇದರೊಂದಿಗೆ ಇನ್ನೂ ಹಲವು ದೇಶಗಳು ಕೂಡ ವೀಸಾ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತಿದೆ.

ನೇಪಾಳ : ವಿಶಿಷ್ಟ ಸಂಸ್ಕೃತಿ ಮತ್ತು ಸುಂದರವಾದ ಪ್ರಕೃತಿಯ ಮಡಿಲಲ್ಲಿರುವ ನೇಪಾಳ ಪರ್ವತಗಳಿಗೆ ಹೆಸರುವಾಸಿ. ಈ ದೇಶಕ್ಕೆ ಹೋಗಲು ಭಾರತೀಯರಿಗೆ ವೀಸಾದ ಅಗತ್ಯವಿಲ್ಲ.

ಮಾಲ್ಡೀವ್ಸ್‌ : ಕಡಲ ತೀರಗಳು, ನೀರೊಳಗಿನ ರೆಸಾರ್ಟ್ ಗಳಿಗೆ ಹೆಸರುವಾಸಿಯಾಗಿರುವ ಮಾಲ್ಡೀವ್ಸ್‌ ಗೆ ಕೂಡ ವೀಸಾ ಇಲ್ಲದೇ ಹೋಗಿ 90 ದಿನಗಳ ಕಾಲ ಇದ್ದು ಬರಲು ಅವಕಾಶವಿದೆ.

ಮಾರಿಷಸ್ : ಅತ್ಯಂತ ಸುಂದರವಾದ ಬಿಳಿ ಮರಳಿನ ಕಡಲತೀರಗಳನ್ನೂ ಹೊಂದಿರುವ ಮಾರಿಷಸ್‌ಗೆ ಭಾರತೀಯರು ವೀಸಾ ಇಲ್ಲದೆ ತೆರಳಬಹುದು. ದ್ವೀಪ ರಾಷ್ಟ್ರವಾಗಿರುವ ಇಲ್ಲಿ ಭಾರತೀಯ ಪ್ರವಾಸಿಗರು ವೀಸಾ ಇಲ್ಲದೆ 90 ದಿನಗಳ ಕಾಲ ಕಳೆಯಬಹುದು.

ಭೂತಾನ್ : ವಲಸೆ ಇಲಾಖೆಯಿಂದ ಪ್ರವೇಶ ಪರವಾನಿಗೆ ಪಡೆದು ಭಾರತದ ನೆರೆಯ ದೇಶ ಭೂತಾನ್‌ಗೂ ಭಾರತೀಯರಿಗೆ ವೀಸಾಮುಕ್ತ ಪ್ರವೇಶವಿದೆ.

ಟ್ರಿನಿಡಾಡ್ ಮತ್ತು ಟೊಬಾಗೊ: ಉಭಯ ದ್ವೀಪ ರಾಷ್ಟ್ರ ಗಳಾಗಿರುವ ಟ್ರಿನಿಡಾಡ್ ಮತ್ತು ಟೊಬಾಗೊಗೆ ಹೋಗಲು ವೀಸಾ ಅಗತ್ಯವಿಲ್ಲ. ಇಲ್ಲಿ 90 ದಿನಗಳ ಕಾಲ ಇದ್ದು ಬರಬಹುದು.

ಬಾರ್ಬಡೋಸ್: ಕೆರಿಬಿಯನ್‌ನ “ಜ್ಯುವೆಲ್” ಎಂದೇ ಕರೆಯಲ್ಪಡುವ ವಿಶ್ವದ ಸುಂದರವಾದ ಬೀಚ್‌ಗಳಿಗೆ ಹೆಸರುವಾಸಿಯಾದ ಬಾರ್ಬಡೋಸ್ ಗೆ ಭಾರತೀಯ ಸಂದರ್ಶಕರು 90 ದಿನಗಳ ಅವಧಿಯವರೆಗೆ ವೀಸಾ ಇಲ್ಲದೆ ಹೋಗಿ ಬರಬಹುದು.

ಸೀಶೆಲ್ಸ್: ಮಳೆ ಕಾಡುಗಳು, ಕಡಲ ತೀರ ಮತ್ತು ದೈತ್ಯ ಅಲ್ಡಾಬ್ರಾ ಆಮೆಗಳಿಗೆ ಹೆಸರುವಾಸಿಯಾಗಿರುವ ಸೀಶೆಲ್ಸ್‌ ಗೆ ಹೋಗುವ ಭಾರತೀಯರಿಗೆ ವೀಸಾ ಅಗತ್ಯವಿಲ್ಲ. 30 ದಿನಗಳ ಪರವಾನಗಿಯನ್ನು ಮಾತ್ರ ಸೀಶೆಲ್ಸ್ ವಲಸೆ ಇಲಾಖೆಯಿಂದ ಪಡೆಯಬೇಕು.

ಫಿಜಿ: ಹವಳದ ಬಂಡೆಗಳನ್ನು ಹೊಂದಿರುವ ಫಿಜಿ 300 ಕ್ಕೂ ಹೆಚ್ಚು ದ್ವೀಪಗಳ ದ್ವೀಪಸಮೂಹವಿರುವ ರಾಷ್ಟ್ರ, ಭಾರತೀಯ ಪ್ರವಾಸಿಗರು ಇಲ್ಲಿ ವೀಸಾ ಇಲ್ಲದೆ 120 ದಿನಗಳ ಕಾಲ ಇರಬಹುದು.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *