
ಇಸ್ರೋ ಉಪಗ್ರಹ ಕೇಂದ್ರದಲ್ಲಿ ನನ್ನನ್ನು ನಿಷ್ಪ್ರಯೋಜಕ ಎಂದಿದ್ದರು..! – ಇಸ್ರೋ ಮಾಜಿ ಅಧ್ಯಕ್ಷ, ಚಂದ್ರಯಾನ 2 ರೂವಾರಿ ಕೆ. ಶಿವನ್ ಬಿಚ್ಚುಮಾತು
- ರಾಷ್ಟ್ರೀಯ ಸುದ್ದಿ
- October 17, 2023
- No Comment
- 61
ನ್ಯೂಸ್ ಆ್ಯರೋ : ನಾನು ಬಾಲಕನಾಗಿದ್ದಾಗ ಶಾಲಾ ಶಿಕ್ಷಕನಾಗ ಬಯಸಿದ್ದೆ ವಿಜ್ಞಾನಿಯಲ್ಲ ಎಂದು ಇಸ್ರೋ ಮಾಜಿ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.
ಇತ್ತೀಚೆಗೆ ಗೋವಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ತಮ್ಮ ಬದುಕಿನ ಅನೇಕ ಸಿಹಿ-ಕಹಿ ಘಟನೆಗಳನ್ನು ನೆನಪಿಸಿಕೊಂಡರು.
ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಬಳಿಕ ಕೆಲಸ ಕೇಳಲು ಇಸ್ರೋ ಉಪಗ್ರಹ ಕೇಂದ್ರಕ್ಕೆ ಹೋಗಿದ್ದೆ. ಅಲ್ಲಿ ನನ್ನನ್ನು ನಿಷ್ಪ್ರಯೋಜಕ ಎಂದು ಹೇಳಿ ಹೊರಹೋಗಲು ಹೇಳಿದ್ದರು ಎಂದು ಶಿವನ್ ತಿಳಿಸಿದ್ದಾರೆ.
ಬಿಇ ಬಳಿಕ ಕೆಲಸಕ್ಕೆ ಸೇರಲು ಬಯಸಿದ್ದೆ. ಆದರೆ ಆದರೆ ಕೆಲಸ ಪಡೆಯುವುದು ಸುಲಭದ ಮಾತಾಗಿರಲಿಲ್ಲ. ಹೀಗಾಗಿ ಸ್ನಾತಕೋತ್ತರ ಪದವಿಗೆ ಸೇರಿಕೊಂಡೆ. ಬಳಿಕ ಕೆಲಸ ಕೇಳಲು ಇಸ್ರೋದ ಉಪಗ್ರಹ ಕೇಂದ್ರಕ್ಕೆ ಹೋದಾಗ ಅಲ್ಲಿ ತಿರಸ್ಕಾರ ದೊರೆಯಿತು. ಬಳಿಕ ನಾನು ಅದೇ ಸಂಸ್ಥೆಯ ಅಧ್ಯಕ್ಷನಾದೆ. ಉಪಗ್ರಹ ಕೇಂದ್ರದಲ್ಲಿ ಕೆಲಸ ಸಿಗದೇ ಇದ್ದರೂ ರಾಕೆಟ್ ಕೇಂದ್ರದಲ್ಲಿ ಸಿಕ್ಕಿತು ಎಂದು ಹೇಳಿದರು.
ತಮ್ಮ ವೃತ್ತಿಜೀವನದಲ್ಲಿ ಯಾವುದು ಬಯಸಿದ್ದು ಸಿಗಲಿಲ್ಲ. ಆದರೆ ಅದೃಷ್ಟ ಹೊಸ ಬಾಗಿಲುಗಳನ್ನು ತೆರೆಯುತ್ತಲೇ ಇತ್ತು ಎಂದ ಶಿವನ್, ಜಿಎಸ್ಎಲ್ವಿ (ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ನಿರ್ದೇಶಕರಾದಾಗ ಈ ಯೋಜನೆ ಸಂಪೂರ್ಣ ಯಶಸ್ವಿಗೊಳಿಸಲು ನಿರ್ಧರಿಸಿದೆ. ಆದರೆ ಇದಕ್ಕಾಗಿ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಇದರಿಂದ ಇಸ್ರೋ ಅಧಿಕಾರಿಗಳ ಗಮನ ಸೆಳೆಯುವುದು ಸಾಧ್ಯವಾಯಿತು. ಜಿಎಸ್‌ಎಲ್‌ವಿ ಯೋಜನೆಯಲ್ಲಿ ನಾಲ್ಕು ಬಾರಿ ವಿಫಲವಾಗಿರುವ ನನ್ನನ್ನು ಯೋಜನೆಯ ನಿರ್ದೇಶಕರನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.
ನಿರ್ದೇಶಕ ಸ್ಥಾನವನ್ನು ಒಪ್ಪಿಕೊಂಡಿದ್ದು ನನ್ನ ಮೂರ್ಖತನ ಎಂದು ಎಲ್ಲರೂ ಹೇಳಿದ್ದರು. ಆದರೆ ನಾನು ಬಲವಾದ ನಂಬಿಕೆ ಇಟ್ಟುಕೊಂಡಿದ್ದೆ. ಹೀಗಾಗಿ ಜಿಎಸ್ಎಲ್ವಿ ಯೋಜನೆಯನ್ನು ಯಶಸ್ವಿಗೊಳಿಸಿದ್ದೇನೆ ಎಂದರು.
ಚಂದ್ರಯಾನ-2 ಮಿಷನ್ ವೈಫಲ್ಯವನ್ನು ನೆನಪಿಸಿಕೊಂಡ ಅವರು, ಬಳಿಕ ನಾವು ಸುಮ್ಮನೆ ಕೂರಲಿಲ್ಲ. ಮರು ದಿನವೇ ಚಂದ್ರಯಾನ- 3ರ ತಯಾರಿ ಆರಂಭಿಸಿದ್ದೇವೆ ಎಂದು ಹೇಳಿದರು.