
Video : ಕಂಡಕಂಡವರಿಗೆ ಗುಂಡು, ಮನೆ ಮನೆಗೆ ನುಗ್ಗಿ ಹುಡುಕಿ ದಾರುಣ ಕೊಲೆ – ಹಮಾಸ್ ಉಗ್ರರ ಅಟ್ಟಹಾಸದ ವಿಡಿಯೋ ಹರಿಬಿಟ್ಟ ಇಸ್ರೇಲ್ ಸೇನೆ
- ಅಂತಾರಾಷ್ಟ್ರೀಯ ಸುದ್ದಿ
- October 17, 2023
- No Comment
- 101
ನ್ಯೂಸ್ ಆ್ಯರೋ : ಇಸ್ರೇಲ್ ಹಾಗೂ ಉಗ್ರರ ನಡುವಿನ ಭೀಕರ ಯುದ್ಧದಲ್ಲಿ ಪ್ಯಾಲೆಸ್ತೇನಿಯನ್‌ನ 2,650 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಇದರಲ್ಲಿ 6 ಮಂದಿ ಹಮಾಸ್ ಮುಖಂಡರು ಹತರಾಗಿದ್ದಾರೆ. 9,600 ಮಂದಿ ಗಾಯಗೊಂಡಿದ್ದಾರೆ.
ದಾಳಿಯ ವೇಳೆ ಉಗ್ರರೇ ಮಾಡಿದ ವಿಡಿಯೋಗಳನ್ನು ಇಸ್ರೇಲ್ ಪಡೆ ತನ್ನ ಅಧಿಕೃತ ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದೆ. ಅದರಲ್ಲಿ ಬಂದೂಕುಧಾರಿ ಉಗ್ರರು ಇಸ್ರೇಲಿ ಜನರ ಮೇಲೆ ಮನಬಂದಂತೆ ಗುಂಡಿನ ದಾಳಿ ಮಾಡುತ್ತಿರುವುದನ್ನು ಕಾಣಬಹುದು.
ಮನೆಗಳಿಗೆ ನುಗ್ಗುವುದು, ಎದುರು ಸಿಕ್ಕ ಜನರ ಮೇಲೆಲ್ಲ ಗುಂಡು ಹಾರಿಸುತ್ತಿರುವುದು ಅದರಲ್ಲಿದೆ. ಮನೆಯೊಂದರ ಮೇಲೆ ರಾಕೆಟ್ ದಾಳಿಯಾಗಿ ಇಡೀ ಮನೆ ಧ್ವಂಸವಾಗಿದ್ದು, ಈ ಮನೆ ಪ್ರೀತಿಯಿಂದ ತುಂಬಿತ್ತು. ಹಮಾಸ್ ದಾಳಿಗೆ ಹಾಳು ಕೊಂಪೆಯಾಗಿದೆ ಎಂದು ಬರೆದುಕೊಂಡಿದೆ.
ಇನ್ನೂ ಇಸ್ರೇಲ್‌ನ ಪ್ರತಿ ದಾಳಿಗೆ ಗಾಜಾ ಧ್ವಂಸವಾಗಿದೆ. ದಕ್ಷಿಣ ಗಾಜಾದ ಕಡೆಗೆ ಜನರು ಸ್ಥಳಾಂತರವಾಗಿದ್ದರಿಂದ ಇಲ್ಲೂ ಆಹಾರ, ನೀರಿಗೆ ಹಾಹಾಕಾರ ಉಂಟಾಗಿದೆ ಎಂದು ವಿಶ್ವಸಂಸ್ಥೆಯ ಪ್ಯಾಲೆಸ್ಟೈನ್ ನಿರಾಶ್ರಿತರ ಸಂಸ್ಥೆ ಹೇಳಿದೆ. ಇಲ್ಲಿನ ಶಾಲೆಗಳು ಮತ್ತು ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿರುವ ಜನರ ಸಂಖ್ಯೆಯು ಅಗಾಧವಾಗಿದೆ.
ಅವರಿಗೆ ಸೂಕ್ತ ಸೌಕರ್ಯ ಮತ್ತು ಆಹಾರದ ವ್ಯವಸ್ಥೆ ಇಲ್ಲವಾಗಿದೆ ಎಂದಿದೆ. 10ಲಕ್ಷ ಮಂದಿ ಜನರು ದಕ್ಷಿಣ ಗಾಜಾಗೆ ಸ್ಥಳಾಂತರವಾಗಿದ್ದರಿಂದ ಇಲ್ಲಿನ ಮೂಲ ಸೌಕರ್ಯಗಳು ಖಾಲಿಯಾಗುತ್ತ ಬಂದಿದೆ.ಈ ಭಾಗದಲ್ಲಿ ಸದ್ಯ ಲಭ್ಯವಿರುವ ಆಹಾರ ಅಥವಾ ಔಷಧವೂ ಕೆಲವೇ ದಿನಗಳಲ್ಲಿ ಖಾಲಿಯಾಗಲಿದೆ.



ಹಮಾಸ್ ವಶದಲ್ಲಿರುವ ಇಸ್ರೇಲ್ ನಾಗರೀಕರನ್ನು ಬಿಡುಗಡೆ ಮಾಡಿ: ವಿಶ್ವಸಂಸ್ಥೆ ಮನವಿ
ವಿಶ್ವಸಂಸ್ಥೆಯ ಜನರಲ್ ಸೆಕ್ರೆಟರಿ ಆಂಟೋನಿಯೊ ಗುಟೆರೆಸ್ ಅವರು, ಒತ್ತೆಯಾಳಾಗಿಟ್ಟುಕೊಂಡವರನ್ನು ಷರತ್ತುಗಳಿಲ್ಲದೇ ಬಿಡುಗಡೆ ಮಾಡಲು ಹಮಾಸ್ ಉಗ್ರರಲ್ಲಿ ಮನವಿ ಮಾಡಿದ್ದಾರೆ. ಗಾಜಾದಲ್ಲಿ ಸಿಲುಕಿರುವ ಜನರಿಗೆ ಈಜಿಪ್ಟ್, ಜೋರ್ಡಾನ್, ವೆಸ್ಟ್ ಬ್ಯಾಂಕ್ ಮತ್ತು ಇಸ್ರೇಲ್‌ನಿಂದ ಆಹಾರ, ನೀರು, ವೈದ್ಯಕೀಯ ಸವಲತ್ತು ಸೇರಿದಂತೆ ಇತರ ಅವಶ್ಯಕಗಳನ್ನು ಸರಬರಾಜು ಮಾಡಲು ಕೋರಿದ್ದಾರೆ.