
ಕಿರಿಕ್ ಕೀರ್ತಿ ದಾಂಪತ್ಯದಲ್ಲಿ ಬಿರುಕು ಹೇಗಾಯಿತು? ಇಬ್ಬರೂ ಫೋಟೊ ಡಿಲೀಟ್ ಮಾಡಿದ್ದು ಯಾಕೆ? – ಗಾಜಿನ ಮನೆಗೆ ಕಲ್ಲು ಹೊಡೆದವರು ಯಾರು? ವದಂತಿಗಳಿಗೆ ಉತ್ತರ ನೀಡಿದ ಕಿರಿಕ್ ಸ್ಟಾರ್..
- ಮನರಂಜನೆ
- March 17, 2023
- No Comment
- 2449
ನ್ಯೂಸ್ ಆ್ಯರೋ : ಬಿಗ್ ಬಾಸ್ ಸ್ಪರ್ಧಿ, ಕನ್ನಡಪರ ಹೋರಾಟಗಾರ ಕಿರಿಕ್ ಕೀರ್ತಿ ತನ್ನ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ‘ನಮ್ಮದು ಗಾಜಿನ ಮನೆ, ಯಾರೇ ಕಲ್ಲು ಹೊಡೆದರೂ ಪುಡಿಯಾಗುತ್ತದೆ’ ಎಂದು ತಮ್ಮ ಸಂಸಾರಕ್ಕೆ ಯಾರೂ ಹುಳಿ ಹಿಂಡಬೇಡಿ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.

ತನ್ನ ಹುಟ್ಟೂರು ಶಿವಮೊಗ್ಗದಲ್ಲಿರುವ ಕೀರ್ತಿ ಅವರು ಪತ್ನಿ ಜತೆಗಿನ ವಿರಸದ ಬಗ್ಗೆ ಮೌನ ಮುರಿದಿದ್ದಾರೆ. ‘ಜೀವನ ಅನ್ನೋದು ಒಂದು ಗ್ರಾಫ್ ರೀತಿ ಹಾರ್ಟ್ ಬೀಟ್ ತರ ಮೇಲೆ ಕೆಳಗೆ ಇರಬೇಕು. ಒಂದೇ ರೀತಿ ಇದ್ದರೆ ಆತ ಸತ್ತಿದ್ದಾನೆ ಎಂದೇ ಲೆಕ್ಕ. ಸದ್ಯಕ್ಕೆ ಸ್ವಲ್ಪ ಕೆಳಗಿದ್ದೆ ಈಗ ಮೇಲೆ ಬಂದಿರುವೆ, ಹಾಗಂತ ಉಸಿರು ಬಿಟ್ಟಿಲ್ಲ.
ಜೀವನ ಅಂದ ಮೇಲೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಬದುಕು ಇರುತ್ತದೆ. ಕೆಲವರು ತೆರೆ ಮೇಲೆ ಏನು ನೋಡುತ್ತಾರೆ ಅದೇ ನಿಜ ಅಂದುಕೊಳ್ಳುತ್ತಾರೆ. ಆದರೆ, ಸ್ಕ್ರೀನ್ ಮೇಲೆ ಇರುವ ವ್ಯಕ್ತಿಗಳಿಗೂ ವೈಯಕ್ತಿಕ ಬದುಕು ಇರುತ್ತೆ ಅನ್ನೋದು ಬಹುತೇಕ ಮಂದಿ ಮರೆತಿರುತ್ತಾರೆ. ಕೆಲವೊಂದು ಸಲ ಭಾವನೆಗಳನ್ನು ಹೊರ ಹಾಕಬೇಕು ಅದನ್ನು ಹೊರ ಹಾಕಿದ್ದೀವಿ. ನನಗೆ ಸಿಗದಷ್ಟು ಕ್ಲಾರಿಟಿ ಕೆಲವರಿಗೆ ತುಂಬಾ ಸಿಕ್ಕಿದೆ’ ಎಂದು ಯೂಟ್ಯೂಬ್ ವೆಬ್‌ಸೈಟ್‌ನಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

‘ಜೀವನ ಅಂದ ಮೇಲೆ ಬೇರೆ ಬೇರೆ ಪಾತ್ರಗಳು ಬಂದು ಹೋಗುತ್ತವೆ. ಬಿಗ್ ಬಾಸ್ ರಿಯಾಲಿಟಿ ಮನೆಯಲ್ಲಿ 18 ಪಾತ್ರಗಳನ್ನು ನೋಡಿದ್ದೇನೆ. ಅದೇ ರೀತಿ ರಿಯಲ್ ಲೈಫ್‌ನಲ್ಲೂ ಪಾತ್ರಗಳು ಇರುತ್ತವೆ. ಅದರಲ್ಲಿ ದ್ರೋಹ ಮಾಡುವವರು ಇರುತ್ತಾರೆ, ಅನ್ಯಾಯ ಮಾಡುವವರು ಇರುತ್ತಾರೆ, ಕೆಟ್ಟದನ್ನು ಮಾಡಬೇಕು ಅನ್ನೋರು ಇರುತ್ತಾರೆ. ಹಾಗೇ ಒಳ್ಳೆಯದನ್ನು ಬಯಸುವವರು ಇರುತ್ತಾರೆ. ಕೆಲವು ಪಾತ್ರಗಳ ಜೊತೆ ಹೊಂದಿಕೊಂಡಿರುತ್ತೀವಿ. ಅವರೇ ನೋವು ಮಾಡಿದಾಗ ತುಂಬಾ ಡಿಸ್ಟರ್ಬ್ ಆಗುತ್ತೆ’ ಎಂದಿದ್ದಾರೆ.
‘ಗೊತ್ತಿಲ್ಲದವರು ಕಾಮೆಂಟ್ ಮಾಡಿದಾಗ ಬೇಸರ ಆಗಲ್ಲ. ಆದರೆ, ಎಲ್ಲಾ ಗೊತ್ತಿದ್ದವರು ಮಾತನಾಡಿದರೆ ನೋವಾಗುತ್ತದೆ. ಯಾರದ್ದೋ ತಪ್ಪುಗಳನ್ನು ಮುಚ್ಚಿಕೊಳ್ಳಲು ಹೋದಾಗ ಇನ್ನೊಬ್ಬರದ್ದು ತಪ್ಪು ಎಂದು ಬಿಂಬಿಸುವುದು ಸರಿ ಅಲ್ಲ. ಸಾಕಷ್ಟು ಸಲ ಒಳ್ಳೆತನ ಮನುಷ್ಯನಿಗೆ ಶಾಪವಾಗುತ್ತದೆ ಅದಕ್ಕೆ ನಾನೇ ಉತ್ತಮ ಉದಾಹರಣೆ’ಎಂದು ಕೀರ್ತಿ ಹೇಳಿದ್ದಾರೆ.
‘ಜನರಿಗೆ ಹೇಳುವುದು ಇಷ್ಟೆ… ನನ್ನ ಯಾವುದೋ ಸುದ್ದಿಯನ್ನು ಅಥವಾ ಪೋಸ್ಟ್‌ನ ನೋಡಿಕೊಂಡು ನನ್ನ ಜೀವನ ಹೀಗಿದೆ ಎಂದು ತೀರ್ಮಾನಕ್ಕೆ ಬರಬೇಡಿ. ನಿಮಗೆ ಐಡಿಯಾನೇ ಇಲ್ಲ, ನನ್ನ ಲೈಫ್‌ನಲ್ಲಿ ಏನಾಗುತ್ತಿದೆ ಎಂದು. ನನ್ನ ಜೀವನದಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗಳು ಮತ್ತೊಬ್ಬರ ಜೀವನದಲ್ಲಿ ನಡೆದಿದ್ದರೆ ಇಷ್ಟು ಹೊತ್ತಿಗೆ ಸ್ಮಶಾನದಲ್ಲಿ ಇರುತ್ತಿದ್ದೆ ಅಥವಾ ಜೈಲಿನಲ್ಲಿ ಇರುತ್ತಿದ್ದೆ. ನನ್ನ ಲೈಫ್‌ನಲ್ಲಿ ಎರಡೂ ಆಗಿಲ್ಲ ಅಂದ್ರೆ ನಾನು ಸರಿಯಾದ ನಿರ್ಧಾರ ತೆಗೆದುಕೊಂಡಿರುವೆ ಎಂದು ಅರ್ಥ. ಕಾಮೆಂಟ್ಸ್‌ನ ಆಫ್ ಮಾಡಲು ಕಾರಣ ಏನೂ ಇಲ್ಲ. ನನ್ನ ಪಕ್ಕದಲ್ಲಿರುವ ವ್ಯಕ್ತಿಗೂ ನನಗೆ ಆಗುತ್ತಿರುವ ನೋವು ಏನೆಂದು ಗೊತ್ತಿಲ್ಲ ಅವರಿಗೆ ಗೊತ್ತಾಗಲು ನಾನು ಬಿಡುವುದಿಲ್ಲ’ ಎಂದು ಹೇಳಿದ್ದಾರೆ ಕೀರ್ತಿ.
‘ಅರ್ಪಿತಾ ಮಾತ್ರ ನನ್ನ ಫೋಟೊ ಡಿಲೀಟ್ ಮಾಡಿಲ್ಲ, ನಾನು ಕೂಡ ಅವಳ ಫೋಟೊ ಡಿಲೀಟ್ ಮಾಡಿದ್ದೀನಿ. ಏನಾಗಿದೆ ಎಂದು ಜಗತ್ತಿಗೆ ಗೊತ್ತಿಲ್ಲ. ಅದು ಆಕೆಗೂ ಗೊತ್ತು, ನನಗೆ ಗೊತ್ತು ಅಷ್ಟೇ ಸಾಕು. ನಮ್ಮದು ಕಲ್ಲಿನ ಕೋಟೆ ಅಲ್ಲ, ಗಾಜಿನ ಮನೆ. ನಾವು ಕಲ್ಲು ಹೊಡೆದರೂ ಪುಡಿಯಾಗುತ್ತದೆ, ಹೊರಗಿನಿಂದ ಮತ್ತೊಬ್ಬರು ಕಲ್ಲು ಹೊಡೆದರೂ ಪುಡಿಯಾಗುತ್ತದೆ. ನಾವು ದೊಡ್ಡ ಸೆಲೆಬ್ರಿಟಿ ಆಗಬೇಕು ಇಲ್ಲ, ಕಾಮನ್ ವ್ಯಕ್ತಿ ಆಗಿರಬೇಕು. ಈ ನಡುವೆ ಪಾಫ್ಯೂಲಾರಿಟಿ ಇರುವವರು ಆಗಬಾರದು’ ಎಂದು ಕೀರ್ತಿ ಬೇಸರ ಹೊರಹಾಕಿದ್ದಾರೆ.