ಬಿಗ್ ಬಾಸ್ ಸಾನ್ಯಾ ಅಯ್ಯರ್ ಗೆ ಪುತ್ತೂರು ಕಂಬಳದಲ್ಲಿ ಕಪಾಳಮೋಕ್ಷ – ಜುಟ್ಟು ಹಿಡಿದೆಳೆದವನಿಗೆ ಸಾರ್ವಜನಿಕರಿಂದ ಧರ್ಮದೇಟು..!!

ಬಿಗ್ ಬಾಸ್ ಸಾನ್ಯಾ ಅಯ್ಯರ್ ಗೆ ಪುತ್ತೂರು ಕಂಬಳದಲ್ಲಿ ಕಪಾಳಮೋಕ್ಷ – ಜುಟ್ಟು ಹಿಡಿದೆಳೆದವನಿಗೆ ಸಾರ್ವಜನಿಕರಿಂದ ಧರ್ಮದೇಟು..!!

ನ್ಯೂಸ್ ಆ್ಯರೋ : ಕನ್ನಡದ ಖಾಸಗಿ ಚಾನೆಲ್ ವೊಂದರ ಪುಟ್ಟ ಗೌರಿ ಧಾರಾವಾಹಿ ಮೂಲಕ ನಟನೆಗಿಳಿದ ಸಾನ್ಯಾ ಅಯ್ಯರ್ ಅನಂತರ ಡ್ಯಾನ್ಸಿಂಗ್ ಸ್ಟಾರ್ ಮೂಲಕ ಮನೆಮಾತಾದರು. ಅನಂತರ ವೈಕ್ತಿಕ ಜೀವನದ ಕೆಲವು ಗಲಾಟೆಗಳಿಂದ ಸುದ್ದಿಯಿದ್ದರು. ಇತ್ತೀಚೆಗೆ ಬಿಗ್‌ಬಾಸ್ 9 ನಲ್ಲಿ ಭಾಗವಹಿಸಿ, ರೂಪೇಶ್ ಶೆಟ್ಟಿಯೊಂದಿಗೆ ಪ್ರೀತಿಯಲ್ಲಿದ್ದಾರೆ ಎನಿಸಿಕೊಂಡಿದ್ದರು. ಸದ್ಯ, ಇದೀಗ ಮತ್ತೆ ಪುತ್ತೂರಿನಲ್ಲಿ ನಡೆದ 30 ವರ್ಷದ ಕಂಬಳದಲ್ಲಿ ನಡದ ಗಲಾಟೆಯಿಂದ ಸುದ್ದಿಯಲ್ಲಿದ್ದಾರೆ.

ಹೌದು, ಪುತ್ತೂರಿನಲ್ಲಿ ಇತ್ತೀಚೆಗಷ್ಟೇ 30ನೇ ವರ್ಷದ ಕಂಬಳ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಾನ್ಯಾ ಅಯ್ಯರ್, ಅವರ ತಾಯಿ ದೀಪಾ ಹಾಗೂ ಬೆಂಗಳೂರಿನ ಸ್ನೇಹಿತರ ಜೊತೆ ಆಗಮಿಸಿದ್ದರು. ಕಂಬಳ ವೀಕ್ಷಿಸುತ್ತಿದ್ದ ವೇಳೆ ಸೆಲ್ಪಿಗಾಗಿ ವೇದಿಕೆಯೇರಿ ಬಂದ ಅಭಿಮಾನಿಯೊಬ್ಬ, ಸಾನ್ಯಾರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಸಾನ್ಯಾ ತಾಯಿ ಹಾಗೂ ಸ್ನೇಹಿತರು ವೇದಿಕೆಯ ಮೇಲೆ ಗಲಾಟೆ ಮಾಡಿದ್ದಾರೆ.

ಸಾನ್ಯಾ ಅಯ್ಯರ್ ಭಾನುವಾರ ಕಂಬಳವನ್ನು ಉದ್ಘಾಟಿಸಿ ಕೊಂಚ ವಿರಾಮದ ನಂತರ, ಮತ್ತೆ ತಾಯಿ ಹಾಗೂ ಸ್ನೇಹಿತರೊಂದಿಗೆ ವೇದಿಕೆಯಲ್ಲಿ ಕುಳಿತು ಕಂಬಳ ವೀಕ್ಷಿಸುತ್ತಿದ್ದರು. ಈ ವೇಳೆ ಇಬ್ರಾಹಿಂ ಹೆಸರಿನ ಅಭಿಮಾನಿಯೊಬ್ಬ ಸೆಲ್ಫಿ ವೇದಿಕೆಯೇರಿ ಬಂದವನೇ ಸಾನ್ಯಾರ ಜುಟ್ಟು ಹಿಡಿದೆಳೆದು, ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದಾಗಿ ಸಾನ್ಯಾ ಹಾಗೂ ಇಬ್ರಾಹಿಂ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪದಿಂದ ಸಾನ್ಯಾ ಆತನ ಕಪಾಳಕ್ಕೆ ಭಾರಿಸಿದ್ದಾನೆ. ಆಕ್ರೋಶಿತಗೊಂಡ ಇಬ್ರಾಹಿಂ ಸಾನ್ಯಾರಿಗೂ ಕಪಾಳಮೋಕ್ಷ ಮಾಡಿದ್ದಾನೆ ಎನ್ನಲಾಗಿದೆ.

Video credit : Asianet Suvarna News

ವೇದಿಕೆಯಲ್ಲಿ ಸಾನ್ಯಾರಿಗೆ ಆದ ಅವಮಾನವನ್ನು ಕಂಡು ಆಕ್ರೋಶಗೊಂಡ ಸಾನ್ಯಾ ತಾಯಿ ಹಾಗೂ ಸ್ನೇಹಿತರು ವೇದಿಕೆಗೆ ಬಂದು ಆಯೋಜಕರೊಂದಿಗೆ ಗಲಾಟೆ ಮಾಡಿದ್ದಾರೆ. ಅಸಭ್ಯವಾಗಿ ವರ್ತಿಸಿದ ಇಬ್ರಾಹಿಂಗೆ ಸ್ಥಳಿಯರು ಧರ್ಮದೇಟು ನೀಡಿದ್ದಾರೆ. ಕೆಲ ಹೊತ್ತು ಕಂಬಳ ಆಯೋಜನೆಗೊಂಡಿದ್ದ ಸುತ್ತಮುತ್ತಲಿನ ಪರಿಸರ ಉದ್ವಿಗ್ನಗೊಂಡಿತ್ತು. ಕೊನೆಗೆ ಆಯೋಜಕರು ಹಾಗೂ ಸಾನ್ಯಾ ತಾಯಿಯೊಂದಿಗೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಲಾಗಿದೆ. ಈ ಬಗ್ಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ವರದಿಗಳ ಪ್ರಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಾನ್ಯಾ ಐ ಲವ್ ಯು ಪುತ್ತೂರು ಎಂದು ಹೇಳಿದ್ದರಂತೆ ,ಇದನ್ನು ಕೇಳಿಸಿಕೊಂಡು ಇಬ್ರಾಹಿಂ ಐ ಲವ್ ಯು ಸಾನ್ಯಾ ಎಂದು ಅರಚಾಡುತ್ತಿದ್ದನಂತೆ. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಆತ ಸಾನ್ಯಾ ಒಳಿ ಓಡೋಡಿ ಬಂದು ಅಸಭ್ಯವಾಗಿ ವರ್ತಿಸಿದ್ದಾನಂತೆ. ವೇದಿಕೆಯಿಂದ ಸಾನ್ಯಾ ಇಳಿಯುತ್ತಿದ್ದಂತೆ ಕೈ ಹಿಡಿದು ಎಳೆದಾಡಿದ್ದಾನೆ. ಕುಡಿತದ ನಶೆಯಲ್ಲಿದ್ದ ಇಬ್ರಾಹಿಂನಿಗೆ ಸ್ಥಳಿಯರು ಧರ್ಮದೇಟು ನೀಡಿ ಕಾರ್ಯಕ್ರಮದಿಂದ ಹೊರದಬ್ಬಿದ್ದಾರೆ ಎಂದು ತಿಳಿದು ಬಂದಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *