Samudrayaan Mission : ಚಂದ್ರ, ಸೂರ್ಯನ ಬಳಿಕ ಭಾರತದ ಚಿತ್ತ ಸಮುದ್ರದತ್ತ – ಅಮೂಲ್ಯ ಲೋಹ, ಖನಿಜಗಳಿಗಾಗಿ ಕಡಲಾಳದಲ್ಲಿ ಹುಡುಕಾಟ ನಡೆಸಲು ಸಿದ್ದತೆ..!

Samudrayaan Mission : ಚಂದ್ರ, ಸೂರ್ಯನ ಬಳಿಕ ಭಾರತದ ಚಿತ್ತ ಸಮುದ್ರದತ್ತ – ಅಮೂಲ್ಯ ಲೋಹ, ಖನಿಜಗಳಿಗಾಗಿ ಕಡಲಾಳದಲ್ಲಿ ಹುಡುಕಾಟ ನಡೆಸಲು ಸಿದ್ದತೆ..!

ನ್ಯೂಸ್ ಆ್ಯರೋ‌ : ಭಾರತದ ಚಂದ್ರಯಾನ-3 ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಇಸ್ರೋ ಸೂರ್ಯನ ಅಧ್ಯಯನ ನಡೆಸಲು ನೌಕೆಯನ್ನು ಕಳುಹಿಸಿದೆ. ಇತ್ತ ಭಾರತೀಯ ವಿಜ್ಞಾನಿಗಳು ಸಮುದ್ರದ ಅಡಿಯಲ್ಲಿ ಲೋಹ, ಖನಿಜ ಹುಡುಕಾಟಕ್ಕೆ ಮುಂದಾಗಿದ್ದಾರೆ.

ಏನಿದು ಯೋಜನೆ?

ಸಮುದ್ರಯಾನ ಯೋಜನೆಯಡಿ ಅಮೂಲ್ಯ ಲೋಹ, ಖನಿಜಗಳ ಹುಡುಕಾಟ ನಡೆಯಲಿದೆ. ಸ್ಥಳೀಯವಾಗಿ ತಯಾರಿಸಿದ ಸಬ್ ಮರ್ಸಿಬಲ್ ನಲ್ಲಿ ಮೂರು ಜನರನ್ನು 6,000 ಮೀಟರ್ ನೀರಿನ ಅಡಿಗೆ ಕಳುಹಿಸಿ ಕೋಬಾಲ್ಟ್, ನಿಕಲ್ ಮತ್ತು ಮ್ಯಾಂಗನೀಸ್ ಮುಂತಾದ ಖನಿಜಗಳನ್ನು ಅನ್ವೇಷಿಸಲು ತಯಾರಿ ನಡೆಸಲಾಗುತ್ತಿದೆ.

ಸುಮಾರು ಎರಡು ವರ್ಷಗಳ ಕಾಲ ತಯಾರಾದ ಮತ್ಸ್ಯ 6000 ಸಬ್ ಮರ್ಸಿಬಲ್ 2024ರ ಆರಂಭದಲ್ಲಿ ಚೆನ್ನೈ ಕರಾವಳಿಯ ಬಂಗಾಳಕೊಲ್ಲಿಯಲ್ಲಿ ಸಮುದ್ರದ ಆಳಕ್ಕೆ ಇಳಿಯಲಿದೆ.

ನ್ಯಾಶನಲ್ ಇಸ್ಟಿಟ್ಯೂಟ್ ಆಫ್ ಓಶನ್ ಟೆಕ್ನಾಲಜಿ(NIOT)ಯ ವಿಜ್ಞಾನಿಗಳು ಮತ್ಸ್ಯ 6000 ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ವಿನ್ಯಾಸ, ಸಾಮಗ್ರಿ, ಕಾರ್ಯವಿಧಾನಗಳನ್ನು ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ. ಡೀಪ್ ಓಶನ್ ಮಿಷನ್ ನ ಭಾಗವಾಗಿ ಸಮುದ್ರಯಾನ ಮಿಷನ್ ನಡೆಯುತ್ತಿದೆ. ನಾವು 2024ರ ಮೊದಲ ತ್ರೈ ಮಾಸಿಕದಲ್ಲಿ 500 ಮೀಟರ್ ಆಳದ ಸಮುದ್ರದಲ್ಲಿ ಪ್ರಯೋಗ ನಡೆಸುತ್ತೇವೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರವಿಚಂದ್ರನ್ ಹೇಳಿದ್ದಾರೆ.

ಮಿಷನ್ 2026ರ ವೇಳೆಗೆ ಸಾಕಾರಗೊಳ್ಳುವ ನಿರೀಕ್ಷೆ ಇದೆ. ಇದುವರೆಗೆ ಅಮೆರಿಕ, ರಷ್ಯಾ, ಜಪಾನ್, ಫ್ರಾನ್ಸ್ ಮತ್ತು ಚೀನಾ ಮಾತ್ರ ಮಾನವ ಸಹಿತ ಸಬ್ ಮರ್ಸಿಬಲ್ ಅಭಿವೃದ್ಧಿ ಪಡಿಸಿವೆ.

ಮತ್ಸ್ಯ 6000ಕ್ಕಾಗಿ 2.1 ಮೀ. ವ್ಯಾಸದ ಗೋಳವನ್ನು ವಿನ್ಯಾಸಗೊಳಿಸಲಾಗಿದ್ದು, ಮೂವರನ್ನು ಹೊತ್ತೊಯ್ಯುವ ಶಕ್ತಿ ಹೊಂದಿದೆ. ವಾಹನ 12ರಿಂದ 16 ಗಂಟೆಗಳ ಕಾಲ ಕಾರ್ಯ ನಿರ್ವಹಿಸಬಹುದು. ಜೊತೆಗೆ 96 ಗಂಟೆಗಳ ಕಾಲ ಆಮ್ಲಜನಕ ಲಭ್ಯವಿರಲಿದೆ ಎಂದು ತಿಳಿದು ಬಂದಿದೆ.

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *