
ಕರಿಕೋಟು ಧರಿಸಿದ ನಟಿ ವೈಷ್ಣವಿ ಗೌಡ ತಾಯಿ – ಭಾನು ರವಿಕುಮಾರ್ ಸಾಧನೆಗೆ ಪ್ರೀತಿಯ ಮಗಳ ಮೆಚ್ಚುಗೆ
- ಮನರಂಜನೆ
- March 20, 2023
- No Comment
- 161
ನ್ಯೂಸ್ ಆ್ಯರೋ : ಧಾರಾವಾಹಿ ನಟಿ ವೈಷ್ಣವಿ ಗೌಡ ಅವರ ತಾಯಿ ಭಾನು ರವಿಕುಮಾರ್ ಅವರು ವಕೀಲರಾಗಿ ಬಡ್ತಿ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈಷ್ಣವಿ ಅವರು ಈ ವಿಚಾರವನ್ನು ಹಂಚಿಕೊಂಡು, ತಾಯಿಯ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ತಾಯಿ ಜತೆ ನಿಂತುಕೊಂಡಿರುವ ಫೋಟೋವನ್ನು ವೈಷ್ಣವಿ ಹಂಚಿಕೊಂಡಿದ್ದಾರೆ. ಅದರಲ್ಲಿ “ಮನೆಯಲ್ಲೀಗ ವಕೀಲರು. ನೀವು ಯಾವಾಗಲೂ ವಯಸ್ಸು ಕೇವಲ ನಂಬರ್ ಎಂದು ಕಲಿಸಿದ್ದೀರಿ. ಈ ವಯಸ್ಸಿನಲ್ಲಿ ನೀವು ಏನು ಸಾಧನೆ ಮಾಡಿದ್ದೀರೋ ನಾನು ಹೆಮ್ಮೆ ಪಡುವೆ” ಎಂದು ಬರೆದುಕೊಂಡಿದ್ದಾರೆ. ಪೋಸ್ಟ್ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ತಾಯಿ ಭಾನು ರವಿಕುಮಾರ್ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಈ ಹಿಂದೆ ತಾಯಿ ಬಗ್ಗೆ ಮಾತನಾಡಿದ್ದ ವೈಷ್ಣವಿ ಗೌಡ ಅವರು, “ನನ್ನ ತಾಯಿ ಯೋಗ ಮಾಡಿ ತೂಕ ಇಳಿಸಿಕೊಂಡಿದ್ದಾರೆ” ಎಂದು ಹೇಳಿದ್ದರು.
ಈ ಹಿಂದೆ ವೈಷ್ಣವಿ ಗೌಡ ಅವರ ಮದುವೆ ವಿಚಾರ ಸುದ್ದಿಯಾಗಿತ್ತು. ಆದಾದ ಕೆಲ ದಿನಗಳ ನಂತರ ಅವೆಲ್ಲವನ್ನೂ ಮರೆತು ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಮುನ್ನಡೆಸುತ್ತಾ ಹೋಗುತ್ತಿದ್ದಾರೆ. ಇದೀಗ ಹೊಸ ಧಾರವಾಹಿಯ ಚಿತ್ರೀಕರಣದಲ್ಲೂ ಬ್ಯುಸಿಯಾಗಿದ್ದಾರೆ.
ಅಂದಹಾಗೆ ಬಿಗ್ ಬಾಸ್ ಕನ್ನಡ ಸೀಸನ್ 8 ಶೋ ಮೂಲಕ ಜನರ ಮನಸ್ಸು ಗೆದ್ದಿದ್ದ ವೈಷ್ಣವಿ ಗೌಡ ಅವರು ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಸೀತಾ ರಾಮಂ’ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ ಗಗನ್ ಚಿನ್ನಪ್ಪ ನಾಯಕನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಧಾರಾವಾಹಿ ಪ್ರೋಮೋಗಳು ಗಮನ ಸೆಳೆದಿದ್ದು ಆದಷ್ಟು ಬೇಗ ಸೀರಿಯಲ್ ಪ್ರಸಾರ ಆಗಲಿವೆಯಂತೆ.
ಕೆಲವು ದಿನಗಳ ಹಿಂದೆ ವೈಷ್ಣವಿ ಗೌಡ ಅವರು ಕೈಮೇಲೆ ‘ದಿ ರೈಸಿಂಗ್ ವುಮನ್ ಚಿಹ್ನೆ’ಯನ್ನು ಟ್ಯಾಟೂ ಹಾಕಿಸಿಕೊಂಡು, ತಾಯಿ ಕೈಯಿಂದ ಬೈಸಿಕೊಂಡಿದ್ದರು. ತಾಯಿಗೆ ಸರ್ಪ್ರೈಸ್ ನೀಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವೇಳೆ ಟ್ಯಾಟೂ “ಸ್ವಲ್ಪವೂ ಚೆನ್ನಾಗಿಲ್ಲ” ಎಂದು ಭಾನು ಅವರು ಹೇಳಿದ್ದರು.