ಇಂದು ವಿಶ್ವ ಏಡ್ಸ್‌ ಲಸಿಕಾ ದಿನ – ಏನಿದರ ಮಹತ್ವ? ಇದರ ಉದ್ದೇಶವೇನು?

ಇಂದು ವಿಶ್ವ ಏಡ್ಸ್‌ ಲಸಿಕಾ ದಿನ – ಏನಿದರ ಮಹತ್ವ? ಇದರ ಉದ್ದೇಶವೇನು?

ನ್ಯೂಸ್ ಆ್ಯರೋ‌ : ಜಗತ್ತನ್ನೇ ತಲ್ಲಣಗೊಳಿಸಿದ ಏಡ್ಸ್‌ ಮಹಾಮಾರಿಯ ಸಂಪೂರ್ಣ ನಿರ್ಮೂಲನೆಗೆ ಇದುವರೆಗೆ ಯಾವುದೇ ಸೂಕ್ತ ಲಸಿಕೆಗಳನ್ನು ಕಂಡು ಹಿಡಿದಿಲ್ಲ. ಆದರೂ ಇದರ ನಿಯಂತ್ರಣಕ್ಕೆ ಕೆಲವೊಂದು ಲಸಿಕೆಗಳನ್ನು ಉಪಯೋಗಿಸಲಾಗುತ್ತದೆ. ಆದ್ದರಿಂದ ಏಡ್ಸ್‌ ಲಸಿಕೆಯ ಕುರಿತು ಪ್ರತಿಯೊಬ್ಬರಲ್ಲೂ ಜ್ಞಾನ ಮೂಡಿಸಲು ಪ್ರತಿವರ್ಷ ಮೇ 18ರಂದು ‘ವಿಶ್ವ ಏಡ್ಸ್‌ ಲಸಿಕಾ ದಿನʼವನ್ನು ಆಚರಿಸಲಾಗುತ್ತದೆ.

ಏಡ್ಸ್‌ ಲಸಿಕೆಯು ಎಚ್‌ಐವಿ ಸೋಂಕು ಇತರರಿಗೆ ಹರಡದಂತೆ ತಡೆಯುತ್ತದೆ. ಜೊತೆಗೆ ಏಡ್ಸ್‌ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವು ಈ ದಿನದ ಆಚರಣೆಯ ಹಿಂದಿದೆ. ಮಾತ್ರವಲ್ಲ ಏಡ್ಸ್‌ ರೋಗದ ವಿರುದ್ಧ ಹೋರಾಡುವ ಸಂಘ ಸಂಸ್ಥೆಗಳು, ವೈದ್ಯರು, ಆರೋಗ್ಯ ಕಾರ್ಯಕರ್ತರು, ಸ್ವಯಂ ಸೇವಕರಿಗೆ ಧನ್ಯವಾದ ಅರ್ಪಿಸುವ ದಿನವೂ ಹೌದು. ಏಡ್ಸ್‌ ಲಸಿಕೆಯನ್ನು ಅಭಿವೃದ್ಧಿ ಪಡಿಸಲು ತಮ್ಮ ಸಮಯ ಹಾಗೂ ಜೀವನವನ್ನು ಮೀಸಲಿಟ್ಟ ವೈದ್ಯಕೀಯ ತಜ್ಞರು, ವಿಜ್ಞಾನಿಗಳು, ಸ್ವಯಂ ಸೇವಕರು ಹಾಗೂ ಬೆಂಬಲಿಗರಿಗೆ ಈ ದಿನದಂದು ಕೃತಜ್ಞತೆ ಸಲ್ಲಿಸಲಾಗುತ್ತದೆ.

ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಲರ್ಜಿ ಆ್ಯಂಡ್ ಇನ್‌ಫೆಕ್ಷಸ್‌ ಈ ದಿನದ ಆಚರಣೆಯ ಕುರಿತು ಪ್ರಸ್ತಾವನೆ ನೀಡಿತ್ತು. ಜನರು ಏಡ್ಸ್‌ ರೋಗ ಬಗ್ಗೆ ಆರಂಭದಲ್ಲಿ ನಿರ್ಲಕ್ಷ್ಯ ಮಾಡಿದ್ದರೂ ಕೂಡ ಬಳಿಕ ಇದರ ಗಂಭೀರತೆಯನ್ನು ಅರಿತು ಜಾಗೃತರಾಗಿದ್ದಾರೆ.

ಇತಿಹಾಸ

ಮೇ 18, 1988ರಂದು ಪ್ರಪಂಚದಾದ್ಯಂತ ಮೊದಲ ವಿಶ್ವ ಏಡ್ಸ್ ಲಸಿಕೆ ದಿನವನ್ನು ಆಚರಿಸಲಾಯಿತು. ವಿಶ್ವ ಏಡ್ಸ್ ಲಸಿಕೆ ದಿನದ ಪರಿಕಲ್ಪನೆಯನ್ನು 1987ರಲ್ಲಿ ಅಂದಿನ ಅಮೆರಿಕಾ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಮೋರ್ಗಾನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಇವರ ಭಾಷಣದಿಂದ ಸ್ಫೂರ್ತಿಗೊಂಡು ಲಸಿಕೆ ಕಂಡು ಹಿಡಿಯುವ ಕೆಲಸ ಆರಂಭವಾಗಿತ್ತು. ಈ ಭಾಷಣದಲ್ಲಿ ಕ್ಲಿಂಟನ್‌ ಲಸಿಕೆಯನ್ನು ತಯಾರಿಸಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸುವುದರ ಪ್ರಾಮುಖ್ಯತೆಯ ಕುರಿತು ವಿವರ ನೀಡಿದ್ದರು.

ಅರಿವು ಮೂಡಿಸುವ ಉದ್ದೇಶ

ಎಚ್‌ಐವಿ ಸೋಂಕು ತಡೆಗಟ್ಟುವ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು, ಏಡ್ಸ್ ನಿರ್ಮೂಲನೆಯ ಕುರಿತು ಜಾಗೃತಿ ಮೂಡಿಸುವುದು, ಸಂದೇಶಗಳನ್ನು ಪ್ರಸಾರ ಮಾಡುವುದು, ಶಿಕ್ಷಣವನ್ನು ಸಾರುವುದು, ಸಂಶೋಧಕರನ್ನು ಪ್ರೋತ್ಸಾಹಿಸುವುದು ಮತ್ತು ಜನರು ಈ ಉದಾತ್ತ ಉದ್ದೇಶದಲ್ಲಿ ತೊಡಗಿಸಿಕೊಳ್ಳುವುದನ್ನು ಖಾತ್ರಿಪಡಿಸುವ ಪ್ರಾಥಮಿಕ ಗುರಿಯೊಂದಿಗೆ ವಿಶ್ವ ಏಡ್ಸ್ ಲಸಿಕೆ ದಿನವನ್ನು ಆಚರಿಸಲಾಗುತ್ತದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *