Israel Vs Palestine : 200ಕ್ಕೂ ಅಧಿಕ ಜೀವ ಬಲಿ ಪಡೆದ ರಣೋತ್ಸಾಹಿ ಇಸ್ರೇಲ್ – ಹಮಾಸ್ ಉಗ್ರರಿಂದ ಇಸ್ರೇಲಿ ಮಹಿಳೆಯ ಅರೆಬೆತ್ತಲೆ ದೇಹದ ಮೇಲೆ ಕುಳಿತು ಅಲ್ಲಾಹು ಅಕ್ಬರ್ ಘೋಷಣೆ : ವಿಡಿಯೋ ವೈರಲ್..

Israel Vs Palestine : 200ಕ್ಕೂ ಅಧಿಕ ಜೀವ ಬಲಿ ಪಡೆದ ರಣೋತ್ಸಾಹಿ ಇಸ್ರೇಲ್ – ಹಮಾಸ್ ಉಗ್ರರಿಂದ ಇಸ್ರೇಲಿ ಮಹಿಳೆಯ ಅರೆಬೆತ್ತಲೆ ದೇಹದ ಮೇಲೆ ಕುಳಿತು ಅಲ್ಲಾಹು ಅಕ್ಬರ್ ಘೋಷಣೆ : ವಿಡಿಯೋ ವೈರಲ್..

ನ್ಯೂಸ್ ಆ್ಯರೋ : ಗಾಜಾಪಟ್ಟಿಯ ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ ನ 100 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದ್ದು, ಹಮಾಸ್ ಉಗ್ರರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದೇವೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಕ್ರಿಯಿಸಿದ ಬೆನ್ನಲ್ಲೇ 200 ಪ್ಯಾಲೇಸ್ತೀನಿಯರನ್ನು ಇಸ್ರೇಲ್ ಪಡೆ ಕೊಂದು ಹಾಕಿದೆ‌.

ಉಗ್ರ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಯುದ್ಧ ಘೋಷಣೆ ಮಾಡಿದ್ದು, ಗಾಜಾಪಟ್ಟಿಯಲ್ಲಿರುವ ಹಮಾಸ್‌ ಉಗ್ರರ ಕಟ್ಟಡಗಳ ಮೇಲೆ ಇಸ್ರೇಲ್‌ನ ರಾಕೆಟ್‌ಗಳು ದಾಳಿ ನಡೆಸಿವೆ. ಸುಮಾರು 12ಕ್ಕೂ ಅಧಿಕ ರಾಕೆಟ್‌ಗಳ ಮೂಲಕ ಹಮಾಸ್‌ ಉಗ್ರರಿಗೆ ಇಸ್ರೇಲ್‌ ತಕ್ಕ ಪಾಠ ಕಲಿಸಿದೆ.

ಹಮಾಸ್‌ ಉಗ್ರರ ಕಟ್ಟಡಗಳ ಮೇಲೆ ರಾಕೆಟ್‌ಗಳು ದಾಳಿ ನಡೆಸುವ, ಅವುಗಳನ್ನು ಉಡಾಯಿಸುವ ವಿಡಿಯೊಗಳು ಲಭ್ಯವಾಗಿವೆ. ಅಷ್ಟೇ ಅಲ್ಲ, ಇಸ್ರೇಲ್‌ ಹೇಗೆ ಭೀಕರವಾಗಿ ತಿರುಗೇಟು ನೀಡುತ್ತಿದೆ ಎಂಬುದಕ್ಕೆ ಈ ದೃಶ್ಯಗಳು ಸಾಕ್ಷಿಯಾಗಿವೆ. ಹಮಾಸ್‌ ಉಗ್ರರ ಮೇಲೆ ಇಸ್ರೇಲ್‌ ಸಾರಿರುವ ಸಮರಕ್ಕೆ ಆಪರೇಷನ್‌ ಸ್ವೊರ್ಡ್ಸ್‌ ಆಫ್‌ ಐರನ್‌ (Operation Swords Of Iron) ಎಂದು ಹೆಸರಿಟ್ಟಿದೆ.

ಸದ್ಯದ ಮಾಹಿತಿ ಪ್ರಕಾರ ಇಸ್ರೇಲ್‌ ನಡೆಸಿದ ವಾಯುದಾಳಿಯಲ್ಲಿ 200ಕ್ಕೂ ಅಧಿಕ ಪ್ಯಾಲೆಸ್ತೀನಿಯರು ಮೃತಪಟ್ಟರೆ, 1,600ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ಇಸ್ರೇಲ್‌ ದಾಳಿಗೆ ಹಮಾಸ್‌ ಉಗ್ರರ ಮೂರು ನೆಲೆಗಳು ಧ್ವಂಸಗೊಂಡಿವೆ. ಅವರ ಬೃಹತ್‌ ಕಟ್ಟಡಗಳು ಧರೆಗುರುಳಿವೆ. ಪ್ಯಾಲೆಸ್ತೀನ್‌ ಉಗ್ರರ ಮೇಲೆ ಯುದ್ಧ ಸಾರಿರುವ ಇಸ್ರೇಲ್‌, ಇನ್ನೂ ಭೀಕರ ದಾಳಿಯ ಮೂಲಕ ವೈರಿಗಳಿಗೆ ತಕ್ಕ ಪಾಠ ಕಲಿಸಲಿದೆ ಎಂದು ಅಂತರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಇದರ ನಡುವೆ ಇಸ್ರೇಲೀ ಮಹಿಳೆಯ ಅರೆಬೆತ್ತಲೆ ದೇಹದ ಮೇಲೆ ಕುಳಿತು ಹಮಾಸ್ ಉಗ್ರರು ಅಲ್ಲಾಹು ಅಕ್ಬರ್ ಘೋಷಣೆ ಕೂಗುವ ವಿಡಿಯೋ ವೈರಲ್ ಆಗಿದ್ದು, ಇಸ್ರೇಲ್ ಪಡೆಯ ಉತ್ತರ ಹೇಗಿರಲಿದೆ ಎಂದು ಸದ್ಯದಲ್ಲೇ ಗೊತ್ತಾಗಲಿದೆ‌

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *