ಗಾಜಾ ಭೂಮಿಯಡಿಯಲ್ಲಿ ಪತ್ತೆಯಾಯ್ತು 4ಕಿ.ಮೀ ಉದ್ದದ ‘ಹಮಾಸ್ ಸುರಂಗ’..! – ವೀಡಿಯೋ ರಿಲೀಸ್ ಮಾಡಿದ ಇಸ್ರೇಲ್ ಸೇನಾಪಡೆ…!!

ನ್ಯೂಸ್ ಆ್ಯರೋ : ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ಅನೇಕ ದಿನದಿಂದ ಕದನ ನಡೆಯುತ್ತಲೇ ಇದೆ. ಇದರಿಂದ ಸಾವಿರಾರು ಜನರ ಸಾವು- ನೋವು, ನಷ್ಟಗಳನ್ನು ಇಸ್ರೇಲ್ ನೋಡುತ್ತಲೇ ಬಂದಿದೆ. ಇತ್ತೀಚೆಗಷ್ಟೇ ಹಮಾಸ್ ಉಗ್ರರು ತಮ್ಮ ಒತ್ತೆಯಾಳುಗಳನ್ನು ಕೂಡಾ ಶತ್ರುಗಳೆಂದು ಭಾವಿಸಿ ಗುಂಡಿಕ್ಕಿ ಕೊಂದ ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿ ಮಾಡಿತ್ತು. ಇದೀಗ 100ಮೀಟರ್ ಗಳಷ್ಟು ದೂರದಲ್ಲಿರುವ ಗಾಜಾ ಪಟ್ಟಿಯಲ್ಲಿ ಇದುವರೆಗಿನ ಅತಿದೊಡ್ಡ ಹಮಾಸ್ ಸುರಂಗವನ್ನು ಬಹಿರಂಗಪಡಿಸಿರುವುದಾಗಿ ಇಸ್ರೇಲಿ ಸೇನೆ ತಿಳಿಸಿದೆ.

ಪತ್ತೆಯಾದ ‘ಹಮಾಸ್ ಸುರಂಗ’ ಹೇಗಿದೆ..?

ಚಿಕ್ಕ ವಾಹನಗಳು ಅದರೊಳಗೆ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ಈಗಾಗಲೇ AFP ಫೋಟೋಗ್ರಾಫರ್ ಒಬ್ಬರು ವರದಿ ಮಾಡಿದ್ದಾರೆ. ಈ ಭೂಗತ ಮಾರ್ಗವು 4ಕಿ. ಮೀ ಗಳಿಗೂ ಹೆಚ್ಚು ವಿಸ್ತರಿಸಿದೆ. ಎರೆಜ್ ಗಡಿ ದಾಟುವಿಕೆಯಿಂದ 400ಮೀಟರ್ ಒಳಗೆ ಬಂದಿದೆ. ಇದಕ್ಕಾಗಿ ಲಕ್ಷಾಂತರ ಡಾಲರ್ ಖರ್ಚಾಗಿದ್ದು ಇದರ ನಿರ್ಮಾಣಕ್ಕೆ ಅನೇಕ ವರ್ಷಗಳೇ ಸಂದಿವೆ ಎಂದು ಸೇನೆಯು ಹೇಳಿಕೆಯಲ್ಲಿ ಬಹಿರಂಗಪಡಿಸಿದೆ.

ಅ. 7ರ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುವ ಹಮಾಸ್ ಮುಖ್ಯಸ್ಥ ಯಹ್ಯಾ ಸಿನ್ವಾರ್ ಅವರ ಸಹೋದರ ಮೊಹಮ್ಮದ್ ಯಹ್ಯಾ ಅವರು ಯೋಜನೆಯ ನೇತೃತ್ವ ವಹಿಸಿದ್ದಾರೆ.

ಸುರಂಗದ ನಿರ್ಮಾಣ ಹೇಗೆ ಮಾಡಲಾಗಿದೆ ಗೊತ್ತಾ..?

ಈ ಮಾರ್ಗದ ಒಳಚರಂಡಿ ವ್ಯವಸ್ಥೆ, ವಿದ್ಯುತ್ , ವಾತಾಯನ, ಸಂವಹನ ಜಾಲ ಮತ್ತು ಹಳಿಗಳನ್ನು ಒಳಗೊಂಡಿದೆ. ನೆಲವು ಅಡಕವಾಗಿರುವ ಭೂಮಿಯಾಗಿದ್ದು ಅದರ ಗೋಡೆಗಳು ಬಲವರ್ಧಿತ ಕಾಂಕ್ರೀಟ್ ಮತ್ತು ಅದರ ಪ್ರವೇಶದ್ವಾರವು 1.5 ಸೆಂಟಿಮೀಟರ್ ದಪ್ಪದ ಗೋಡೆಗಳನ್ನು ಹೊಂದಿರುವ ಲೋಹದ ಸಿಲಿಂಡರ್ ಆಗಿದೆ. ಇಸ್ರೇಲಿ ಸೈನ್ಯವು ಬಿಡುಗಡೆ ಮಾಡಿದ ತುಣುಕನ್ನು ಹಮಾಸ್ ಚಿತ್ರೀಕರಿಸಿದೆ ಎಂದು ಹೇಳಿದ್ದು ಸಣ್ಣ ನಿರ್ಮಾಣ ವಾಹನವನ್ನು ಸುರಂಗದೊಳಗೆ ಓಡಿಸುತ್ತಿರುವುದನ್ನು ತೋರಿಸಿದೆ.

ಈ ವೀಡಿಯೋದಲ್ಲಿ ತಾತ್ಕಾಲಿಕ ಗೋದಾಮು ಮತ್ತು ಕಚ್ಚಾ ವಿದ್ಯುತ್ ಉಪಕರಣಗಳನ್ನು ಬಳಸಿ ಕಾರ್ಮಿಕರು ಭೂಮಿಯ ಕೆಳಗೆ ಅಗೆಯುತ್ತಿರುವುದನ್ನು ನಾವು ಇಲ್ಲಿ ನೋಡಬಹುದು. ಒಟ್ಟಾರೆಯಾಗಿ ಹಮಾಸ್ ಉಗ್ರರ ಇಂಚಿಂಚು ಹೆಜ್ಜೆಯನ್ನು ಇಸ್ರೇಲ್ ಸೇನೆ ಅತ್ಯಂತ ಸೂಕ್ಷ್ಮವಾಗಿ ಪತ್ತೆಹಚ್ಚುತ್ತಿದೆ ಎನ್ನಲಾಗ್ತಿದೆ.