ನಟಿ ತನಿಷಾ ಕುಪ್ಪಂಡ ಅವರಿಗೆ ನ್ಯೂಡ್ ಫಿಲಂ ಮಾಡ್ತೀರಾ ಎಂದ ಯೂಟ್ಯೂಬರ್ – ನಟಿ ಹೇಳಿದ್ದೇನು? ವೈರಲ್ ವಿಡಿಯೋದಲ್ಲಿ ಏನಿದೆ?

ನಟಿ ತನಿಷಾ ಕುಪ್ಪಂಡ ಅವರಿಗೆ ನ್ಯೂಡ್ ಫಿಲಂ ಮಾಡ್ತೀರಾ ಎಂದ ಯೂಟ್ಯೂಬರ್ – ನಟಿ ಹೇಳಿದ್ದೇನು? ವೈರಲ್ ವಿಡಿಯೋದಲ್ಲಿ ಏನಿದೆ?

ನ್ಯೂಸ್ ಆ್ಯರೋ : ಸೀರಿಯಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ತನಿಷಾ ಕುಪ್ಪಂಡ (Tanisha Kuppanda) ಅವರಿಗೆ ಯೂಟ್ಯೂಬರ್‌, ನೀವು ನ್ಯೂಡ್ ಫಿಲಂ ಮಾಡ್ತೀರಾ ಅಂತ ಪ್ರಶ್ನೆ ಕೇಳಿ ಕೆರಳಿಸಿದ್ದಾನೆ. ನ್ಯೂಡ್ ಮಾಡೋದು ಪೋರ್ನ್ ಸ್ಟಾರ್ ಮಾಡ್ತಾರೆ ಅಂತ ನಟಿ ತನಿಷಾ ಗರಂ ಆಗಿದ್ದು ಸಂದರ್ಶನ ಬಿಟ್ಟು ತೆರಳಿದ್ದಾರೆ.‌ ಜೊತೆಗೆ ಇತರರು ಸೇರಿಕೊಂಡು ಯೂಟ್ಯೂಬರ್ ಗೆ ಚಳಿ ಬಿಡಿಸಿರುವ ವಿಡಿಯೋ ವೈರಲ್ ಆಗಿದೆ.

ಮಂಗಳ ಗೌರಿ ಮದುವೆ ಧಾರಾವಾಹಿ ಮೂಲಕ ಪ್ರೇಕ್ಷಕರ ಮನಗೆದ್ದ ನಟಿ ತನಿಷಾ ಕುಪ್ಪಂಡ ಅವರು ಇದೀಗ ‘ಪೆಂಟಗನ್’ ಸಿನಿಮಾದಲ್ಲಿ ಹಾಟ್‌ ಆಗಿ, ಬೋಲ್ಡ್ ಲುಕ್‌ನಲ್ಲಿ ಲಿಪ್‌ಲಾಕ್‌, ಬ್ಯಾಕ್‌ಲೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಐದು ಕತೆಗಳಿರುವ, ಐದು ಮಂದಿ ನಿರ್ದೇಶಕರಿಂದ ಮೂಡಿಬಂದಿರುವ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸದ್ಯ ಈಗ ನಟಿ ತನಿಷಾ ಮುಜುಗರದ ಸನ್ನಿವೇಶವನ್ನು ಎದುರಿಸಿದ್ದಾರೆ. ಹಾಗೂ ಯೂಟ್ಯೂಬರ್‌ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ನಟಿ ತನಿಷಾ ( Tanisha Kuppanda) ಅವರಿಗೆ ಯೂಟ್ಯೂಬರ್‌, ನೀವು ನ್ಯೂಡ್ ಫಿಲಂ ಮಾಡ್ತೀರಾ ಅಂತ ಪ್ರಶ್ನೆ ಕೇಳಿ ಕೆರಳಿಸಿದ್ದಾನೆ. ನ್ಯೂಡ್ ಮಾಡೋದು ಪೋರ್ನ್ ಸ್ಟಾರ್ ಮಾಡ್ತಾರೆ ಅಂತ ನಟಿ ತನಿಷಾ ಗರಂ ಆಗಿದ್ದಾರೆ.

ಏಪ್ರಿಲ್ 7ರಂದು ತನಿಷಾ ನಟನೆಯ ಪೆಂಟಗನ್ ಸಿನಿಮಾ ರಿಲೀಸ್ ಆಗುತ್ತಿದ್ದು ನಟಿಯ ಇಂಟರ್ವೀವ್ ಮಾಡಲು ಬಂದಿದ್ದ ಯೂಟ್ಯೂಬರ್‌ ಈ ರೀತಿ ಪ್ರಶ್ನೆ ಕೇಳಿ ಪೇಜೆಗೆ ಸಿಲುಕಿದ್ದಾನೆ. ಈ ವೇಳೆ ನಟಿ ಗರಂ ಆಗಿದ್ದು ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಮಾತ್ರಕ್ಕೆ ನ್ಯೂಡ್ ಫಿಲಂ ಮಾಡೋಕೆ ಆಗುತ್ತಾ? ನಾವು ಪೋರ್ನ್ ಸ್ಟಾರ್ ಅಲ್ಲ. ಮಾತನಾಡುವ ಮುನ್ನ ಎಚ್ಚರ ಇರಲಿ. ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಯಾವ ನಟಿಯೂ ಪೋರ್ನ್ ಮಾಡಿಲ್ಲ. ಈ ರೀತಿ ಅಸಭ್ಯವಾಗಿ ಮಾತನಾಡಬೇಡಿ ಎಂದಿದ್ದಾರೆ.

ಇನ್ನು ಕಾಮನ ಬಿಲ್ಲು ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದ ನಟಿ ತನಿಷಾಗೆ ಬೆತ್ತಲೆ ಸಿನಿಮಾ ಮಾಡ್ತೀರಾ ಅಂತ ಯೂಟ್ಯೂಬರ್‌ ಕೇಳಿದ್ದು ಅನೇಕರನ್ನು ಕೆರಳಿಸಿದೆ. ಈ ವೇಳೆ ತನಿಷಾ ಹಾಗು ಚಿತ್ರತಂಡ ಯೂಟ್ಯೂಬರ್‌ ಮೇಲೆ ಆಕ್ರೊಶ ವ್ಯಕ್ತಪಡಿಸಿದ್ದು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *