ರಸ್ತೆ ಬದಿ ಸಿಗುವ ಕಬ್ಬಿನ ಹಾಲು ಕುಡಿಯುತ್ತೀರಾ? – ಗಂಭೀರ ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡ್ಬೋದು : ವಿವರ ಇಲ್ಲಿದೆ..

ರಸ್ತೆ ಬದಿ ಸಿಗುವ ಕಬ್ಬಿನ ಹಾಲು ಕುಡಿಯುತ್ತೀರಾ? – ಗಂಭೀರ ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡ್ಬೋದು : ವಿವರ ಇಲ್ಲಿದೆ..

ನ್ಯೂಸ್‌ ಆ್ಯರೋ : ಸುಡುವ ಬಿಸಿಲ ಧಗೆಗೆ ಕಬ್ಬಿನ ಹಾಲನ್ನು ಕುಡಿಯಲು ಎಲ್ಲರೂ ಇಷ್ಟಪಡುತ್ತಾರೆ. ಹೀಗಾಗಿ ಬಹುತೇಕರು ಟ್ರಾವೆಲ್ ಮಾಡುವಾಗ ದಾರಿ ಮಧ್ಯೆ ಅಲ್ಲಲ್ಲಿ ಕಾಣಸಿಗುವ ಜ್ಯೂಸ್‌ ಅನ್ನು ಕುಡಿದು ಹೊಟ್ಟೆ ತಣ್ಣಗೆ ಮಾಡುತ್ತಾರೆ. ಆದರೆ ದಾರಿ ಮಧ್ಯೆ ಸಿಗುವ ಕಬ್ಬಿನ ಹಾಲು ಕುಡೀಯೋದು ಅನಾರೋಗ್ಯವನ್ನು ಉಂಟುಮಾಡುವ ಸಾಧ್ಯತೆಗಳಿವೆ.

ಯಾಕೆಂದರೆ ರಸ್ತೆ ಬದಿಯಲ್ಲಿ ಇರುವ ಕಬ್ಬಿನ ಅಂಗಡಿಯಲ್ಲಿ ಒಬ್ಬ ವ್ಯಕ್ತಿ ವ್ಯಾಪಾರ ಮಾಡುತ್ತಾನೆ. ಅವನೇ ಯಂತ್ರಕ್ಕೆ ಕಬ್ಬು ಹಾಕಿ ಆನ್ ಮಾಡಿ, ಹಾಲನ್ನು ಲೋಟಕ್ಕೆ ಹಾಕಿ ಕೊಡುತ್ತಾನೆ. ಹೀಗೆ ಎಲ್ಲವನ್ನೂ ಮುಟ್ಟುವ ವ್ಯಕ್ತಿ ಕೈಗೆ ಗ್ಲೌಸ್ ಕೂಡಾ ಹಾಕುವುದಿಲ್ಲ. ಜ್ಯೂಸ್ ತಯಾರಿಸಿದ ಕೈಯಲ್ಲೇ ಅದನ್ನು ಸೇವನೆ ಮಾಡಲು ಕೊಡುತ್ತಾರೆ. ಅವರಿಂದ ಹಣ ಪಡೆದ ನಂತರ, ಮತ್ತೆ ಕೈಯಲ್ಲೇ ಬೇರೆಯವರಿಗೆ ಜ್ಯೂಸ್ ತೆಗೆಯುತ್ತಾರೆ. ಈ ಎಲ್ಲ ಹಂತದಲ್ಲಿ ಕೈಯನ್ನು ಶುಚಿಯಾಗಿ ಇಟ್ಟುಕೊಳ್ಳದೆ ಇರುವುದರಿಂದ ರೋಗಗಳು ಹರಡುವ ಸಾಧ್ಯತೆಗಳಿವೆ.

ಕಬ್ಬಿನ ಹಾಲನ್ನು ಮಾಡುವ ಯಂತ್ರಗಳನ್ನು ಆಗಾಗ ಸ್ವಚ್ಛ ಮಾಡುವುದಿಲ್ಲ. ಮಾತ್ರವಲ್ಲದೆ ಕಬ್ಬಿನ ಜ್ಯೂಸ್‌ಗೆ ಬಳಸುವ ನಿಂಬೆಹಣ್ಣು, ಶುಂಠಿ ಅಥವಾ ಪುದೀನಾವನ್ನು ತೊಳೆಯದೆ ನೇರವಾಗಿ ಅದನ್ನು ಜ್ಯೂಸ್‌ ಮಾಡುವ ಯಂತ್ರದೊಳಗೆ ಹಾಕುತ್ತಾರೆ.

ಇನ್ನೂ ಕೆಂಪಾದ ಕಬ್ಬಿನಿಂದ ಮಾಡಿದ ಕಬ್ಬಿನ ರಸವನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ. ಈ ರೀತಿಯ ಕಬ್ಬಿನ ಹಾಲನ್ನು ಸೇವನೆ ಮಾಡುವುದರಿಂದ ನಿಮಗೆ ಅತಿ ಸಾರ ಮತ್ತು ಹೊಟ್ಟೆಗೆ ಸಂಬಂದಿಸಿದ ಕಾಯಿಲೆಗಳು ಬರಬಹುದು. ಐಸ್ ಗುಣಮಟ್ಟವೂ ಆರೋಗ್ಯ ಕೆಡಲು ಕಾರಣವಾಗಬಹುದು. ಶೀತ, ಗಂಟಲು ನೋವು ಉಂಟಾಗಬಹುದು.

ಗ್ಯಾಸ್ಟ್ರೋಎಂಟರಾಲಜಿಸ್ಟ್‌ಗಳು ಮತ್ತು ಇತರ ತಜ್ಞರು ರಸ್ತೆಬದಿಯ ಕಬ್ಬು ಮತ್ತು ಇತರ ಜ್ಯೂಸ್‌ಗಳನ್ನು ಕುಡಿಯದಂತೆ ಎಚ್ಚರಿಕೆ ನೀಡುತ್ತಾರೆ. ಇಂಥಾ ಅಶುಚಿಯಾದ ಆಹಾರ ಮತ್ತು ಪಾನೀಯಗಳಿಂದ ಹೆಪಟೈಟಿಸ್ A, E ಮತ್ತು ಇತರ ಜಠರಗರುಳಿನ ತೊಂದರೆಗಳನ್ನು ಉಂಟಾಗಬಹುದು ಎಂದು ಹೇಳುತ್ತಾರೆ.

ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಸಮೀರ್ ಪಾಟೀಲ್ ಮಾಹಿತಿ ನೀಡಿ, ಕಲುಷಿತ ನೀರು ಅಥವಾ ಮಂಜುಗಡ್ಡೆಯಿಂದ ತಯಾರಿಸಿದ ಕಬ್ಬು ಮತ್ತು ಹಣ್ಣಿನ ರಸಗಳು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಬೇಸಿಗೆ ಆರಂಭವಾಗುತ್ತಿದ್ದಂತೆ ಹಣ್ಣುಗಳನ್ನು ರಸವನ್ನು ಕುಡಿಯಬೇಕು ಅನಿಸುವುದು ಸಹಜ. ಆದರೆ ಅನೈರ್ಮಲ್ಯದಿಂದ ತಯಾರಾದ ಬೀದಿಬದಿಯ ಜ್ಯೂಸ್‌ಗಳನ್ನು ಸೇವಿಸುವುದು ಸೂಕ್ತವಲ್ಲ ಎಂದಿದ್ದಾರೆ.

Related post

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ನ್ಯೂಸ್ ಆ್ಯರೋ‌ : ನಾವು ಪ್ರೀತಿಸುವ ಜೀವಗಳು ನಮ್ಮನ್ನು ದೂರ ಮಾಡಿದರೆ, ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ಅದರಿಂದಾಗುವ ನೋವು ಅಪಾರ. ಅದರಲ್ಲೂ ಪ್ರೇಯಸಿ ದೂರ ಮಾಡುತ್ತಿದ್ದರೆ ಅದನ್ನು ಸಹಿಸಲು…
ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ – ಸಿಸಿಟಿವಿಯಲ್ಲಿ ಘೋರ ಕೃತ್ಯ ಸೆರೆ, ವಿಡಿಯೋ ವೈರಲ್…!!

ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ…

ನ್ಯೂಸ್ ಆ್ಯರೋ : ಮಲಗುವ ವಿಚಾರಕ್ಕೆ ಉಂಟಾದ ಜಗಳದ ಹಿನ್ನೆಲೆಯಲ್ಲಿ ಸೂರತ್‌ನ ವ್ಯಕ್ತಿಯೊಬ್ಬ ತನ್ನ ಮಗಳಿಗೆ 25 ಬಾರಿ ಇರಿದು ಕೊಂದಿರುವ ಘಟನೆ ನಡೆದಿದೆ. ಇಡೀ ಕೃತ್ಯ ಸಿಸಿಟಿವಿಯಲ್ಲಿ…
ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ ಕಾರಣಿಕದಿಂದಾಗಿಯೇ ಇಲ್ಲಿಗೆ ಬಂದೆ ಎಂದ ಗುಳಿಕೆನ್ನೆ ಬೆಡಗಿ..

ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ…

ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ಬೆಡಗಿ, ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅವರು ಬುಧವಾರ ಮಂಗಳೂರು ಸಮೀಪದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ಸ್ಥಳಕ್ಕೆ ಭೇಟಿ…

Leave a Reply

Your email address will not be published. Required fields are marked *