ಅಬ್ಬ! ಈತ ಲಿಫ್ಟ್ ಕೇಳಿಯೇ ಸಂಚರಿಸಿದ್ದು ಬರೋಬ್ಬರಿ 20 ಸಾವಿರ ಕಿ.ಮೀ.! – ಯಾರಿದು ಸಾಹಸಿ? ಎಲ್ಲಿ ಎಲ್ಲಾ ಸುತ್ತಾಡಿದ್ದ ಗೊತ್ತಾ?

ಅಬ್ಬ! ಈತ ಲಿಫ್ಟ್ ಕೇಳಿಯೇ ಸಂಚರಿಸಿದ್ದು ಬರೋಬ್ಬರಿ 20 ಸಾವಿರ ಕಿ.ಮೀ.! – ಯಾರಿದು ಸಾಹಸಿ? ಎಲ್ಲಿ ಎಲ್ಲಾ ಸುತ್ತಾಡಿದ್ದ ಗೊತ್ತಾ?

ನ್ಯೂಸ್ ಆ್ಯರೋ‌ : ನಾವು ಎಲ್ಲಿಗಾದರೂ ನಡೆದುಕೊಂಡು ಹೋಗುವಾಗ ಅಥವಾ ಬಸ್ ಸಿಗದಿದ್ದರೆ ಯಾವುದಾದರೂ ವಾಹನದಲ್ಲಿ ಲಿಫ್ಟ್ ಕೇಳುತ್ತೇವೆ. ಆದರೆ ಇಲ್ಲೊಬ್ಬ ಇಂತಹ ಲಿಫ್ಟ್ ನಿಂದಲೇ ಪ್ರವಾಸ ಮಾಡಿದ್ದಾನೆ. ಬರೋಬ್ಬರಿ 20 ಸಾವಿರ ಕಿ.ಮೀ.ಯನ್ನು ಕೇವಲ ಲಿಫ್ಟ್ ನಿಂದಲೇ ಪಯಣಿಸಿದ್ದಾನೆ ಎಂದರೆ ನೀವು ನಂಬಲೇ ಬೇಕು.

ಯಾರು ಈ ಸಾಹಸಿ?

ಫ್ರಾನ್ಸ್ ಮೂಲದ 23ರ ಹರೆಯದ ಲುಕಾಸ್ ವೆನ್ನಾರ್ ಇಂತಹ ಸಾಹಸ ಕೈಗೊಂಡ ಯುವಕ. ಫೆಬ್ರವರಿ 4ರಂದು ಫ್ರಾನ್ಸ್ ನಿಂದ ಪ್ರಯಾಣ ಆರಂಭಿಸಿದ ಲುಕಾಸ್ ಎಲ್ಲಿಯೂ ಟಿಕೆಟ್ ಖರೀದಿಸಿಲ್ಲವಂತೆ. ಇತ್ತೀಚೆಗೆ ಅವರು ಮೈಸೂರಿಗೂ ಭೇಟಿ ನೀಡಿದ್ದ.

ಹಡಗು, ಕಾರು, ಬೈಕ್, ಸ್ಕೂಟರ್, ಟ್ರಕ್ ಹೀಗೆ ನಾನಾ ವಾಹನಗಳ ಮೂಲಕ ಲುಕಾಸ್ ಪ್ರವಾಸ ಸಾಗಿದೆ. ಆಫ್ರಿಕಾ, ಚೀನಾ, ಟಿಬೇಟ್, ಖಜಕಿಸ್ತಾನ, ಅಘ್ಫಾನಿಸ್ತಾನ, ಬಾಂಗ್ಲಾದೇಶ, ಭಾರತ ಸೇರಿ ಈಗಾಗಲೇ 14 ದೇಶಗಳಲ್ಲಿ ಸಂಚರಿಸಿದ್ದಾನೆ. ಇತ್ತೀಚೆಗೆ ಮೈಸೂರು ಅರಮನೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ.

ಇದೀಗ ಭಾರತ ಪ್ರವಾಸ ಮುಗಿಸಿರುವ ಲುಕಾಸ್ ಮುಂದಿನ ಗುರಿ ಶ್ರೀಲಂಕಾ. ಸ್ವಿಟ್ಜರ್ ಲ್ಯಾಂಡ್ ತನಕ ಲಿಫ್ಟ್ ಮೂಲಕವೇ ಸಂಚರಿಸಬೇಕೆಂಬ ಗುರಿ ಹೊಂದಿದ್ದಾನೆ.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *