
ಪಾಕಿಸ್ತಾನದ ಜನಪ್ರಿಯ ಟಿಕ್ ಟಾಕ್ ತಾರೆಯ ಪತಿ ಲಂಡನ್ ನಲ್ಲಿ ಅಪಹರಣ – ಜಾಲಿ ಟ್ರಿಪ್ ಹೋಗಿದ್ದ ಈ ದಂಪತಿಯ ಮೇಲೆ ಕಣ್ಣಿಟ್ಟಿದ್ಯಾರು?
- ಅಂತಾರಾಷ್ಟ್ರೀಯ ಸುದ್ದಿ
- September 5, 2023
- No Comment
- 60
ನ್ಯೂಸ್ ಆ್ಯರೋ : ಪಾಕಿಸ್ತಾನದ ಜನಪ್ರಿಯ ಟಿಕ್ ಟಾಕ್ ತಾರೆ ಹರೀಂ ಶಾ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪತಿಯನ್ನು ಸುರಕ್ಷಿತವಾಗಿ ಹುಡುಕಿಕೊಡಿ ಎಂದು ಬಹಿರಂಗವಾಗಿ ಕಣ್ಣೀರಿಡುತ್ತಿದ್ದಾರೆ. ಅಂತಹದ್ದೇನಾಯ್ತು? ಇಲ್ಲಿದೆ ವಿವರ..
ವೀಡಿಯೋ ವೈರಲ್
ಕೆಲವು ದಿನಗಳ ಹಿಂದೆ ಅಪರಿಚಿತರ ಗುಂಪು ಪತಿ ಬಿಲಾಲ್ ನನ್ನು ಅಪಹರಿಸಿದ್ದಾರೆ. ದಯವಿಟ್ಟು ಸುರಕ್ಷಿತವಾಗಿ ಹುಡುಕಿಕೊಡಿ ಎಂದು ಹರೀಂ ಶಾ ವೀಡಿಯೋ ಮಾಡಿದ್ದಾರೆ. ಸದ್ಯ ಇದು ವೈರಲ್ ಆಗಿದೆ. ಅವರು ಪಾಕಿಸ್ತಾನದ ಐ.ಎಸ್.ಐ. ನೆರವು ಕೇಳಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ
ಕಳೆದ ವಾರ ಹರೀಂ ಶಾ ಮತ್ತು ಬಿಲಾಲ್ ದಂಪತಿ ಲಂಡನ್ ಗೆ ತೆರಳಿದ್ದರು. ಹರೀಂ ಶಾ ಅವರನ್ನು ಅಲ್ಲೇ ಬಿಟ್ಟು ಬಿಲಾಲ್ ಒಬ್ಬರೇ ಪಾಕಿಸ್ತಾನಕ್ಕೆ ಮರಳಿದ್ದರು. ಆ ವೇಳೆ ಅವರ ಮನೆ ಬಳಿಗೆ ಬಂದ ಅಪರಿಚಿತರು ಬಿಲಾಲ್ ನನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಅವರ ಜೀವಕ್ಕೆ ಅಪಾಯವಿದೆ. ಪಾಕಿಸ್ತಾನದ ಗುಪ್ತಚರ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಸಹಾಯ ಮಾಡಬೇಕು ಎಂದು ಹರೀಂ ಮನವಿ ಮಾಡಿದ್ದಾರೆ.
ಸದಾ ವಿವಾದಗಳಿಂದಲೇ ಸುದ್ದಿಯಾಗುವ ಹರೀಂ ಶಾ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಹಿಂಬಾಲಕರನ್ನು ಹೊಂದಿದ್ದಾರೆ. ತನ್ನ ಗಂಡ ಯಾವುದೇ ರಾಜಕೀಯ ಮತ್ತು ಪ್ರತ್ಯೇಕತಾವಾದಿಗಳ ಗುಂಪಿನಲ್ಲಿಲ್ಲ. ಜೊತೆಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಹೀಗಾಗಿ ನಿರಪರಾಧಿಯಾದ ಆತನನ್ನು ಹುಡುಕಿಕೊಡಿ ಎಂದು ಕೇಳಿಕೊಂಡಿದ್ದಾರೆ.