ದುಬೈನ ಅತೀ ಎತ್ತರದ ಹೋಟೆಲ್ ನ ತುತ್ತತುದಿಯಲ್ಲಿ ವಿಮಾನ ಲ್ಯಾಂಡಿಂಗ್ – ಹೇಗಿತ್ತು ಗೊತ್ತಾ ಆ ಕ್ಷಣ? ವೈರಲ್ ವಿಡಿಯೋ ನೋಡಿ..

ದುಬೈನ ಅತೀ ಎತ್ತರದ ಹೋಟೆಲ್ ನ ತುತ್ತತುದಿಯಲ್ಲಿ ವಿಮಾನ ಲ್ಯಾಂಡಿಂಗ್ – ಹೇಗಿತ್ತು ಗೊತ್ತಾ ಆ ಕ್ಷಣ? ವೈರಲ್ ವಿಡಿಯೋ ನೋಡಿ..

ನ್ಯೂಸ್ ಆ್ಯರೋ : ದುಬೈನ ಅತ್ಯಂತ ಎತ್ತರ ಹೋಟೆಲ್​​ಗಳಲ್ಲಿ ಒಂದಾದ ಬುರ್ಜ್​ ಅಲ್​ ಅರಬ್​ ಹೋಟೆಲ್​​ನ ತುತ್ತ ತುದಿಯಲ್ಲಿರುವ ಹೆಲಿಪ್ಯಾಡ್​ ಮೇಲೆ ಪೋಲ್ಯಾಂಡ್​​ನ ಪೈಲೆಟ್​​ವೊಬ್ಬರು ಯಶಸ್ವಿಯಾಗಿ ವಿಮಾನವನ್ನು ಲ್ಯಾಂಡ್ ಮಾಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಈ ರೀತಿ ಹೆಲಿಪ್ಯಾಡ್​ ಮೇಲೆ ವಿಮಾನವೊಂದನ್ನು ಲ್ಯಾಂಡ್​ ಮಾಡಿಸಿದ್ದು ವಿಶ್ವದಲ್ಲೇ ಇದು ಮೊದಲು ಎಂದು ಹೇಳಲಾಗಿದೆ. ಅಂದಹಾಗೇ, ಪೋಲ್ಯಾಂಡ್​​ನ ಈ ಸಾಹಸಿ ಪೈಲೆಟ್​ ಹೆಸರು ಲ್ಯೂಕ್ ಜೆಪಿಯೆಲಾ. ಅವರಿಗೆ 39 ವರ್ಷ. 27 ಮೀಟರ್​ ಅಗಲ ಇರುವ, ವಿಶೇಷವಾಗಿ ಮಾರ್ಪಾಡು ಮಾಡಲಾದ ವಿಮಾನವನ್ನು ಪೈಲೆಟ್​ ಲ್ಯೂಕ್​ ಅವರು ಅತಿ ಎತ್ತರದ ಹೋಟೆಲ್​​ನ ಹೆಲಿಪ್ಯಾಡ್​​ ಮೇಲೆ ಲ್ಯಾಂಡ್ ಮಾಡಿಸಿ, ಮತ್ತೆ ಅಲ್ಲಿಂದ ಟೇಕ್​ ಆಫ್​ ಆಗುವ ವಿಡಿಯೊ ವೈರಲ್ ಆಗಿದ್ದು, ದೃಶ್ಯ ಮೈ ಜುಂ ಎನ್ನುವಂತಿದೆ.

ಹೆಲಿಪ್ಯಾಡ್​ ಮೇಲೆ ಹೆಲಿಕಾಪ್ಟರ್​ ಲ್ಯಾಂಡ್​ ಮಾಡಿಸಬಹುದೇ ಹೊರತು, ವಿಮಾನಗಳನ್ನು ಲ್ಯಾಂಡ್ ಮಾಡಿಸಲು ಆಗದು. ವಿಮಾನಗಳು ಲ್ಯಾಂಡ್ ಆಗಲು ರನ್​ ವೇ ಬೇಕು. ಹೀಗಾಗಿ ಪೋಲ್ಯಾಂಡ್​ ಪೈಲೆಟ್​ ಲ್ಯೂಕ್ ಜೆಪಿಯೆಲಾ ಅವರು, ಒಂದು ಚಿಕ್ಕದಾದ ವಿಮಾನವನ್ನು ಅಷ್ಟೆತ್ತರದ ಹೋಟೆಲ್​ ಮೇಲಿನ ಹೆಲಿಪ್ಯಾಡ್​​ ಮೇಲೆ ಲ್ಯಾಂಡ್ ಮಾಡಿಸಿದ್ದು ಸಾಹಸವೇ ಸೈ.. ಅಂದಹಾಗೇ, ಇವರು ಇದೊಂದು ಸಾಹಸಕ್ಕಾಗಿ ಕಳೆದ ಎರಡು ವರ್ಷಗಳಿಂದ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.

ಒಂದು ಕೃತಕ ದ್ವೀಪದ ಮೇಲೆ ನಿಂತಿರುವ ಬುರ್ಜ್​ ಅಲ್​ ಅರಬ್​ ಹೋಟೆಲ್​​ 212 ಮೀಟರ್​ ಎತ್ತರವಿದೆ. ಒಟ್ಟು 56 ಫ್ಲೋರ್​ಗಳು ಇವೆ. ಈ ಐತಿಹಾಸಿಕ ಕಟ್ಟಡದ ತುತ್ತತುದಿಯಲ್ಲಿ ಪೈಲೆಟ್​ ವಿಮಾನವನ್ನು ಲ್ಯಾಂಡ್​ ಮಾಡಿಸಿದ ವಿಡಿಯೊವನ್ನು ರೆಡ್​ ಬುಲ್ ಮೋಟರ್​ಸ್ಪೋರ್ಟ್ಸ್​ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ಶೇರ್​ ಮಾಡಿಕೊಂಡಿದೆ. ಮೈ ಜುಂ ಎನ್ನಿಸುವ ವಿಡಿಯೋ ಇಲ್ಲಿದೆ ನೋಡಿ…

Related post

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ ಸುತ್ತ ಭದ್ರತೆ ಹೆಚ್ಚಿಸಿದ ಮುಂಬೈ ಪೊಲೀಸರು

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ…

ನ್ಯೂಸ್‌ ಆ್ಯರೋ : ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಇದೀಗ ಜೀವ ಬೆದರಿಕೆಯೊಡ್ಡಿ ಇ ಮೇಲ್‌ ಬಂದ ಹಿನ್ನೆಲೆಯಲ್ಲಿ ಮನೆಯ ಸುತ್ತಲೂ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಕಳೆದ ವರ್ಷ…
ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ ಉದ್ಘಾಟಿಸಿ ಪೋಷಕರಿಗೆ ಕಿವಿಮಾತು ಹೇಳಿದ್ದೇನು?

ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ…

ನ್ಯೂಸ್‌ ಆ್ಯರೋ : ಸರ್ಕಾರಿ ಶಾಲೆ ಉಳಿವಿಗಾಗಿ ಮಕ್ಕಳು, ಗ್ರಾಮಸ್ಥರು ಹೋರಾಡುವ ಕಥೆಯನ್ನು ಸಿನಿಮಾ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ನಾನು…
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ ಸಾಧ್ಯತೆ, ಪಕ್ಷಗಳಲ್ಲಿ ಚಟುವಟಿಕೆ ಬಿರುಸು

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ…

ನ್ಯೂಸ್‌ ಆ್ಯರೋ : ಕರ್ನಾಟಕ ವಿಧಾನಸಭೆಯ ಚುನಾವಣೆಗೆ ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗವು ಇದೇ ತಿಂಗಳ ಕೊನೆಯ ವಾರದಲ್ಲಿ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಮೇ…

Leave a Reply

Your email address will not be published. Required fields are marked *