ಸಮಸ್ತ ಆರೋಗ್ಯ ಸಮಸ್ಯೆಗಳಿಗೆ ಪ್ರಕೃತಿ ಚಿಕಿತ್ಸೆಯಲ್ಲಿದೆ ಪರಿಹಾರ – ಔಷಧಿಯಿಲ್ಲದೆ ಪ್ರಕೃತಿಯಿಂದಲೇ ಕಾಯಿಲೆ ಗುಣಮುಖ ಹೇಗೆ ಸಾಧ್ಯ?

ಸಮಸ್ತ ಆರೋಗ್ಯ ಸಮಸ್ಯೆಗಳಿಗೆ ಪ್ರಕೃತಿ ಚಿಕಿತ್ಸೆಯಲ್ಲಿದೆ ಪರಿಹಾರ – ಔಷಧಿಯಿಲ್ಲದೆ ಪ್ರಕೃತಿಯಿಂದಲೇ ಕಾಯಿಲೆ ಗುಣಮುಖ ಹೇಗೆ ಸಾಧ್ಯ?

ನ್ಯೂಸ್‌ ಆ್ಯರೋ : ನಮ್ಮ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಂಡು ಉತ್ತಮ ಜೀವನ ನಡೆಸಲು ಅಲೋಪತಿ, ಆಯುರ್ವೇದ, ಹೋಮಿಯೋಪಥಿ, ಸಿದ್ಧ, ಯುನಾನಿ ಹೀಗೆ ಹಲವಾರು ವೈದ್ಯಕೀಯ ಮತ್ತು ಚಿಕಿತ್ಸಾ ಪದ್ಧತಿಗಳಿವೆ. ಇವುಗಳಂತೆ ಮತ್ತೊಂದು ಚಿಕಿತ್ಸಾ ಪದ್ಧತಿಯೇ ‘ಪ್ರಕೃತಿ ಚಿಕಿತ್ಸೆ’ ಅಥವಾ ನ್ಯಾಚುರೋಪಥಿ. ಇಂದು ಜಾಗತಿಕ ವೈಜ್ಞಾನಿಕ ಮತ್ತು ವೈದ್ಯಕೀಯ ಸಮುದಾಯವು ಪ್ರಕೃತಿ ಚಿಕಿತ್ಸೆಯನ್ನು ಅಂಗೀಕರಿಸಿದ್ದು, ಜನಪ್ರಿಯಗೊಂಡಿದೆ.

ಪ್ರಕೃತಿಯು ರೋಗವನ್ನು ಗುಣಪಡಿಸುತ್ತದೆ, ಔಷಧಿಗಳಲ್ಲ ಎಂಬುದು ಪ್ರಕೃತಿ ಚಿಕಿತ್ಸೆಯ ಮೂಲತತ್ವ. ಇದರಲ್ಲಿ ಯಾವುದೇ ರಾಸಾಯನಿಕಯುಕ್ತ ಔಷಧಿಗಳನ್ನು ಬಳಸುವುದಿಲ್ಲ. ಬದಲಾಗಿ ಈ ವಿಶಿಷ್ಟ ಚಿಕಿತ್ಸಾ ವಿಧಾನವು ದೇಹವನ್ನು ಒಳಗಿನಿಂದ ಬಲಪಡಿಸುವುದು, ರೋಗನಿರೋಧಕ ಶಕ್ತಿ ಹೆಚ್ಚಿಸುವುದು, ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳುವ ಮೂಲಕ ದೇಹವನ್ನು ರೋಗಗಳಿಂದ ದೂರ ಇಡಲು ಸಾಧ್ಯವಾಗುವ ಉತ್ತಮ, ಸುರಕ್ಷಿತ ಹಾಗೂ ನೈಸರ್ಗಿಕ ಚಿಕಿತ್ಸಾ ವಿಧಾನವಾಗಿದೆ. ಪ್ರಸ್ತುತ ದಿನಗಳಲ್ಲಿ ಸಾಂಪ್ರದಾಯಿಕ ಔಷಧ ಅಥವಾ ಶಸಚಿಕಿತ್ಸೆಗೆ ಬದಲಾಗಿ ಹೆಚ್ಚಿನ ಸಂಖ್ಯೆಯ ರೋಗಿಗಳು ಪ್ರಕೃತಿ ಚಿಕಿತ್ಸೆ ಕಡೆಗೆ ಮುಖ ಮಾಡುತ್ತಿದ್ದಾರೆ.

ಪ್ರಕೃತಿ ಚಿಕಿತ್ಸೆಯು ಸಹಜವಾಗಿ ಆಗುವ ಹಾಗೂ ಮನುಷ್ಯರ ಅತ್ಯಲ್ಪ ಹಸ್ತಕ್ಷೇಪ ಅನುಸರಿಸುತ್ತದೆ. ನೈಸರ್ಗಿಕವಾಗಿ ಗುಣ ಹೊಂದುವ ಶಕ್ತಿಯ ಮೇಲೆ ನಂಬಿಕೆ ಹೊಂದಿದ್ದು, ಕೃತಕ ಔಷಧಗಳು, ವಿಕಿರಣ ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳನ್ನು ಒಪ್ಪದೆ, ಜೈವಿಕ ಔಷಧ ಮತ್ತು ಆಧುನಿಕ ವೈಜ್ಞಾನಿಕ ಕ್ರಮಗಳನ್ನು ತಿರಸ್ಕರಿಸುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳುವುದು, ಆರೋಗ್ಯಕರ ಆಹಾರ ಸೇವನೆ ಮತ್ತು ಕ್ರಮಬದ್ಧವಾದ ಜೀವನ ಪದ್ಧತಿಯಿಂದ ರೋಗಗಳ ನಿಯಂತ್ರಣಕ್ಕೆ ಹೆಚ್ಚು ಒತ್ತು ನೀಡುತ್ತದೆ.

ಪ್ರಕೃತಿ ಚಿಕಿತ್ಸೆಯ ಸಿದ್ಧಾಂತದ ಪ್ರಕಾರ ಕಾಯಿಲೆಯ ಮೂಲ – ಕ್ರಿಮಿಗಳಲ್ಲ; ಕ್ರಿಮಿಗಳನ್ನು ಬೆಳೆಸುವಂತಹ ಕಶ್ಮಲಗಳು ದೇಹದಲ್ಲಿ ಸಂಗ್ರಹಣೆಗೊಂಡಾಗ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿ ದೇಹಕ್ಕೆ ಪ್ರವೇಶಿಸಿದ ಕ್ರಿಮಿಗಳ ಸಂಖ್ಯೆ ಯಥೇಚ್ಛವಾಗಿ ಬೆಳೆದು ಕಾಯಿಲೆಗೆ ಕಾರಣವಾಗುತ್ತವೆ. ಆದ್ದರಿಂದ ಪ್ರಾಕೃತಿಕ ಮತ್ತು ಸಂಪ್ರದಾಯಬದ್ಧ ಜೀವನಶೈಲಿಯನ್ನು ಅಳವಡಿಸಿಕೊಂಡು ದೇಹದಲ್ಲಿನ ಕಶ್ಮಲಗಳನ್ನು ವಿಸರ್ಜನಾಂಗಗಳ ಮೂಲಕ ಹೊರಹಾಕಿ ಶುಭ್ರ ಪಡಿಸಿಕೊಂಡು ರೋಗನಿರೋಧಕ ಶಕ್ತಿಯನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದರಿಂದ ಎಲ್ಲಾ ವೈರಾಣುಗಳು, ಬ್ಯಾಕ್ಟೀರಿಯಾ ಇತರೆ ರೋಗಕಾರಕ ಕ್ರಿಮಿಗಳಿಂದ ದೂರವಿರಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಈ ವೈರಾಣು, ಬ್ಯಾಕ್ಟೀರಿಯಾ, ಕ್ರಿಮಿಗಳು ದೇಹವನ್ನು ಪ್ರವೇಶಿಸಿದರೂ ದೇಹಾರೋಗ್ಯ ಸರಿಯಾಗಿರುತ್ತದೆ.

ಚಿಕಿತ್ಸಾ ಪದ್ಧತಿಗಳು:
ಪ್ರಕೃತಿ ಚಿಕಿತ್ಸೆಯಲ್ಲಿ ಮಣ್ಣಿನ ಚಿಕಿತ್ಸೆ, ವಾಯು ಚಿಕಿತ್ಸೆ, ಜಲ ಚಿಕಿತ್ಸೆ, ಮ್ಯಾಗ್ನೆಟ್ ಥೆರಪಿ, ವರ್ಣ ಚಿಕಿತ್ಸೆ, ಅಕ್ಯುಪಂಕ್ಚರ್, ಆಕ್ಯುಪ್ರೆಶರ್, ಎಲೆಕ್ಟ್ರೊಥೆರಪಿ, ಫಿಜಿಯೋಥೆರಪಿ, ಸೇರಿ ಹಲವು ಬಗೆಯ ಚಿಕಿತ್ಸೆಗಳಿವೆ. ಯೋಗ, ಉಪವಾಸ ಮತ್ತು ಪಥ್ಯವೂ ಸೇರಿದೆ. ಉಪವಾಸ ಪ್ರಕೃತಿ ಚಿಕಿತ್ಸೆಯ ಅವಿಭಾಜ್ಯ ಅಂಗ. ಇದರಲ್ಲಿ ಹಲವು ವಿಧಗಳಿವೆ. ದಿನಪೂರ್ತಿ ಯಾವುದೇ ಆಹಾರ ಸೇವಿಸದೆ ನೀರು ಕುಡಿದು ಉಪವಾಸ ಮಾಡುವುದು. ಇದರ ಹೊರತಾಗಿ ಉಪವಾಸ ಅಂತ್ಯಗೊಳಿಸುವಾಗ ಹಣ್ಣಿನ ರಸ, ಎಳನೀರು ಸೇವಿಸುವುದು ಒಂದಾದರೆ, ಮತ್ತೊಂದು ವಿಧಾನದಲ್ಲಿ ಕೇವಲ ಹಣ್ಣುಗಳು, ಹಸಿ ತರಕಾರಿ, ಮೊಳಕೆ ಕಾಳುಗಳ ಸೇವನೆ ಮಾಡಿಯೂ ಉಪವಾಸ ಅಂತ್ಯಗೊಳಿಸಬಹುದು. ಈ ಅವಧಿಯಲ್ಲಿ ಬೇಯಿಸಿದ ಆಹಾರ ಸೇವಿಸುವಂತಿಲ್ಲ. ಇನ್ನು ಪ್ರಕೃತಿ ಚಿಕಿತ್ಸೆಯಲ್ಲಿ ಮೊಟ್ಟೆ ಹಾಗೂ ಮಾಂಸಾಹಾರ ನಿಷಿದ್ಧ.

ಸಿದ್ಧಾಂತಗಳು:
ಪ್ರಕೃತಿ ಚಿಕಿತ್ಸೆಯು ಆರು ಪ್ರಮುಖ ಸಿದ್ಧಾಂತಗಳನ್ನು ಹೊಂದಿದೆ.

 • ಯಾವುದೇ ಹಾನಿ ಉಂಟು ಮಾಡದೆ, ಕಡಿಮೆ ಅಪಾಯ ಹಾಗೂ ಅತ್ಯಂತ ಪರಿಣಾಮಕಾರಿ ಚಿಕಿತ್ಸಾ ಕ್ರಮ ಅಳವಡಿಕೆ.
 • ಪ್ರತಿ ಮನುಷ್ಯನಲ್ಲಿ ಸ್ವಾಭಾವಿಕವಾಗಿ ಇರುವ ಸ್ವಯಂ ವಾಸಿ ಮಾಡಿಕೊಳ್ಳುವ ರೋಗ ನಿರೋಧಕ ಶಕ್ತಿ ಗುರುತಿಸಿ ಅದನ್ನು ಹೆಚ್ಚು ಮಾಡುವುದು.
 • ರೋಗ ಲಕ್ಷಣಗಳನ್ನು ಮಾತ್ರ ಗುಣಪಡಿಸದೆ, ಅದರ ಹಿಂದಿರುವ ಕಾರಣಗಳನ್ನು ಪತ್ತೆ ಮಾಡಿ ಸಂಪೂರ್ಣ ನಿವಾರಿಸುವ ಪ್ರಯತ್ನ ಮಾಡುವುದು.
 • ರೋಗಿಗಳಿಗೆ ಜ್ಞಾನ, ತಾರ್ಕಿಕ ಭರವಸೆ, ಸ್ಫೂರ್ತಿ ನೀಡಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವುದು.
 • ಪ್ರತಿ ವ್ಯಕ್ತಿಯ ಆರೋಗ್ಯ ಲಕ್ಷಣಗಳು ಹಾಗೂ ಪ್ರಭಾವಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆಗೆ ಒಳಪಡಿಸುವುದು
 • ಪ್ರತಿಯೊಬ್ಬರ ಸೌಖ್ಯ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡುವ ಮೂಲಕ ಸಮುದಾಯದ ಹಂತದಲ್ಲಿ ರೋಗಗಳ ತಡೆಗಟ್ಟುವುದು.

ಚಿಕಿತ್ಸೆಯ ಪ್ರಮುಖ ವಿಚಾರ:

 • ಹಿತಮಿತ ಹಾಗೂ ತಾಜಾ ಆಹಾರ ಸೇವನೆ
 • ನಿತ್ಯ 2ರಿಂದ 3 ಲೀಟರ್​ ನೀರು ಕುಡಿಯುವುದು
 • ಆಯಾ ಋತುಮಾನಕ್ಕೆ ಅನುಗುಣವಾಗಿ ಸಿಗುವ ಹಣ್ಣುಗಳ ಸೇವನೆ
 • ಊಟದಲ್ಲಿ ಹೆಚ್ಚು ಸೊಪ್ಪು ಮತ್ತು ಹಸಿರು ತರಕಾರಿ ಬಳಕೆ
 • ಧೂಮಪಾನ, ಮದ್ಯಪಾನ ಸೇರಿ ದುಶ್ಚಟಗಳಿಂದ ದೂರ ಇರುವುದು
 • ನಿತ್ಯ ಯೋಗ ಅಥವಾ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳುವುದು
 • ಮನಸ್ಸು ಮತ್ತು ದೇಹಾರೋಗ್ಯಕ್ಕೆ ನಿತ್ಯ ಧ್ಯಾನ ಮಾಡುವುದು
 • ಆಗಾಗ್ಗೆ ಉಪವಾಸ ಮಾಡುವುದು
 • ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡುವುದು

ಸ್ವಚ್ಛತೆ ಬಹಳ ಮುಖ್ಯ:
ಕ್ರಮಬದ್ಧವಾದ ಜೀವನಶೈಲಿಯೇ ಪ್ರಕೃತಿ ಚಿಕಿತ್ಸೆಯ ಮೊದಲ ಕ್ರಮ. ಆರೋಗ್ಯಕರ ಆಹಾರ, ಶುದ್ಧ ನೀರು, ವ್ಯಾಯಾಮ, ಉಪವಾಸ, ಸೂರ್ಯನ ಬೆಳಕು ಮತ್ತು ಒತ್ತಡ ನಿರ್ವಹಣೆ ಪ್ರಕೃತಿ ಚಿಕಿತ್ಸೆಯ ಆಧಾರವಾಗಿವೆ. ಮಾನಸಿಕ, ದೈಹಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಮುಂತಾದ ಮಾನವ ದೇಹದ ಎಲ್ಲಾ ಅಂಶಗಳನ್ನು ಯಶಸ್ವಿಯಾಗಿ ಪರಿಗಣಿಸುತ್ತದೆ. ಇದರಲ್ಲಿ ಆಹಾರವೇ ಔಷಧ. ಜೊತೆಗೆ ವೈಯಕ್ತಿಕ ಸ್ವಚ್ಛತೆ ಬಹಳ ಮುಖ್ಯ. ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜುವುದು, ಮಲ ವಿಸರ್ಜನೆ, ಸ್ನಾನದ ಅಭ್ಯಾಸ ರೂಢಿಸಿಕೊಳ್ಳಬೇಕು.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *