ಹಮಾಸ್ ಉಗ್ರರಿಂದ 5 ಸಾವಿರ ರಾಕೆಟ್ ದಾಳಿ, ಒಬ್ಬ ಮೇಯರ್ ಸಾವು – ಯುದ್ಧ ಉನ್ಮಾದದೊಂದಿಗೆ ಗಾಜಾಪಟ್ಟಿಯತ್ತ ಮುನ್ನುಗ್ಗಿದ ಇಸ್ರೇಲ್ ಪಡೆ..!!

ಹಮಾಸ್ ಉಗ್ರರಿಂದ 5 ಸಾವಿರ ರಾಕೆಟ್ ದಾಳಿ, ಒಬ್ಬ ಮೇಯರ್ ಸಾವು – ಯುದ್ಧ ಉನ್ಮಾದದೊಂದಿಗೆ ಗಾಜಾಪಟ್ಟಿಯತ್ತ ಮುನ್ನುಗ್ಗಿದ ಇಸ್ರೇಲ್ ಪಡೆ..!!

ನ್ಯೂಸ್ ಆ್ಯರೋ : ಗಾಜಾ ಪಟ್ಟಿಯ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಸುಮಾರು 5 ಸಾವಿರ ರಾಕೆಟ್‌ಗಳಿಂದ ದಾಳಿ ನಡೆಸಿದ್ದು, ಒಬ್ಬ ನಾಗರಿಕ ಸಾವನ್ನಪ್ಪಿದ್ದಾರೆ. ಇನ್ನೂ ಘಟನೆಯಲ್ಲಿ 16 ಮಂದಿ ಗಾಯಗೊಂಡಿದ್ದಾರೆ.

ಹಮಾಸ್ ದಾಳಿಗೆ ದಕ್ಷಿಣ ಇಸ್ರೇಲ್‌ನಲ್ಲಿ ಡಿರೋಟ್ ಪ್ರದೇಶದಲ್ಲಿ ಮೃತಪಟ್ಟಿದ್ದಾರೆ. ಇಸ್ರೇಲ್‌ಗೆ ಇದು ಅನಿರೀಕ್ಷಿತ ದಾಳಿಯಾಗಿದ್ದು, ಗಾಜಾಪಟ್ಟಿಯಿಂದ ಇಸ್ರೇಲ್ ಒಳಗೆ ನೂರಾರು ಉಗ್ರರು ನುಸುಳಿದ್ದಾರೆ.

ಈ ಹಿನ್ನೆಲೆಯಲ್ಲಿ ಇಸ್ರೇಲ್ ದೇಶದ ದಕ್ಷಿಣ ಮತ್ತು ಸೆಂಟ್ರಲ್ ಪ್ರದೇಶದಲ್ಲಿ ವಾಸವಾಗಿರುವ ಜನರು ಮನೆಯಿಂದ ಹೊರಗೆ ಬಾರದಂತೆ ಎಚ್ಚರಿಗೆ ಸಂದೇಶ ರವಾನಿಸಿದೆ.

ಈ ನಡೆಗೆ ಕೆರಳಿರುವ ಇಸ್ರೇಲ್, ಗಾಜಾ ವಿರುದ್ಧ ಸ್ಟೇಟ್ ಆಫ್ ವಾರ್ ಘೋಷಣೆ ಮಾಡಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೇಲ್ ಸೇನೆ, ಹಮಾಸ್ ಉಗ್ರರು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಸಂದೇಶ ಕಳುಹಿಸಿದ್ದಾರೆ.

ಇಸ್ರೇಲ್ ಪುಟಾಣಿ ದೇಶವೇ ಆಗಿದ್ದರೂ ಅದರ ಸೇನಾ ಶಕ್ತಿ ಬಲಶಾಲಿ ದೇಶಗಳನ್ನೇ ಮೀರಿಸಿ ನಿಲ್ಲುತ್ತದೆ. ಹೀಗಾಗಿಯೇ ಇಸ್ರೇಲ್ ಸೇನೆಯ ಬಳಿ ಭಯಾನಕ ಫೈಟರ್ ಜೆಟ್ ಎನ್ನಲಾಗುವ F-35s ಮಾದರಿಯ 75 ಯುದ್ಧ ವಿಮಾನಗಳು ಇವೆ. ಇದಿಷ್ಟೇ ಅಲ್ಲದೆ ಡ್ರೋನ್‌ಗಳು ಸೇರಿ ಒಟ್ಟಾರೆ 684 ಯುದ್ಧ ವಿಮಾನಗಳು ಇಸ್ರೇಲ್ ವಾಯು ಸೇನೆಯಲ್ಲಿ ಇವೆ. ಹಾಗೇ ಇದನ್ನು ನಿಭಾಯಿಸಲು 34,000 ಸೈನಿಕರು ಸಿದ್ಧವಾಗಿದ್ದು, 55,000 ಮೀಸಲು ಪಡೆ ಸೈನಿಕರಿಗೂ ಇದೀಗ ಕರೆ ಹೋಗಿದೆ. ಈ ಮೂಲಕ ಗಾಜಾಪಟ್ಟಿ ಪ್ರದೇಶದಲ್ಲಿ ಹಮಾಸ್ ಉಗ್ರರ ರಕ್ತಪಾತ ಮಾಡಲು ಇಸ್ರೇಲ್ ನುಗ್ಗುತ್ತಿದೆ. ಇನ್ನು ಇಸ್ರೇಲ್ ಭೂ ಸೇನೆ ಕೂಡ ಬಲವಾಗಿದ್ದು, 2,500 ಯುದ್ಧ ಟ್ಯಾಂಕರ್ ಹಾಗೂ 5,000 ಶಸ್ತ್ರಾಸ್ತ್ರ ಸಾಗಿಸುವ ವಾಹನಗಳು ಕೂಡ ಇವೆ.

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *