
ಕೀಟನಾಶಕ ಬಾಟಲ್ ಮೇಲಿರುವ ವಿವಿಧ ಬಣ್ಣಗಳ ಅರ್ಥವೇನು? – ಶೇ.90 ಜನರಿಗೆ ಈ ಮಾಹಿತಿ ಗೊತ್ತೇ ಇಲ್ಲ..!
- ಕೌತುಕ-ವಿಜ್ಞಾನ
- October 17, 2023
- No Comment
- 506
ನ್ಯೂಸ್ ಆ್ಯರೋ : ತಾವು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಬೇಕಾದರೆ ರೈತರು ಕೀಟನಾಶಕಗಳನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಿದೆ. ಬಳಸುವಂತಹ ಕೀಟನಾಶಕಗಳ ಬಾಟಲ್ ಒಂದೊಂದು ಬಣ್ಣದಲ್ಲಿರುತ್ತದೆ. ಈ ಬಣ್ಣದ ಲೇಬಲ್ ಯಾವ ಸಂದೇಶವನ್ನು ನೀಡುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.
ಪೀಡೆನಾಶಕಗಳ ಅಸಮರ್ಪಕ, ಅವೈಜ್ಞಾನಿಕ ಹಾಗೂ ಯಥೇಚ್ಛ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳು ಹಲವು. ಇಂಥಹ ಪೀಡೆನಾಶಕಗಳ ವಿಷದ ಪ್ರಮಾಣ ತಿಳಿಸಲು ಬಣ್ಣ ಬಣ್ಣದ ಲೇಬಲ್ ಗಳನ್ನು ಕೀಟನಾಶಕಗಳ ಬಾಟಲ್ ಗಳ ಮೇಲೆ ಮುದ್ರಿಸಲಾಗಿರುತ್ತದೆ.
ಹೀಗೆ ಕೀಟನಾಶಕ ಬಾಟಲ್ ಗಳ ಮೇಲೆ ಮುದ್ರಿಸಿರುವಂತ ಬಣ್ಣಗಳು ಆಯಾ ಕೀಟನಾಶಕಗಳ ಸಂಭಾವ್ಯ ಅಪಾಯ ಸೂಚಕದ ಸಂಕೇತವಾಗಿವೆ. ರೈತರು ಇದನ್ನು ನೋಡಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಬೇಕೆಂಬುದು ಇದರ ಸೂಚನೆ.

ಕೆಂಪು ಲೇಬಲ್:
ಈ ಬಣ್ಣವನ್ನು ನೀವು ಕೀಟನಾಶಕ ಬಾಟಲ್ ಮೇಲೆ ಕಂಡ್ರೇ, ಆ ರಾಸಾಯನಿಕಗಳು ಅತ್ಯಂತ ವಿಷಕಾರಿಯಾಗಿದ್ದು, ಗರಿಷ್ಠ ಎಚ್ಚರಿಕೆಯಿಂದ ಬಳಸಬೇಕೆಂಬುದು ರೈತರಿಗೆ ಸೂಚಿಸಲಾಗಿದೆ.
ಹಳದಿ ಲೇಬಲ್:
ಕೀಟನಾಶಕ ವಿಷತ್ವ ಲೇಬಲ್ ಗಳ ಪಟ್ಟಿಯಲ್ಲಿ ಇದು ಎರಡನೇಯದು. ಇದು ಕೂಡ ಹೆಚ್ಚು ಅಪಾಯ ಸೂಚಕವಾದಂತ ರಾಸಾಯನಕವಾಗಿದೆ.
ನೀಲಿ ಲೇಬಲ್:
ಕೀಟನಾಶಕ ವಿಷತ್ವದ ಪ್ರಮಾಣದಲ್ಲಿ ಇದು 3ನೇಯದು. ಇದು ಸಾಧಾರಣ ವಿಷ ಪ್ರಮಾಣ ಸೂಚಿಸುತ್ತದೆ.
ಹಸಿರು ಲೇಬಲ್ :
ಈ ಬಣ್ಣದ ಲೇಬಲ್ ಇರುವ ಬಾಟಲಿಯ ರಾಸಾಯನಿಕಗಳು ಕಡಿಮೆಯಿಂದ ಮಧ್ಯಮ ವಿಷತ್ವ ಹೊಂದಿರುತ್ತವೆ
ಹೀಗೇ ವಿವಿಧ ಬಣ್ಣದ ಲೇಬಲ್ ಅಪಾಯ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಸೂಚಿಸುತ್ತದೆ.